ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ನೋಡಲು ಭಯವೆನಿಸುತ್ತವೆ.
ಸದ್ಯ ಭಯ ಹುಟ್ಟಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Astrology : ಡಿಸೆಂಬರ್ 17ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಮುಂಬೈನ ವರ್ಲಿಯ ಆದರ್ಶ್ ನಗರದಲ್ಲಿ (Adarsh Nagar, Worli, Mumbai) ಯುವಕನೊಬ್ಬ ಗ್ರೈಂಡರ್ ಗೆ ಸಿಲುಕಿ ಮೃತಪಟ್ಟ ಭಯಾನಕ ಘಟನೆ (terrible incident) ನಡೆದಿದೆ.
ಜಾರ್ಖಂಡ್ ಮೂಲದ (Jharkhand) ಸೂರಜ್ ನಾರಾಯಣ್ ಯಾದವ್ ದಾರುಣವಾಗಿ ಮೃತಪಟ್ಟಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಚಿನ್ ಕೊಥೇಕರ್ ಒಡೆತನದ ರಸ್ತೆಬದಿಯ ಚೈನೀಸ್ ಫುಡ್ ಸ್ಟಾಲ್ ನಲ್ಲಿ (Chinese food stall) ಸೂರಜ್ ನಾರಾಯಣ್ ಯಾದವ್ ಕೆಲಸ ಮಾಡುತ್ತಿದ್ದನು.
ಇದನ್ನು ಓದಿ : ಲೋಕಾಯುಕ್ತ ಬಲೆಗೆ ಬಿದ್ದ PDO.!
ಆತ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಗ್ರೈಂಡರ್ (grinder) ಒಳಗೆ ಬಿದ್ದಿದ್ದು, ಗ್ರೈಂಡರ್ ಅವರನ್ನು ಒಳಗೆ ಎಳೆದುಕೊಂಡಿದೆ. ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆಯ ಸಂಬಂಧ ಸ್ಥಳಕ್ಕೆ ದಾದರ್ ಪೊಲೀಸರು ಭೇಟಿ ನೀಡಿದ್ದು, ಫುಡ್ ಸ್ಟಾಲ್ ನ ಮಾಲೀಕ ಕೊಥೇಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
#WATCH | Mumbai: 19-Year-Old Dies After Being Pulled Into Grinder Machine At Worli Shop; CCTV Captures Incident
Read story by Poonam Apraj (@m_journalist): https://t.co/tj6GMzPLUC#MumbaiNews #Worli pic.twitter.com/uPgcVfMpio
— Free Press Journal (@fpjindia) December 17, 2024
Recent Comments