ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ದೇಹದಲ್ಲಿ 15 ಪ್ರೇತಾತ್ಮಗಳಿವೆ ಎಂದ ಜೋತಿಷಿ ಬಂಧನ.!

Astrologer arrested

ಬೆಂಗಳೂರು : ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌  ಓರ್ವರ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ ಎಂದು ಹೆದರಿಸಿ ಶಾಂತಿ ಪೂಜೆ ನೆಪದಲ್ಲಿ ಸುಮಾರು 6 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೋರ್ವ ಆಡುಗೋಡಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

ಹೀಗೆ ಹೆದರಿಸಿ ಶಾಂತಿ ಪೂಜೆ ನೆಪದಲ್ಲಿ ಸುಮಾರು 6 ಲಕ್ಷ ರೂ. ಕೀತ್ತುಕೋಮಡಿದ ವ್ಯಕ್ತಿಯನ್ನು ಕಲಬುರಗಿ ಮೂಲದ ಹೇಮಂತ್‌ (50) ಎಂದು ಗೊತ್ತಾಗಿದೆ.

ಇದನ್ನು ಓದಿ : Video : ನಾಯಿ ಹುಟ್ಟುಹಬ್ಬಕ್ಕೆ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ ಅಜ್ಜಿ.

ಜಾತಕದಲ್ಲಿ ದೋಷ ಹಾಗೂ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ ಎಂದು ಮಹಿಳಾ ಕಾನ್ಸ್‌ಟೇಬಲ್‌ ಓರ್ವರಿಗೆ ಹೆದರಿಸಿ, ಶಾಂತಿ ಪೂಜೆ ಸೇರಿದಂತೆ ವಿವಿಧ ಪೂಜೆಗಳ ನೆಪದಲ್ಲಿ 6 ಲಕ್ಷ ರೂ.ಗೂ ಅಧಿಕ ಹಣ ಪಡೆದು ಆರೋಪಿತ ವ್ತಕ್ತಿ ಪಡೆದುಕೊಂಡಿದ್ದಾನೆಂದು ಹೇಳಲಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನೊಂದ Lady constable  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 16 ರ ದ್ವಾದಶ ರಾಶಿಗಳ ಫಲಾಫಲ.!

ಮಹಿಳಾ ಕಾನ್ಸ್‌ಟೇಬಲ್‌ ಪೊಲೀಸ್‌ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಅಷ್ಟೆ ಅಲ್ಲಿದೆ ಮದುವೆ ಮಾಡಬೇಕೆಂದರೆ ಸಂಬಂಧ ಕೂಡಿ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಆಪ್ತರ ಸಲಹೆ ಮೇರೆಗೆ TV ಜಾಹೀರಾತಿನಲ್ಲಿ ಸಿಕ್ಕ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಜೋತಿಷಿಗೆ ಮಾತನಾಡಿದ್ದಾರೆ.

ಆಗ ಮಹಿಳಾ ಕಾನ್ಸ್‌ಟೇಬಲ್‌ ಅವರ ಜಾತಕ ತರಿಸಿಕೊಂಡು ಪರಿಶೀಲಿಸಿ ಜೋತಿಷಿ ಹೇಮಂತ್, ನಿನ್ನ ದೇಹದಲ್ಲಿ 15 ಪ್ರೇತಾತ್ಮಗಳಿವೆ, ಹೀಗಾಗಿ ನೀನು ಪದೇ ಪದೇ ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿರುವೆ ಎಂದಿದ್ದಾರೆ.

ಇದನ್ನು ಓದಿ : Covid : ಏಷ್ಯಾ ಖಂಡದಲ್ಲಿ ಮತ್ತೆ ಒಕ್ಕರಿಸಿದ ಕೋವಿಡ್.!

ಮದುವೆ ಸಹ ವಿಳಂಬಕ್ಕೂ ಈ ಸಮಸ್ಯೆಗಳೇ ಕಾರಣವಾಗಿದ್ದು, ಶಾಂತಿ ಪೂಜೆ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಬೆದರಿಸಿದ್ದಾನೆ.

 ಪೂಜೆ :

ಜೋತಿಷಿ ಮಾತಿನಿಂದ ಆತಂಕಗೊಂಡ ಮಹಿಳಾ ಕಾನ್ಸ್‌ಟೇಬಲ್‌, ಜಾತಕ ದೋಷ ಪರಿಹಾರಕ್ಕೆ ಪೂಜೆ ಮಾಡಿಸಲು ಒಪ್ಪಿಕೊಂಡಿದ್ದಾರೆ. ಅದರಂತೆ ಖಾಸಗಿ ಹೋಟೆಲ್‌ವೊಂದರಲ್ಲಿ ರೂಮ್‌ ಬಾಡಿಗೆಗೆ ಪಡೆದು 6 ಲಕ್ಷ ರೂ.ಗೂ ಅಧಿಕ ಹಣ ಪಡೆದು ಪೂಜೆ ಮಾಡಿಸಿದ್ದಾರೆ.

ಚೇತರಿಸದ ಆರೋಗ್ಯ :

ಮಹಿಳಾ ಕಾನ್ಸ್‌ಟೇಬಲ್‌ ಆರೋಗ್ಯದಲ್ಲಿ ಪೂಜೆ ಬಳಿಕವೂ ಸಹ ಯಾವುದೇ ವ್ಯತ್ಯಾಸ ಕಾಣಿಸದ ಹಿನ್ನಲೇಯಲ್ಲಿ ಜೋತಿಷಿ ಹೇಮಂತ್‌ಗೆ ಕರೆ ಮಾಡಿ ಹಣ ವಾಪಾಸ್‌ ನೀಡುವಂತೆ ಕೇಳಿದ್ದಾರೆ ಆದರೆ, ಆತ ಹಣ ವಾಪಾಸ್‌ ನೀಡಿಲ್ಲ ಜೋತೆಗೆ ಮೊಬೈಲ್ ಸ್ವಿಚ್ಡ್ ಆಫ್‌ ಮಾಡಿಕೊಂಡಿದ್ದಾನೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 17 ರ ದ್ವಾದಶ ರಾಶಿಗಳ ಫಲಾಫಲ.!

ಹೀಗಾಗಿ ವಂಚಿಸಿದ ಜೋತಿಷಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ಕಾನ್ಸ್‌ಟೇಬಲ್‌ ಆಡುಗೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮಹಿಳಾ ಕಾನ್ಸ್‌ಟೇಬಲ್‌ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇದೇ ರೀತಿ ಆರೋಪಿಯಿಂದ ಯಾರಾದರೂ ವಂಚನೆಗೆ ಒಳಗಾಗಿದ್ದಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top