ಬದೌನ್ (UP) : ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದರು ಅಂತ ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸ್ ಅಧೀಕ್ಷಕ (SSP) ಕಚೇರಿಯ ಗೇಟ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಇಂತಹ ದುರ್ಘಟನೆ ನಡೆದಿರುವುದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ (SSP) ಕಚೇರಿಯ ಗೇಟ್ ಬಳಿ.
Read it : Astrology : ಜನವರಿ 02ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಗಲ್ಫಾಮ್ (Gulfam) ಎಂದು ತಿಳಿದು ಬಂದಿದೆ.
ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸುತಲೇ ಸ್ಥಳದಲ್ಲಿದ್ದ ಪೊಲೀಸ್ (Police) ಅಧಿಕಾರಿಗಳು ಅವನನ್ನು ರಕ್ಷಿಸಲು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದರಾದರೂ ಗಂಭೀರವಾಗಿ ಗಾಯಗೊಂಡಿದ್ದ (Major injury) ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಎರಡು ದಿನಗಳ ಹಿಂದೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಲು ನಿರಾಕರಿಸಿದರು, ಗುಲ್ಫಾಮ್ ಸರ್ಕಲ್ ಆಫೀಸರ್ (CO) ತನ್ನ ದೂರನ್ನು ದಾಖಲಿಸಲು ಒತ್ತಾಯಿಸದರೆ ಡ್ರಗ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮೃತ ವ್ಯಕ್ತಿ ಆರೋಪಿಸಿದರು.
Read it : Astrology : ಜನವರಿ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಆದರೆ ಪೊಲೀಸ್ ಮೂಲಗಳು ಹೇಳುವುದೇ ಬೇರೆ. ಮೃತ ಗಲ್ಫಾಮ್ ವೈಯಕ್ತಿಕ ವಿಷಯದಿಂದಾಗಿ ಒತ್ತಡದಲ್ಲಿದ್ದ(Under pressure), ಅಲ್ಲದೆ ಒಂದು ದಿನದ ಹಿಂದೆ ಮೃತ ವ್ಯಕ್ತಿ ವಿರುದ್ಧ ಮಹಿಳಾ ಸಂಬಂಧಿಯೊಬ್ಬರು ಎಫ್‌ಐಆರ್ ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.
उत्तर प्रदेश : जिला बदायूं में SSP दफ्तर के गेट पर गुलफाम ने खुद को आग लगाई। पुलिस ने आग बुझाकर हॉस्पिटल में भर्ती कराया।
गुलफाम ने बताया– 2 दिन पहले मुझसे ई रिक्शा, 2200 रुपए छीन लिए गए। पुलिस ने FIR नहीं की। CO ने डोडा लगाकर जेल भेजने की धमकी दी।
वहीं, पुलिस का कहना है कि… pic.twitter.com/TiIbzgN0e8
— Sachin Gupta (@SachinGuptaUP) January 1, 2025
Recent Comments