ಡೆಸ್ಕ್ : ಹಿರಿಯ ಅಜ್ಜಿಯೋಬ್ಬಳು ತನ್ನ ಮುದ್ದಿನ ನಾಯಿ (Dog) ಹುಟ್ಟುಹಬ್ಬದಂದು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು, ಸದ್ಯ ಸದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗತ್ತಿನಲ್ಲಿ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಜನರಿಗೇನು ಕಮ್ಮಿ ಇಲ್ಲ ಬಿಡಿ, ಕೆಲವರು ಬೆಕ್ಕಿನ ಮೇಲೆ ಪ್ರೀತಿ ಇದ್ದರೆ, ಇನ್ನು ಕೆಲ ಜನರಿಗೆ ನಾಯಿಯ ಮೇಲೆ ಪ್ರೀತಿ. ಮತ್ತೇ ಕೆಲವರು ಗಿಳಿ, ಪಾರಿವಾಳ, ಮೊಲ ಸೇರಿ ಅನೇಕ ಪ್ರಾಣಿಗಳನ್ನು ಸಾಕಿ ಪ್ರೀತಿಸುತ್ತಾರೆ.
ಮತ್ತೇ ಕೆಲವರು ಎಮ್ಮೆ, ಎತ್ತು, ಆಕ್ಕಳು ಮತ್ತು ಕುದುರೆ ಸಾಕುತ್ತಾರೆ. ಈ ಸಾಕು ಪ್ರಾಣಿಗಳನ್ನು ಅವರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿಯೇ ಪ್ರೀತಿಸುತ್ತಾರೆ ಎಂದರೆ ತಪ್ಪಾಗಲಾರದು.
ಇದನ್ನು ಓದಿ : Video : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು?
ಇನ್ನು ಸಾಮಾನ್ಯವಾಗಿ ಶ್ವಾನ/ನಾಯಿಯನ್ನು ಎಲ್ಲರು ಸಾಕುತ್ತಾರೆ ಮತ್ತರು ಅಷ್ಟೆ ಪ್ರೀತಿಯಿಂದ ಇರುತ್ತಾರೆ. ಮನೆಯಲ್ಲಿರುವ ನಾಯಿ ಕುಟುಂಬ ಸದಸ್ಯರೆಲ್ಲರಿಗೂ ಆಪ್ತ ಸ್ನೇಹಿತವಾಗಿರುತ್ತದೆ. ಮತ್ತು ಪುಟ್ಟ ಮರಿಯೊಂದನ್ನು ತಂದು ಸಾಕಿದರೆ ಮನೆಯವರು ಮುದ್ದಾದ ನಾಯಿಯ ಹುಟ್ಟುಹಬ್ಬವನ್ನು (dog birthday) ಸಹ ಆಚರಿಸಿ ಖುಷಿ ಪಡುತ್ತಾರೆ.
ಹೀಗೆಯೇ ಇಲ್ಲೋಬ್ಬ ಹಿರಿಯಜ್ಜಿ ತನ್ನ ಮುದ್ದಾದ ನಾಯಿಯ ಹುಟ್ಟುಹಬ್ಬ (dog birthday) ವನ್ನು ಅದ್ದೂರಿಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಅಜ್ಜಿ (grand mother) ಯೊಬ್ಬರು ಮನೆಯ ಸದಸ್ಯರಂತೆ ಇರುವ ತನ್ನ ಪ್ರೀತಿಯ ನಾಯಿಯ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.
@buitenfebieden ಎಂಬ ಹೆಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಕುಳಿತುಕೊಂಡಿದ್ದಾರೆ. ಅವರ ಮುಂದೆ ಶ್ವಾನವೊಂದು ಕುಳಿತುಕೊಂಡಿದ್ದು ಟೇಬಲ್ ಮೇಲೆ ಕೇಕ್ ಇಡಲಾಗಿದೆ. ಆದರೆ ಶ್ವಾನ ಮಾತ್ರ ಕೇಕ್ ನೋಡುವ ಬದಲು ಅಜ್ಜಿಯನ್ನೇ ದಿಟ್ಟಿಸಿ ನೋಡುತ್ತಿದೆ.
ವಿಡಿಯೋದಲೇನಿದೆ :
ರಾತ್ರಿ ಸಮಯದಲ್ಲಿ ಓರ್ವ ಅಜ್ಜಿ ಕುಳಿತ್ತಿದ್ದಾಳೆ. ಅವಳ ಮುಂದೆ ಟೇಬಲ್ ಇದ್ದು, ಅದರ ಮೇಲೆ ಕೇಕ್ ಇಡಲಾಗಿದೆ. ಕೇಕ್ ಮೇಲೆ ಮೇಣದ ಬತ್ತಿಯೋದು ಉರಿಯುತ್ತಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ.
ಅಜ್ಜಿಯ ಮುಂದಿರುವ ಟೇಬಲ್ ಬದಿಯಲ್ಲಿ ನಾಯಿಯೊಂದು ನಾಲಿಗೆ ತೆಗೆದು ನಿಂತಿದೆ. ಇದನ್ನು ನೋಡಿದರೆ ತಳಿಯುತ್ತೇ ಈ ದಿನ ಆ ಪ್ರೀತಿಯ ನಾಯಿಯ ಹುಟ್ಟುಹಬ್ಬ ಇರಬೇಕೆಂದು. ಈ ವೇಳೆ ಹಿರಿಯಜ್ಜಿ ತನ್ನ ಪ್ರೀತಿಯ ನಾಯಿಗೆ ಅಕ್ಕರೆಯಿಂದ “Happy birth day” ಅಂತ ಚಪ್ಪಾಳೆ ತಟ್ಟುತ್ತಿದಾಳೆ. ಇದನ್ನು ವಿಡಿಯೋದಲ್ಲಿ ನೋಡಬಹುದು.
ಇಷ್ಟು ಪ್ರೀತಿಯಿಂದ ಅಜ್ಜಿ ತನ್ನ ಹುಟ್ಟುಹಬ್ಬ ಆಚರಿಸುತ್ತಿದರೆ, ನಾಯಿ ಮಾತ್ರ ಮುಗ್ದ ಮುಖದಿಂದ ಅಜ್ಜಿಯನ್ನೇ ನೋಡುತ್ತಿರುವ ಹೃದಯಸ್ಪರ್ಶಿ ದೃಶ್ಯವನ್ನುವಿಡಿಯೋದಲ್ಲಿ ನೋಡನಹುದು.
ಮೇ 12 ರಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಇಲ್ಲಿಯವರೆಗೆ 5.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆದ ಭಾವದಲ್ಲಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ವಿಡಿಯೋ ನೋಡಿ :
A grandma celebrating the birthday of her dog. The dog didn’t even look at the food, the eyes were all on grandma.. 🥺 pic.twitter.com/J6FDwsUeyE
— Buitengebieden (@buitengebieden) May 12, 2025