Monday, February 17, 2025
Google search engine
HomeBelagavi NewsBelagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!
spot_img
spot_img
spot_img
spot_img
spot_img

Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಬೆಳಗಾವಿ : ಬಸ್ ಸೀಟಿಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆಯವರೆಗೂ ಮುಂದುವರೆದಿದ್ದು, ಹೊರಟಿದ್ದ ಬಸ್ ತಡೆದು ಗಂಡ ಹಾಗೂ ಗರ್ಭಿಣಿಗೆ ಅನ್ಯ ಕೋಮಿನ ಯುವಕರ ಗುಂಪು ಮನಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಗೋಕಾಕಕ್ಕೆ ಹೊರಟಿದ್ದ ಬಸ್‌ನಲ್ಲಿ ಜನಜಂಗುಳಿ ಇತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿ ಗರ್ಭಿಣಿ ಇದ್ದಾಳೆ ಎನ್ನುವ ಕಾರಣದಿಂದ ಸೀಟು ಹಿಡಿದಿದ್ದ ಪತಿ ಹಾಗೂ ಪಕ್ಕದಲ್ಲಿದ್ದ ಅನ್ಯ ಕೋಮಿನ ಮಹಿಳೆಯರು ಸೀಟಿಗಾಗಿ ತಂಟೆ ತೆಗೆದಿದ್ದರು. ಬಳಿಕ ಬಸ್ಸು ಹೊರಟು ಹುಕ್ಕೇರಿ ತಾಲೂಕಿನ ನೇರ್ಲಿ-ಮಸರಗುಪ್ಪಿ ಗ್ರಾಮದ ನಡುವೆ ಹೋಗುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಗೋಕಾಕ ತಾಲೂಕಿನ ಒಂದು ಗ್ರಾಮದ ಅನ್ಯ ಕೋಮಿನ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಕರೆ ಮಾಡಿದ ಹಿನ್ನಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂದು ಬಸ್ಸು ತಡೆದ ಸುಮಾರು 12ರಿಂದ 15 ಜನರಿದ್ದ ಅನ್ಯ ಕೋಮಿನ ಯುವಕರ ತಂಡವು ಬೈಕ್ ಮೇಲೆ ಬಂದು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ಗರ್ಭಿಣಿ ಮಹಿಳೆ ಹಾಗೂ ಪತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ.

ನನ್ನ ತಂದೆ-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕುತ್ತ ಬಸ್ಸಿನಲ್ಲಿದ್ದ ಪ್ರಯಾಣಿಕರ ಮುಂದೆ ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಪರಿ ಪರಿಯಾಗಿ ಹೇಳುತ್ತ ತಿರುಗುತ್ತಿದ್ದ ದೃಶ್ಯವಂತೂ ಎಲ್ಲರ ಮನ ಕರಗುವಂತೆ ಮಾಡಿತು.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಪತಿಯನ್ನು ಯುವಕರು ಹೊಡೆಯುತ್ತಿದ್ದಂತೆ ನನ್ನ ಪತಿಗೆ ಹೊಡೆಯ ಬೇಡಿ ಎಂದು ಬಿಡಿಸಲು ಹೋದ ಪತ್ನಿಗೂ ಹೊಡೆದಿದ್ದಾರೆ. ಆದರೆ ಸಿಟಿಗಾಗಿ ಬಸ್ಸಿನಲ್ಲಿ ಆದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಮಾತ್ರ ವಿಪರ್ಯಾಸವೇ ಸರಿ.

ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!