ಬೆಳಗಾವಿ : ಬೆಳಗಾವಿ (Belagavi) ನಗರಕ್ಕೆ ನೂತನ ಪೊಲೀಸ್ ಕಮಿಷನರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದೀಗ ರಾಜ್ಯ ಸರಕಾರ ಗುರುವಾರ ಕೆಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.
ಸಿಐಡಿಯ ಸೈಬರ್ ಕ್ರೈಮ್, ನಾಕ್ರೋಟಿಕ್ಸ್ ಡಿಐಜಿ ಆಗಿರುವ ಬೊರಸೆ ಭೂಷಣ್ ಗುಲಾಬ್ ರಾವ್ ಅವರನ್ನು ಬೆಳಗಾವಿ ನಗರ ಪೊಲೀಸ್ ಕಮಿಷನರ್ ಮತ್ತು ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ : Mudalagi : ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು.!
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಆಗಿ ಯಡಾ ಮಾರ್ಟಿನ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ. ಅರುಣ್ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ : Belagavi : ವೃದ್ದನ ಸಾವು ; ಸಾವಿಗೆ ಕೊರೊನಾದ ಶಂಕೆ.!
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹಾಗೂ ದಕ್ಷಿಣ ಕನ್ನಡ ಎಸ್ ಪಿ ಯತೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಗುಪ್ತಚರ ವಿಭಾಗದ ಡಿಐಜಿಯಾಗಿರುವ ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 27 ರ ದ್ವಾದಶ ರಾಶಿಗಳ ಫಲಾಫಲ.!
ಗುಪ್ತಚರ ವಿಭಾಗದ ಎಸ್ ಪಿ ಆಗಿರುವ ಹರಿರಾಮ್ ಶಂಕರ್ ಅವರನ್ನು ಉಡುಪಿ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಅನುಪಮ್ ಅಗರ್‌ವಾಲ್ ಅವರನ್ನು ಸಿಐಡಿ ಆರ್ಥಿಕ ಅಪರಾಧಗಳ ಡಿಐಜಿ ಆಗಿ (ಸಿ.ವಂಶಿ ಕೃಷ್ಣ ಅವರ ಜಾಗಕ್ಕೆ) ವರ್ಗಾವಣೆ ಮಾಡಲಾಗಿದೆ.
ಕೆಲವು ವರ್ಷಗಳ ಹಿಂದೆ ಬೆಳಗಾವಿ ಉಪ ಪೋಲಿಸ್ ಕಮಿಷನರ್ ಆಗಿದ್ದ ಅನುಪಮ್ ಅಗರ್ವಾಲ್ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಪದೇಪದೇ ಅಲ್ಲಿ ಕೋಮ ಸಂಘರ್ಷ ಏರ್ಪಟ್ಟಿದ್ದರಿಂದ ರಾಜ್ಯ ಸರಕಾರ ಕೊನೆಗೂ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿದೆ.
ಜೊತೆಗೆ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲೂ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದೆ. ಬೆಳಗಾವಿಗೆ ನೂತನ ಕಮಿಷನರ್ ಆಗಿ ಇದೀಗ ಬೋರಸೆ ಭೂಷಣ್ ಗುಲಾಬ್ ರಾವ್ ಅವರನ್ನು ನೇಮಕ ಮಾಡಿದೆ.