Wednesday, March 19, 2025
Google search engine
HomeNewsಆಜಾನ್ ಕೂಗಲು ಜೋರಾದ ಧ್ವನಿವರ್ಧಕ ಬಳಿಕೆ : ಇಮಾಮ್ ವಿರುದ್ಧ FIR ದಾಖಲು.!
spot_img
spot_img
spot_img
spot_img
spot_img

ಆಜಾನ್ ಕೂಗಲು ಜೋರಾದ ಧ್ವನಿವರ್ಧಕ ಬಳಿಕೆ : ಇಮಾಮ್ ವಿರುದ್ಧ FIR ದಾಖಲು.!

ಡೆಸ್ಕ್ : ಮಸೀದಿಯೊಂದರಲ್ಲಿ ಆಜಾನ್ ಕೂಗಲು ನಿಗದಿತ ಮಿತಿಗಿಂತ ಹೆಚ್ಚಿನ ಡೆಸಿಬಲ್‌ನಲ್ಲಿ (decibel) ಧ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ಇಮಾಮ್ ಒಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿ ಪ್ರದೇಶದಲ್ಲಿ ನಡೆದಿದೆ.

ನ್ಯಾಯಾಲಯ ನಿಗದಿಪಡಿಸಿದ ನಿಗದಿತ ಮಿತಿಯನ್ನು ಉಲ್ಲಂಘಿಸಿ (infringement) ಶನಿವಾರ ರಾತ್ರಿ ಪಂಜಾಬಿಯನ್ ಪ್ರದೇಶದ ಮಸೀದಿಯಲ್ಲಿ ಆಜಾನ್ (Azan at the Mosque) ಕೂಗಲು ಧ್ವನಿವರ್ಧಕ ಬಳಸಲಾಗಿತ್ತು.

ಇದನ್ನು ಓದಿ : ಮದುವೆ ಮನೆಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಾಟಲಿ ನಿಷೇಧ : High Court.!

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 223 (Violation of government orders) ಮತ್ತು 270 (An annoyance to the public) ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು – 2000ರ ಅಡಿಯಲ್ಲಿ ಮಸೀದಿಯ ಇಮಾಮ್ ಹಫೀಜ್ ಶಕೀಲ್ ಶಮ್ಸಿ (Imam Hafiz Shakeel Shamsi) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಧ್ವನಿವರ್ಧಕವನ್ನು (loudspeaker) ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!