ಸಂಕೇಶ್ವರ : ಇಬ್ಬರು ಸಹೋದರರು ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಪರಿಣಾಮವಾಗಿ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಣನಕೇರಿ (Konanakeri) ಗ್ರಾಮದಲ್ಲಿ ನಡೆದಿರುವದು ವರದಿಯಾಗಿದೆ.
ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾದ ದುರ್ದೈವಿ ಸಹೋದರರು ಸಂತೋಷ ರವೀಂದ್ರ ಗುಂಡೆ (55) ಹಾಗೂ ಅಣ್ಣಾಸಾಹೇಬ ರವೀಂದ್ರ ಗುಂಡೆ (50) ಎಂದು ಗುರುತಿಸಲಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 01 ರ ದ್ವಾದಶ ರಾಶಿಗಳ ಫಲಾಫಲ.!
ಈ ಇಬ್ಬರು ಆತ್ಮಹತ್ಯೆಗೆ ಶರಣಾದ ದುರ್ದೈವಿ ಸಹೋದರರಿಗೆ ಮದುವೆ ಆಗಿರಲಿಲ್ಲ ಎನ್ನುವ ಕಾರಣದಿಂದ ಸಾರಾಯಿ ಕುಡಿತದ ಚಟಕ್ಕೆ ಬಿದ್ದಿದ್ದರು. ಬಳಿಕ ಕುಡಿತದ ನಸೆಯಲ್ಲಿ ವಿಷಕಾರಿ ಪದಾರ್ಥ ಸೇವನೆ ಮಾಡಿದ್ದಾರೆ.
ವಿಷ ಸೇವಿಸಿದ್ದ ಇವರಿಬ್ಬರನ್ನು ನೆರೆಯ ಮಹಾರಾಷ್ಟ್ರದ ಗಡಹಿಂಗ್ಲಜ್ (Gadahinglaj) ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ.
ಇದನ್ನು ಓದಿ : Belagavi : ಮೂವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ.!
ಈ ಘಟನೆ ಕುರಿತು ಮೃತರ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂಕೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಈ ಘಟನೆ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.