Monday, February 17, 2025
Google search engine
HomeCrime Newsಬೈಕ್ - ಬೊಲೊರೊ ಡಿಕ್ಕಿ ; ಐವರ ದುರ್ಮರಣ.!
spot_img
spot_img
spot_img
spot_img
spot_img

ಬೈಕ್ – ಬೊಲೊರೊ ಡಿಕ್ಕಿ ; ಐವರ ದುರ್ಮರಣ.!

ಕೋಲಾರ : ಕೋಲಾರ ನಗರದ ಮುಳಬಾಗಿಲಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ದ್ವಿಚಕ್ರ ವಾಹನ ಮತ್ತು ಬೊಲೊರೊ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೋಲಾರದ ಮುಂಬಾಗಿಲು ವಡ್ಡಹಳ್ಳಿಯ  ಕೋಣನಗುಂಟೆ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಬೊಲೊರೊ ಚಾಲಕ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.   ಅಪಘಾತದಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ : ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ.!

ಮೃತರನ್ನು ಮುಳಬಾಗಲು ತಾಲ್ಲೂಕಿನ ನಾಗನಹಳ್ಳಿಯ ವೆಂಕಟರಾಮಪ್ಪ (50) ಹಾಗೂ ಗಾಯತ್ರಿ (43) ದಂಪತಿಗಳು. ಕೋನಂಗುಂಟೆ ಗ್ರಾಮದ ವೆಂಕಟರಾಮಪ್ಪ (40) ಹಾಗೂ ಅಲುವೇಲಮ್ಮ (30) ದಂಪತಿಗಳು ಹಾಗೂ ಕೋನಂಗುಂಟೆ ಗ್ರಾಮದ ರಾಧಮ್ಮ ಮತ್ತೊರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಇನ್ನು ಬುಲೆರೊ ವಾಹನದಲ್ಲಿದ್ದ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನು ಓದಿ : Astrology : ಡಿಸೆಂಬರ್ 18ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.! 

ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!