Monday, February 17, 2025
Google search engine
HomeBelagavi Newsಗೂಗಲ್ ಮ್ಯಾಪ್ ನಂಬಿ ಖಾನಾಪುರದ ದಟ್ಟ ಅರಣ್ಯದಲ್ಲೇ ರಾತ್ರಿ ಕಳೆದ ಬಿಹಾರ ಕುಟುಂಬ.!
spot_img
spot_img
spot_img
spot_img
spot_img

ಗೂಗಲ್ ಮ್ಯಾಪ್ ನಂಬಿ ಖಾನಾಪುರದ ದಟ್ಟ ಅರಣ್ಯದಲ್ಲೇ ರಾತ್ರಿ ಕಳೆದ ಬಿಹಾರ ಕುಟುಂಬ.!

ಬೆಳಗಾವಿ : ಗೂಗಲ್ ಮ್ಯಾಪ್ (Google Maps) ಆಗಾಗ ಪ್ರಯಾಣಿಕರ ಹಾದಿಯನ್ನು ತಪ್ಪಿಸಿ ಅನಾಹುತ ನಡೆಯುವ ಘಟನೆ ವರದಿಯಾಗುತ್ತಿದೆ. ಈ ನಡುವೆ ಬೆಳಗಾವಿ (Belagavi) ಜಿಲ್ಲೆಯಲ್ಲೂ ಗೂಗಲ್ ಪ್ರಯಾಣಿಕರ ಹಾದಿ ತಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ರಸ್ತೆ ತಿಳಿಯದೆ ಗೂಗಲ್ ಮ್ಯಾಪ್ ನಂಬಿದ್ದಕ್ಕೆ ಕುಟುಂಬವೊಂದು ಕಾಡಿನಲ್ಲೇ ರಾತ್ರಿ ಕಳೆದ ಘಟನೆ ಬೆಳಗಾಔಇ ಜಿಲ್ಲೆಯ ಖಾನಾಪುರ (Khanapur) ದಲ್ಲಿ ನಡೆದಿದೆ.

ಇದನ್ನು ಓದಿ : Astrology : ಡಿಸೆಂಬರ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಬಿಹಾರದ ರಾಜದಾಸ್ ರಣಜಿತ್ ದಾಸ್ ಕುಟುಂಬ (family of Rajdas Ranjit Das from Bihar) ಉಜ್ಜಯಿನಿಯಿಂದ ಗೋವಾ (Ujjain to Goa) ಪ್ರವಾಸಕ್ಕೆ ಹೊರಟಿತ್ತು. ಗೋವಾದಲ್ಲಿ ತಲುಪಬೇಕಿದ್ದ ಸ್ಥಳದ ಲೊಕೇಶನ್ (location) ಹಾಕಿ ಪ್ರಯಾಣ ಬೆಳೆಸಿದ್ದರು.

ಗೂಗಲ್ ಮ್ಯಾಪ್ ಪ್ರಕಾರವೇ ಹೋಗುತ್ತಿದ್ದ ಅವರು ದಾರಿ ಸಾಗಿದಂತೆ ಶಿರೋಲಿ ಮತ್ತು ಹೆಮ್ಮಡಗಾ (Shiroli and Hemmadaga) ಮಾರ್ಗ ಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ಭೀಮಗಡ ವನ್ಯಧಾಮದ ಅರಣ್ಯ (Bhimgad Wildlife Sanctuary) ದೊಳಗೆ ಹೊಕ್ಕಿದ್ದಾರೆ. ಕಗ್ಗತ್ತಲ ಕಾಡಿನಲ್ಲಿ ಮೊಬೈಲ್ ನೆಟ್‌ವರ್ಕ್ (mobile network) ಸಿಗದೇ ದಟ್ಟ ಅರಣ್ಯದಲ್ಲಿ ಹಾದಿ ತಪ್ಪಿ ಕುಟುಂಬ ಸಿಲುಕಿಕೊಂಡಿದೆ.

ಇದನ್ನು ಓದಿ : Belagavi : ಪಾರಿವಾಳ ವಿಚಾರವಾಗಿ ಹೊಡೆದಾಟ ; ಇಬ್ಬರು ಅಪ್ರಾಪ್ತರು ಸೇರಿ 9 ಜನರ ಬಂಧನ.!

ದಟ್ಟ ಅರಣ್ಯ (dense forest) ದಲ್ಲಿ ಹಾದಿ ತಪ್ಪಿದರೂ ಕಂಗೆಡದ ರಾಜದಾಸ್ ಕುಟುಂಬದ ಎಲ್ಲ ಸದಸ್ಯರಿಗೆ ಧೈರ್ಯ ತುಂಬಿ ರಾತ್ರಿ (Night) ಅಲ್ಲೇ ಕಳೆದಿದ್ದಾರೆ. ಜೀವ ಕೈಯಲ್ಲಿ ಹಿಡಿದು ರಾತ್ರಿ ಕಳೆದ ಕುಟುಂಬ, ಬೆಳಗಾಗುತ್ತಲೇ ತಾವಿದ್ದ ಸ್ಥಳದಿಂದ ಮೂರ್ನಾಲ್ಕು ಕಿಲೋಮೀಟರ್ ಕ್ರಮಿಸಿ, ಮೊಬೈಲ್ ನೆಟ್‌ವರ್ಕ್ ದೊರೆತ ಬಳಿಕ ಅವರು 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂ (police control room) ಜತೆ ಸಂಪರ್ಕ ಸಾಧಿಸಿ ವಿಚಾರ ಹೇಳಿದ್ದಾರೆ.

ತಕ್ಷಣ ಕುಟುಂಬದ ಸಹಾಯಕ್ಕೆ ನೆರವಾದ ಖಾನಾಪುರ ಪೊಲೀಸರು (Khanapur Police) ಕುಟುಂಬವನ್ನು ರಕ್ಷಿಸಿದ್ದಾರೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!