ಬೆಳಗಾವಿ : ಜಿಲ್ಲೆಯ ಬೆನಕನಹಳ್ಳಿ ಗ್ರಾಮದ ವೃದ್ಧರೊಬ್ಬರು ಶಂಕಿತ ಕೊರೊನಾದಿಂದ ಬುಧವಾರ ರಾತ್ರಿ ಬೆಳಗಾವಿ (Belagavi) ಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
70 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮೂರು ದಿನಗಳ ಹಿಂದೆ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ, ಮಧುಮೇಹ, ಕಿಡ್ನಿ ಸಮಸ್ಯೆ, ಮಿದುಳು ಸಂಬಂಧಿ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಕೊರೊನಾ ಲಕ್ಷಣಗಳು ಕಂಡುಬಂದ ಕಾರಣ ಅವರನ್ನು ಬುಧವಾರ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನು ಓದಿ : Belagavi : 25 ವರ್ಷದ ಗರ್ಭಿಣಿ ಮಹಿಳೆಗೆ ಕೊರೊನಾ ವೈರಸ್ ಸೋಂಕು ದೃಢ.!
ಬುಧವಾರ ಸಂಜೆ ರಾಪಿಡ್ ಟೆಸ್ಟ್ ಮಾಡಲಾಗಿದ್ದು, ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಅವರ ಗಂಟಲು ಮಾದರಿ ಸಂಗ್ರಹಿಸಿ ಹುಬ್ಬಳ್ಳಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಉಸಿರಾಟದ ಸಮಸ್ಯೆಯಾಗಿ ವೃದ್ಧ ಅಸುನೀಗಿದ್ದಾರೆ. ಇದನ್ನು ಶಂಕಿತ ಕೊರೊನಾದಿಂದ ಉಂಟಾದ ಸಾವು ಎಂದು ಪರಿಗಣಿಸಲಾಗಿದೆ. ಅವರ ಗಂಟಲು ಮಾದರಿಯ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಕುಟುಂಬದವರಿಗೆ ಶವ ಹಸ್ತಾಂತರ ಮಾಡಿದ್ದು, ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಹಿಂದಿನ ಸುದ್ದಿ : Accident : ಓರ್ವ ಚಾಲಕನ ತಪ್ಪಿಗೆ ಮೂರು ವಾಹನಗಳ ನಡುವೆ ಅಪಘಾತ ; ವಿಡಿಯೋ.!
ಡೆಸ್ಕ್ : ಹೆದ್ದಾರಿಯಲ್ಲಿ ಓರ್ವ ಚಾಲಕನ ತಪ್ಪಿನಿಂದಾಗಿ ಮೂರು ವಾಹನಗಳ ನಡುವೇ ಅಪಘಾತ (Accident) ಸಂಬಂಧಿಸಿದ ಘಟನೆಯೊಂದು ನಡೆದಿದೆ.
ಅಪಘಾತದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 25 ರ ದ್ವಾದಶ ರಾಶಿಗಳ ಫಲಾಫಲ.!
ಈ ದುರ್ಘಟನೆ ಫಿಲಿಬಿತ್ನ ಹೆದ್ದಾರಿಯಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಘಾತ ಉಂಟಾದದ್ದು ಹೇಗೆ.?
ಫಿಲಿಬಿತ್ನ ಹೆದ್ದಾರಿಯಲ್ಲಿ ಜ್ಯೋರಾ ಕಲ್ಯಾಣಪುರದ ಹತ್ತಿರ ಟಾಟಾ ಏಸ್ ವಾಹನ ಸಾಗುತ್ತಿದೆ. ಇದರ ಬೆನ್ನಲೇ ಮರ ತುಂಬಿದ್ದ ಟ್ರಕ್ ಒಂದು ಬರುತ್ತಿದೆ.
ಹೀಗೆ ರಸ್ತೆಯಲ್ಲಿದೆ ಸಾಗುತ್ತಿರಬೇಕಾದರೆ ಯಾವುದೋ ಒಂದು ಕಾರಣಕ್ಕೆ ಟಾಟಾ ಏಸ್ ವಾಹನ ನಿಲ್ಲಲು ಪ್ರಾರಂಭಿಸುತ್ತದೆ.
ಈಗ ಇದೇ ಲೇನ್ ಮೇಲೆ ಬರುತ್ತಿದ್ದ ಲಾರಿ ಬಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ಗೆ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಓಡಿದೆ.
ಇದೇ ವೇಳೆ ಎದುರಿನಿಂದ ತನ್ನ ಲೇನ್ ಮೇಲೆ ಹೊರಟಿದ್ದ ಬೈಕ್ ಒಂದಕ್ಕೆ ಆತನ ತಪ್ಪೇನು ಇಲ್ಲದಿದ್ದರೂ ಸಹ ಟಾಟಾ ಏಸ್ ಬೈಕ್’ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗುದ್ದು ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನುಳಿದಂತೆ ಮತ್ಯಾರಿಗೂ ತೊಂದರೆ ಆಗದೆ ಬಚಾವ ಆಗಿದ್ದಾರೆ.
ಇದನ್ನು ಓದಿ : Mobile : ವಿದ್ಯಾರ್ಥಿಯ ಪ್ಯಾಂಟ್ ಜೇಬಿನಲ್ಲಿದ್ದ ಸೆಲ್‌ಫೋನ್ ಬಾಂಬ್‌ನಂತೆ ಸ್ಫೋಟ್.!
ಅಪಘಾತ ನಡೆಯುತ್ತಿದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಆರೋಪಿ ಲಾರಿ ಚಾಲಕನಿಗಾಗಿ ಬರ್ಖೇಡಾ ಠಾಣೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
ಸದ್ಯ ಘಟನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.