ಬೆಂಗಳೂರು : ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ನಿದ್ದೆಯಲ್ಲಿದ್ದ 8 ಚೀಫ್ ಇಂಜಿನಿಯರ್ (Chief Engineer) ಸೇರಿ ವಿವಿಧ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಚಳಿಬಿಡಿಸಿದ್ದಾರೆ. ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು (Lokayukta Police) ದಾಳಿ ಮಾಡಿದ್ದು, ಕಂತೆ ಕಂತೆ ಹಣ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೆಜಿಗಟ್ಟಲೆ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
14 ಜನ ಅಧಿಕಾರಿಗಳು ಬಸವೇಶ್ವರ ನಗರದಲ್ಲಿರುವ DPAR Chief Engineer ನಂಜುಂಡಪ್ಪ ಅವರ ಮನೆಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಚೀಫ್ ಇಂಜಿನಿಯರ್ ನಂಜುಂಡಪ್ಪ ಅವರು ಅಧಿಕಾರಿಗಳು ದಾಳಿ ಮಾಡಿದ್ದಾಗ ಮನೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : ಕಡಿಮೆ ಬೆಲೆಯಲ್ಲಿ ವಿವಿಧ ಪ್ಲಾನ್ ಪರಿಚಯಿಸಿದ BSNL ; ಡಾಟಾ ಎಷ್ಟಿರುತ್ತೇ.?
ಡಿಪಿಎಆರ್ ಚೀಫ್ ಇಂಜಿನಿಯರ್ ಮನೆಯಲ್ಲಿ ಮದ್ಯದ ಬಾಟಲ್ಗಳು ಪತ್ತೆಯಾದ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ (Excise Department) ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಎರಡು ಜೀಪ್ಗಲ್ಲಿ ಮನೆಗೆ ಬಂದು ಪರಿಶೀಲನೆ ಮಾಡಿದ್ದರು. ಮಿತಿಗಿಂತ ಹೆಚ್ಚಾಗಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಲೋಕಾಯುಕ್ತ ದಾಳಿ ವೇಳೆ ಡಿಪಿಎಆರ್ ಚೀಫ್ ಇಂಜಿನಿಯರ್ ನಿವಾಸದಲ್ಲಿ ಸಾಕಷ್ಟು ಆಸ್ತಿ ಪತ್ತೆಯಾಗಿದೆ. ಬರೋಬ್ಬರಿ 51.38 ಲಕ್ಷ ರೂ. ಮೌಲ್ಯದ 841.49 ಗ್ರಾಂ ಚಿನ್ನ ಪತ್ತೆಯಾಗಿದೆ. 4.66 ಲಕ್ಷ ಮೌಲ್ಯದ 5 ಕೆಜಿ 936 ಗ್ರಾಂ ಬೆಳ್ಳಿ ಪತ್ತೆಯಾಗಿದೆ. 3,91,079 ರೂ. ನಗದು ಹಾಗೂ 60 ಸಾವಿರ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಇದನ್ನು ಓದಿ : Astrology : ಮಾರ್ಚ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಒಟ್ಟಾರೆಯಾಗಿ 60,56,557 ರೂ. ಮೌಲ್ಯದ ವಸ್ತುಗಳು ಹಾಗೂ ನಗದು ಪತ್ತೆಯಾಗಿದೆ. ಇದರ ಜೊತೆಗೆ, ಸ್ತಿರಾಸ್ತಿಯ ಭಾಗವಾಗಿ 39 ಲಕ್ಷ ರೂ. ಮೌಲ್ಯದ ನಾಲ್ಕು ಕಾರುಗಳು ಹಾಗೂ 5 ಕೋಟಿ ಮೌಲ್ಯದ 2 ಮನೆಗಳು ಪತ್ತೆಯಾಗಿವೆ.
ರಾಜ್ಯದಾದ್ಯಂತ 8 ಅಧಿಕಾರಿಗಳ ಮನೆಗಳ ಮೇಲೆ ನಡೆದ ಲೋಕಾಯುಕ್ತ ದಾಳಿಯ ವಿವರ :
- ಡಿಪಿಎಆರ್ (DPAR) ಚೀಫ್ ಇಂಜಿನಿಯರ್ ಟಿಡಿ ನಂಜುಂಡಪ್ಪ.
- ಕ್ವಾಲಿಟಿ ಕಂಟ್ರೋಲ್ ಹಾಗೂ Quality Assurance ನ ಬಿಬಿಎಂಪಿ ಎಕ್ಸೀಕ್ಯೂಟಿವ್ ಇಂಜಿನಿಯರ್ ಹೆಚ್.ಬಿ ಕಲ್ಲೇಶಪ್ಪ.
- ಕೋಲಾರ ಟೌನ್ ಬೆಸ್ಕಾಂ AEE ಜಿ. ನಾಗರಾಜ್.
- ಕಲಬುರುಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ Unit ನ ಅಧಿಕಾರಿ ಜಗನ್ನಾಥ.
- ದಾವಣಗೆರೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ Distic Statical ಆಧಿಕಾರಿ ಜಿ.ಎಸ್. ನಾಗರಾಜು.
- ತುಮಕೂರು ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚೀಫ್ ಮೆಡಿಕಲ್ ಆಫೀಸರ್ (CMO) ಡಾ.ಜಗದೀಶ್.
- ಬಾಗಲಕೋಟೆ ಜಿಲ್ಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ FDA ಮಲ್ಲಪ್ಪ ಸಾಬಣ್ಣ.
- ವಿಜಯಪುರ ಹೌಸಿಂಗ್ ಬೋರ್ಡ್ FDA ಶಿವಾನಂದ್ ಶಿವಶಂಕರ್ ಕಂಬಾವಿ.
ಇದನ್ನು ಓದಿ : ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದ ಸ್ಯಾಂಡಲ್ ವುಡ್ Actress.!
ಹೀಗೆ ಒಟ್ಟು 8 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಎಲ್ಲ ವಸ್ತುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನ ಡಿಪಿಎಆರ್ (DPAR) ಚೀಫ್ ಇಂಜಿನಿಯರ್ ಮನೆಯಲ್ಲಿನ ವಸ್ತುಗಳ ಮಾಹಿತಿ ಮಾತ್ರ ಲಭ್ಯವಾಗಿದೆ.
Recent Comments