Monday, February 17, 2025
Google search engine
HomeCrime Newsಆಸ್ಪತ್ರೆಯ ಆವರಣದಲ್ಲಿ ಕಲ್ಲಿನಿಂದ ಹೊಡೆದು ವ್ಯಕ್ತಿಯ ಹತ್ಯೆ.!
spot_img
spot_img
spot_img
spot_img
spot_img

ಆಸ್ಪತ್ರೆಯ ಆವರಣದಲ್ಲಿ ಕಲ್ಲಿನಿಂದ ಹೊಡೆದು ವ್ಯಕ್ತಿಯ ಹತ್ಯೆ.!

ಗೋಕಾಕ (ಘಟಪ್ರಭಾ) : ಬೆಳಗಾವಿ ಜಿಲ್ಲೆಯ ‌ಗೋಕಾಕ ತಾಲ್ಲೂಕಿನ ಘಟಪ್ರಭಾ ಪಟ್ಟಣದ (Ghataprabha of Gokak Taluk) ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೋರ್ವ ತನ್ನ ನೋಡಿಕೊಳ್ಳಲು ಬಂದಿದ್ದ ವ್ಯಕ್ತಿಯ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಆಸ್ಪತ್ರೆಯಲ್ಲಿ ಉಪಚಾರ ಪಡೆದು ಡಿಸ್‌ಚಾರ್ಜ ಹೊಂದಿ ಆಸ್ಪತ್ರೆಯ ಮುಂಬಾಗದಲ್ಲಿ ಮೃತನು ಮಲಗಿದಾನೆ. ಆಗ ಆರೋಪಿತನು ಅಲ್ಲೆ ಕುಳಿತಿದ್ದು, ಯಾವುದೋ ಉದ್ದೇಶದಿಂದ ಮೃತನಿಗೆ ಆರೋಪಿತನು ಪೇವರ್ ಕಲ್ಲಿನಿಂದಾ ಮುಖಕ್ಕೆ ಜೋರಾಗಿ ಹೊಡೆದಿದ್ದಾನೆ. ಹೊಡೆದ ಏಟ್ಟಿಗೆ ಗಂಭೀರವಾದ ಗಾಯವಾದ ಆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮರಣ ಹೊಂದಿದ್ದಾನೆ.

Read it : ಮಾರಣಾಂತಿಕ ಆಲರ್ಜಿ ಪರಿಣಾಮ ; ನಿಷೇಧ ಆಗುತ್ತಾ Lays.?

ವಿಲಾಸ ಜೋಗದಂಡ (28) ಎಂಬಾತನನ್ನು ‌ಶ್ರೀಕೃಷ್ಣ ಡಾಕನೆ ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ ಇಬ್ಬರು ಮಹಾರಾಷ್ಟ್ರದ ಬೀಡ ಜಿಲ್ಲೆಯ ಪರಲಿ ತಾಲೂಕಿನ ಅಶ್ವಲಂಬಾ ಎಂಬ ಒಂದೇ ಗ್ರಾಮದವರಾಗಿದ್ದು, ಕೊಲೆಗೆ ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Read it : Astrology : ಡಿಸೆಂಬರ್ 23ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಅನಾರೋಗ್ಯದಿಂದ ಬಳಲುತಿದ್ದ ವ್ಯಕ್ತಿಯು ಈ ಕೃತ್ಯ ನಡೆಸಿದ್ದಾನೆ. ಈ ಘಟನೆಯಿಂದ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಘಟಪ್ರಭಾ ಪೊಲೀಸ್ ಠಾಣೆಯ ಪಿ.ಐ ಹೆಚ್.ಡಿ.ಮುಲ್ಲಾ, ಪಿಎಸ್ಐ ಆರ್.ಎಸ್.ಕಣವಿ, ಸಿಬ್ಬಂದಿ ರಾಜು ಹೊಳ್ಕಾರ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಮಧ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!