Wednesday, March 12, 2025
Google search engine
HomeSpecial Newsಕಡಿಮೆ ಬೆಲೆಯಲ್ಲಿ ವಿವಿಧ ಪ್ಲಾನ್ ಪರಿಚಯಿಸಿದ BSNL ; ಡಾಟಾ ಎಷ್ಟಿರುತ್ತೇ.?
spot_img
spot_img
spot_img
spot_img
spot_img

ಕಡಿಮೆ ಬೆಲೆಯಲ್ಲಿ ವಿವಿಧ ಪ್ಲಾನ್ ಪರಿಚಯಿಸಿದ BSNL ; ಡಾಟಾ ಎಷ್ಟಿರುತ್ತೇ.?

ನವದೆಹಲಿ : ಬಿಎಸ್ಎನ್ಎಲ್ (BSNL) ತನ್ನ ಜಾಲವನ್ನು ವೇಗವಾಗಿ ವಿಸ್ತರಿಸಲು ಸಿದ್ಧತೆ ನಡೆಸುತ್ತಿದ್ದು, ದೇಶಾದ್ಯಂತ 4G ಜಾಲವನ್ನು ವಿಸ್ತರಿಸಲಾಗುತ್ತಿದೆ. ಈ ವರ್ಷದ ಮೊದಲಾರ್ಧದಲ್ಲಿ ಒಂದು ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಮೂಲಕ BSNL ಕೂಡ 5G ನೆಟ್‌ವರ್ಕ್ ಸೇವೆಗಳನ್ನು ಲಭ್ಯವಾಗುವಂತೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಕಳೆದ ತಿಂಗಳಲ್ಲಿ, ಅದು 65,000 4G ಟವರ್‌ಗಳು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ. ತನ್ನ ಜಾಲವನ್ನು ವಿಸ್ತರಿಸುವುದರ ಜೊತೆಗೆ, ಆಕರ್ಷಕ ರೀಚಾರ್ಜ್ ಯೋಜನೆಗಳೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿದೆ.

ಇದನ್ನು ಓದಿ : Chicken ಸೇವನೆಗೆ ಪಶುಸಂಗೋಪನೆ ಇಲಾಖೆಯಿಂದ ಗೈಡ್‌ಲೈನ್ಸ್‌.!

BSNL ಹೆಚ್ಚಿನ Validity ಬಯಸುವ ಬಳಕೆದಾರರಿಗಾಗಿ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದರ ಭಾಗವಾಗಿ, ಇತ್ತೀಚೆಗೆ 6 ತಿಂಗಳ ಮಾನ್ಯತೆಯ ಹೊಸ ಯೋಜನೆಯನ್ನು ಪರಿಚಯಿಸಿದೆ. BSNL ಈ ಹೊಸ ರೀಚಾರ್ಜ್ (Recharge) ಯೋಜನೆಯನ್ನು 897 ರೂ.ಗಳಿಗೆ ಪರಿಚಯಿಸಿದೆ. ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವಾಗ ಬಳಕೆದಾರರು 6 ತಿಂಗಳ ಮಾನ್ಯತೆಯನ್ನು ಪಡೆಯುತ್ತಾರೆ. 

ಒಮ್ಮೆ Recharge ಮಾಡಿದರೆ, ಆರು ತಿಂಗಳವರೆಗೆ ಮತ್ತೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ನೀವು ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದರೆ, ನೀವು 180 ದಿನಗಳವರೆಗೆ ಅನಿಯಮಿತ ಕರೆಗಳು (Unlimited call) ಮತ್ತು ದಿನಕ್ಕೆ 100 ಉಚಿತ SMS ಗಳನ್ನು ಪಡೆಯಬಹುದು. ಅದೇ ರೀತಿ, ಡೇಟಾದ ವಿಷಯದಲ್ಲಿ, ಒಟ್ಟು 90 GB ಡೇಟಾ ಲಭ್ಯವಿದೆ. ಈ ಡೇಟಾವನ್ನು ಯಾವುದೇ ದೈನಂದಿನ ಮಿತಿಯಿಲ್ಲದೆ ಬಳಸಬಹುದು. ಅದಾದ ನಂತರ, ಇಂಟರ್ನೆಟ್ ವೇಗ 40kbps ಗೆ ಕಡಿಮೆಯಾಗುತ್ತದೆ. 

ಇದನ್ನು ಓದಿ : ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದ ಸ್ಯಾಂಡಲ್ ವುಡ್ Actress.!

BSNL ರೂ.397ಕ್ಕೆ 150 ದಿನದ ವ್ಯಾಲಿಡಿಟಿ ಪ್ಲಾನ್/150-day validity plan for Rs.397 : 

ಬಿಎಸ್‌ಎನ್ಎಲ್‌ ಪ್ರಿಪೇಯ್ಡ್ (BSNL Prepaid) ಗ್ರಾಹಕರು 397 ರೂಪಾಯಿ Recharge ಮಾಡಿಕೊಂಡರೆ 150 ದಿನದ Validity ಸಿಗುತ್ತದೆ. Recharge Pack Active ಆದ ಮೊದಲ 30 ದಿನ ಗ್ರಾಹಕರಿಗೆ ಪ್ರತಿದಿನ 2GB ಡೇಟಾ, ಉಚಿತವಾಗಿ ದಿನಕ್ಕೆ 100 SMS ಕಳುಹಿಸಬಹುದು. ಉಚಿತವಾಗಿ ಯಾವುದೇ Network ಗೆ ಅನಿಯಮಿತವಾಗಿ (Unlimited call) ಕರೆ ಮಾಡಬಹುದು. 

BSNL ಒಂದು ವರ್ಷ ವ್ಯಾಲಿಡಿಟಿಯ ಪ್ಲಾನ್/One year validity plan : 

BSNL Prepaid ಗ್ರಾಹಕರು 1,999 ರೂಪಾಯಿ Recharge ಮಾಡಿಕೊಂಡರೆ ಒಂದು ವರ್ಷ ರೀಚಾರ್ಜ್ (One year) ಮಾಡಿಕೊಳ್ಳುವ ಅವಶ್ಯಕತೆ ಇರಲ್ಲ. ಈ Special pack ನಲ್ಲಿ ಗ್ರಾಹಕರಿಗೆ ಒಟ್ಟು 600GB DATA ಸಿಗುತ್ತದೆ. ಪ್ರತಿದಿನ ಉಚಿತವಾಗಿ 100 SMS ಕಳುಹಿಸಬಹುದು. ಹಾಗೆ ಯಾವುದೇ Network ಗೆ ಅನಿಯಮಿತವಾಗಿ ಕರೆ (Unlimited call) ಮಾಡಬಹುದು. DATA Pack ಮುಕ್ತಾಯವಾಗುತ್ತಿದ್ದಂತೆ Net Speed 40 kbps ಆಗುತ್ತದೆ.

ಇದನ್ನು ಓದಿ : Belagavi : ಪ್ರೇಯಸಿ ಕೊಂದು ಆತ್ಮಹತ್ಯೆಗೆ ಶರಣಾದ ಯುವಕ.!

BSNL ರೂ. 347 ಪ್ರಿಪೇಯ್ಡ್ ಪ್ಲಾನ್/BSNL Rs 347 Prepaid Plan : 

347 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ  2GB Hi-Speed DATA ಜೊತೆಯಲ್ಲಿ ಉಚಿತವಾಗಿ 100 SMS ಕಳುಹಿಸಬಹುದು. 347 ರೂ. ಪ್ಲಾನ್ 54 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಜೊತೆ ಬಳಕೆದಾರರಿಗೆ ಹೆಚ್ಚುವರಿಯಾಗಿ 450 Live TV channel,  BiTV ಮತ್ತು OTT Application ಗಳ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. 

RELATED ARTICLES
Most Popular

Recent Comments

- Advertisment -
Google search engine
error: Content is protected !!