Belagavi : 25 ವರ್ಷದ ಗರ್ಭಿಣಿ ಮಹಿಳೆಗೆ ಕೊರೊನಾ ವೈರಸ್ ಸೋಂಕು ದೃಢ.!

Belagavi

ಬೆಳಗಾವಿ : ಏಷ್ಯಾದಲ್ಲಿ ಮತ್ತೇ ಕೊರೊನಾ ತನ್ನ ಅರ್ಭಟ ಪ್ರಾರಂಭಿಸಿದ್ದು, ಇದರಲ್ಲಿ ಭಾರತವು ಸೇರಿದೆ. ಇದೀಗ ಕರ್ನಾಟಕದ ಬೆಳವಾಗಿಯಲ್ಲಿ ಒಂದು ಕೇಸ್‌ ದಾಖಲಾಗಿದೆ.

ಹೌದು ಬೆಳಗಾವಿ ನಗರದಲ್ಲಿ 25 ವರ್ಷದ ಗರ್ಭಿಣಿ ಮಹಿಳೆಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಈ ಗರ್ಭಿಣಿ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 22 ರ ದ್ವಾದಶ ರಾಶಿಗಳ ಫಲಾಫಲ.!

ಸಧ್ಯ ಈ ಕುರಿತು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದು, ಬೆಳಗಾವಿ ಜಿಲ್ಲೆಗೆ ಮಹಾಮಾರಿ ಕೊರೊನಾ ಅಂಟಿದ್ದು ಸ್ಪಷ್ಟವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

25 ವರ್ಷದ ಗರ್ಭಿಣಿ ಮಹಿಳೆಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಐ.ಪಿ‌ ಗಡಾದ್ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದು ಮಾಹಿತಿ ನೀಡಲಿದ್ದಾರೆ.

ಬೆಳಗಾವಿ ನಗರದಲ್ಲಿ ವಾಸಿಸುತ್ತಿದ್ದ ಈ ಮಹಿಳೆಗೆ ಸೋಂಕು ತಗುಲಿದ್ದು, ಈಕೆ ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಗೆ ಹೋಗಿ ಬಂದಿದ್ದರು ಎನ್ನಲಾಗಿದೆ.

ಇದನ್ನು ಓದಿ : Mobile : ವಿದ್ಯಾರ್ಥಿಯ ಪ್ಯಾಂಟ್ ಜೇಬಿನಲ್ಲಿದ್ದ ಸೆಲ್‌ಫೋನ್ ಬಾಂಬ್‌ನಂತೆ ಸ್ಫೋಟ್.!

ಬ್ಲೂಮ್‌ಬರ್ಗ್‌ ವರದಿ ಪ್ರಕಾರ, ಹಾಂಗ್‌ ಕಾಂಗ್‌ ಮತ್ತು ಸಿಂಗಾಪುರದ ಆರೋಗ್ಯ ಅಧಿಕಾರಿಗಳು ಕೋವಿಡ್‌ (Covid)  -19 ಪ್ರಕರಣಗಳಲ್ಲಿ ತೀವ್ರ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದೆ.

ಸದ್ಯ ಕೋವಿಡ್‌ -19 ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹಾಂಗ್‌ ಕಾಂಗ್‌ನ ಆರೋಗ್ಯ ರಕ್ಷಣಾ ಕೇಂದ್ರದ ಸಾಂಕ್ರಾಮಿಕ ರೋಗ ಶಾಖೆಯ ಮುಖ್ಯಸ್ಥ ಆಲ್ಬರ್ಟ್, ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನು ಓದಿ : Video : ನಾಯಿ ಹುಟ್ಟುಹಬ್ಬಕ್ಕೆ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ ಅಜ್ಜಿ.

ಅಲ್ಲದೇ ಮೇ 3 ರವರೆಗಿನ ವಾರದಲ್ಲಿ 31 ತೀವ್ರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಇತರ ಸೂಚಕಗಳು ವೈರಸ್‌‍ ಹರಡುತ್ತಿದೆ ಎಂದು ತೋರಿಸುತ್ತವೆ ಎಂದು ವರದಿಯಾಗಿದೆ.

ಕೋವಿಡ್‌‍-19 ಕೊಳಚೆ ನೀರಿನಲ್ಲಿ ಹೆಚ್ಚಿನ ಪತ್ತೆಯಾಗಿದ್ದು, ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಿಗೆ ಕೋವಿಡ್‌ ಲಕ್ಷಣಗಳೊಂದಿಗೆ ಹೆಚ್ಚಿನ ಜನರು ಹೋಗುತ್ತಿದ್ದಾರೆ.

ಇದನ್ನು ಓದಿ :  Video : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು?

ಏಷ್ಯಾದ ಮತ್ತೊಂದು ಜನದಟ್ಟಣೆಯ ನಗರವಾದ ಸಿಂಗಾಪುರವು ಸಹ ಹೆಚ್ಚಿನ ಕೋವಿಡ್‌ ಪ್ರಕರಣಗಳನ್ನು ವರದಿ ಮಾಡುತ್ತಿದೆ.

ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ಕೋವಿಡ್‌ ಪ್ರಕರಣಗಳು ಶೇ. 28 ರಷ್ಟು ಹೆಚ್ಚಾಗಿದ್ದು, ಹಿಂದಿನ ವಾರಕ್ಕಿಂತ ಸುಮಾರು 14,200 ಕ್ಕೆ ತಲುಪಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 16 ರ ದ್ವಾದಶ ರಾಶಿಗಳ ಫಲಾಫಲ.!

ಜನಸಂಖ್ಯೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರ ಪರಿಣಾಮವಾಗಿ ಈ ಹೊಸ ವೈರಸ್‌‍ ತಳಿಗಳು ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.

ಇದೇ ರೀತಿ ಚೀನಾ ಕೂಡ ಕೋವಿಡ್‌ನ ಹೊಸ ಅಲೆಯನ್ನು ಅನುಭವಿಸುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ, ಇದು ಕಳೆದ ಬೇಸಿಗೆಯ ಉತ್ತುಂಗವನ್ನು ತಲುಪುವ ನಿರೀಕ್ಷೆಯಿದೆ.

ಮೇ 4 ರವರೆಗಿನ ಐದು ವಾರಗಳಲ್ಲಿ ಚೀನಾದ ಜನರಲ್ಲಿ ಕೋವಿಡ್‌ ಪರೀಕ್ಷಾ ಪಾಸಿಟಿವ್‌ ದರವು ದ್ವಿಗುಣಗೊಂಡಿದೆ.

Leave a Comment

Your email address will not be published. Required fields are marked *

Scroll to Top