ಬೆಳಗಾವಿ : ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ಮಾನ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ಕರಡಿ ದಾಳಿಯಿಂದ ರೈತನ ಕಾಲು ತುಂಡಾಗಿರುವ ಘಟನೆ ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಂಭವಿಸಿದೆ.
ಕರಡಿ ದಾಳಿಗೆ ಒಳಗಾದ ರೈತನನ್ನು ಮಾನ (Mana) ಗ್ರಾಮದ ಸಖಾರಾಮ ಗಾಂವಕರ (Sakharam Ganvakar) (62) ಎಂದುತಿಳಿದು ಬಂದಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ : Astrology : ಡಿಸೆಂಬರ್ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ರೈತ ಸಖಾರಾಮ ತಮ್ಮ ಪತ್ನಿಯೊಂದಿಗೆ ಜಾನುವಾರುಗಳ ಸಮೇತ ಹೊಲಕ್ಕೆ ಹೊರಟಿದ್ದರು. ಈ ಮಧ್ಯ ಕಾಡುದಾರಿಯಲ್ಲಿ ಕರಡಿ (Bear) ಎದುರಾಗಿದೆ. ಕರಡಿಯನ್ನು ನೋಡುತ್ತಿದ್ದಂತೆಯೇ ಸಖಾರಾಮ ತಮ್ಮ ಪತ್ನಿಯನ್ನು ಮರವೆರಿಸಿದ್ದಾರೆ.
ಇನ್ನೇನು ತಾವೂ ಮರ ಏರಬೇಕು ಎನ್ನುವಷ್ಟರಲ್ಲಿಯೇ ಓಡಿಬಂದ ಕರಡಿ ಎಡಗಾಲನ್ನು (left leg) ಬಾಯಲ್ಲಿ ಹಿಡಿದುಕೊಂಡು ಎಳೆದಾಡಿದೆ. ಕರಡಿ ದಾಳಿ ಎದುರಿಸಲು ರೈತ ತಮ್ಮ ಕೈಯಲ್ಲಿದ್ದ ಕೊಯ್ತಾದಿಂದ ಹೊಡೆದಿದ್ದರಿಂದ ಅದು ಓಡಿತು ಎಂದು ಸಖಾರಾಮ ತಿಳಿಸಿದ್ದಾರೆ.
ಇದನ್ನು ಓದಿ : Fungal ಚಂಡಮಾರುತ ಹಿನ್ನೆಲೆ ; ಕರ್ನಾಟಕದ ಈ ಜಿಲ್ಲೆಗಳಿಗೆ ರಜೆ.!
ಕರಡಿ ದಾಳಿಯಿಂದ ತುಂಡಾದ ಕಾಲಿನಿಂದ ತೀವ್ರ ರಕ್ತಸ್ರಾವದ ನಡುವೆಯೇ ರೈತ ಸಖಾರಾಮ ಮೊಬೈಲ್ (Mobile phone) ನಿಂದ ಪುತ್ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ (Forest dept. Staff) ಹಾಗೂ ಊರಿನ ಜನ ಗುಂಪಾಗಿ ರೈತನನ್ನು ಕಾಡಿನಲ್ಲಿ ಹುಡುಕಾಡಲು ಶುರು ಮಾಡಿದರು. ಕೊನೆಗೆ ಸಂಜೆ 5 ಗಂಟೆಗೆ ಅವರನ್ನು ಪತ್ತೆ ಮಾಡಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ಎಡಗಾಲನ್ನು ಕತ್ತರಿಸಿ ಶಸ್ತ್ರಚಿಕಿತ್ಸೆ (Operation) ಮಾಡಲಾಗಿದೆ ಎಂದು ಖಾನಾಪುರ ಎಸಿಎಫ್ (ACF) ಸುನೀತಾ ನಿಂಬರಗಿ ತಿಳಿಸಿದ್ದಾರೆ. ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
Recent Comments