Monday, February 17, 2025
Google search engine
HomeNewsದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!
spot_img
spot_img
spot_img
spot_img
spot_img

ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

ಬೆಂಗಳೂರು : ಕನ್ನಡ ಕಿರುತೆರೆ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ – 11 (Bigg Boss Season 11) ರ ಮನೆಯ ಸದಸ್ಯರು ಹೊಸ, ಹೊಸ ಟಾಸ್ಕ್‌ಗಳಲ್ಲಿ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಇದೀಗ ಇದು ರೋಚಕ ಘಟ್ಟವನ್ನ ತಲುಪಿದ್ದು, ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ (viewers stand on their toes) ಮಾಡಿದೆ.

ಬಿಗ್​​ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದು, ಇದೀಗ ಬಿಗ್‌ಬಾಸ್ ಸೀಸನ್ 11ರ ಮನೆಯಿಂದ ಹೊರ ಬಂದಿದ್ದಾರೆ.

ಇದನ್ನು ಓದಿ : Belagavi : ಖಾನಾಪುರ ಅರಣ್ಯದಲ್ಲಿ ಕರಡಿ ದಾಳಿಗೆ ತುಂಡಾಯ್ತು ರೈತನ ಕಾಲು.!

ಕಾರಣವೇನು.?

ಚೈತ್ರಾ ಕುಂದಾಪುರ & ಗ್ಯಾಂಗ್ ಮೇಲೆ ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದಬಾಬು ಎಂಬುವವರಿಗೆ ಕೋಟಿ – ಕೋಟಿ ವಂಚಿಸಿದ ಆರೋಪದಲ್ಲಿ ಅವರ ಮೇಲೆ ದೂರು ದಾಖಲಾಗಿತ್ತು. ವಂಚನೆ ಪ್ರಕರಣ (cheating case) ಕ್ಕೆ ಸಂಬಂಧಿಸಿದಂತೆ ಚೈತ್ರಾ ಕೋರ್ಟ್‌ಗೆ ಹಾಜರಾಗಿದ್ದರು.

ಈ ಹಿನ್ನಲೆಯಲ್ಲಿ ಇಂದು (ದಿ.03) ದಿಢೀರನೇ ಬಿಗ್ ಬಾಸ್ ಮನೆಯಿಂದ ಗುಟ್ಟಾಗಿ ಹೊರ ಬಂದಿದ್ದು, 1ನೇ ಎಸಿಎಂಎಂ ಕೋರ್ಟ್​​​ಗೆ (1st ACMM Court) ಹಾಜರಾಗಿದ್ದರು. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ (arrested) ಆಗಿದ್ದು, ಅವರು ವಿಚಾರಣೆ ಎದುರಿಸಿದ್ದರು.

ಇದನ್ನು ಓದಿ : Astrology : ಡಿಸೆಂಬರ್ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು (judge) ಚೈತ್ರಾ ಕುಂದಾಪುರ ಅವರ ಕೇಸ್‌ನ ವಿಚಾರಣೆ (hearing) ಯನ್ನು ಬರುವ ಜನೇವರಿ 13ರಂದು ನಡೆಸುವುದಾಗಿ ಹೇಳಿ ಮುಂದೂಡಿದ್ದಾರೆ. ಕೇಸ್‌ ಮುಂದುವರೆದ ಕಾರಣ ಚೈತ್ರಾ ಕುಂದಾಪುರ ಅವರನ್ನು ಮತ್ತೆ ಬಿಗ್‌ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ.

ಕೇಸ್‌ ಮುಂದೂಡಿದ ಪರಿಣಾಮ ಚೈತ್ರಾ ಕುಂದಾಪುರ ಅವರಿಗೆ ಸದ್ಯ ಜನವರಿ ರಿಲೀಫ್ (relief) ಸಿಕ್ಕಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!