ದಕ್ಷಿಣ ಕನ್ನಡ : ಕೆಲ ವೈದ್ಯರು ಆಪರೇಷನ್ ವೇಳೆ ಯಸವುದೋ ಯೋಚನೆಯಲ್ಲಿ ಬಟ್ಟೆ, ಕತ್ತರಿಯನ್ನು ಅಲ್ಲೇ ಬಿಟ್ಟು ಜೀವಕ್ಕೆ ಕುತ್ತು ತಂದಿರುವ ಘಟನೆಗಳು ನಡೆದಿದ್ದು, ಇದೀಗ ರಾಜ್ಯದಲ್ಲಿ ಮೂರನೇ ಪ್ರಕರಣ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ 2024ರ ನ. 27 ರಂದು ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾರ್ಮಲ್ ಹೆರಿಗೆಯಾಗದ ಹಿನ್ನಲೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು.
ಇದನ್ನು ಓದಿ : Video : ಮೇಲಿನಿಂದ ಬೀಳುತ್ತಿದ್ದ ನಾಯಿಯನ್ನು ರಕ್ಷಿಸಿದ ಮಹಿಳೆ ; ಶಹಬ್ಬಾಸ್ ಎಂದ ನೆಟ್ಟಿಗರು.!
ಆರ್ಯಾಪು ಗ್ರಾಮದ ಬಂಗಾರಡ್ಕದ ಶರಣ್ಯ ಲಕ್ಷ್ಮಿ ಎಂಬುವವರಿಗೆ ನಾರ್ಮಲ್ ಹೆರಿಗೆಯಾಗದ ಹಿನ್ನಲೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು.
ಬಳಿಕ ಡಿ. 2 ರಂದು ಶರಣ್ಯ ಲಕ್ಷ್ಮಿ ಯವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಮನೆಗೆ ಬಂದ ಕೆಲದಿನಗಳ ಬಳಿಕ ವಿಪರೀತ ಜ್ವರ ಬಂದ ಹಿನ್ನಲೆ ಆಪರೇಷನ್ ಮಾಡಿದ ವೈದ್ಯರಿಗೆ ಕಾಲ್ ಮಾಡಿ ತಿಳಿಸಿದ್ದಾರೆ. ಅದಕ್ಕೆ ಆ ವೈದ್ಯ ಜ್ವರದ ಔಷಧಿ ನೀಡುವಂತೆ ಸೂಚಿಸಿದರು.
ಇದನ್ನು ಓದಿ : ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣ : ಕಾನೂನು ಕಾಲೇಜು ಉಪಪ್ರಾಂಶುಪಾಲರು ಸೇರಿ ಮೂವರ ಬಂಧನ̤!
ಆದರೂ ಕೂಡ ಜ್ವರದಿಂದ ಎದ್ದು ನಿಲ್ಲಲು ಆಗದ ಸ್ಥಿತಿ ಉಂಟಾದ ಹಿನ್ನಲೆ ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದರು, ಈ ವೇಳೆ ವೈದ್ಯರು ಸ್ಕ್ಯಾನಿಂಗ್ ಮಾಡಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.
ಅಂತೆಯೇ ಸಿಟಿ ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯೊಳಗಡೆ ಸರ್ಜಿಕಲ್ ಬಟ್ಟೆ ಬಿಟ್ಟಿರುವುದು ಗೊತ್ತಾಗಿದೆ. ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿ ಹೊಟ್ಟೆಯೊಳಗೆ ಇದ್ದ ಸರ್ಜಿಕಲ್ ಬಟ್ಟೆಯನ್ನು ಹೊರಗೆ ತೆಗೆಯಲಾಗಿದೆ.
ಇದನ್ನು ಓದಿ : ಸಮಾಜದ ಉನ್ನತಿ – ಪ್ರಗತಿಗೆ ಸೇವೆ ಸಲ್ಲಿಸಿದ್ದ ವ್ಯಕ್ತಿಯೇ ಸ್ವಾಮಿ ವಿವೇಕಾನಂದರು : ಶಾಸಕ ಬಾಲಚಂದ್ರ ಜಾರಕಿಹೊಳಿ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಮಹಿಳೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
Recent Comments