ಬೆಂಗಳೂರು : ರೌಡಿ ಶೀಟರ್ ಓರ್ವ ವಿವಾಹಿತ ಮಹಿಳೆ ಖಾಸಗಿ ಫೋಟೋ ಇಟ್ಟುಕೊಂಡು ಸುಲಿಗೆ (Extortion) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ (Bangalore) ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Read it : Astrology : ಡಿಸೆಂಬರ್ 29ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ರೌಡಿಶೀಟರ್ ಮಹಿಳೆಯ ಖಾಸಗಿ ಫೋಟೋ (private photo) ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಹಣ ನೀಡದೇ ಇದ್ದಾಗ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ (threat) ಹಾಕಿದ್ದಾನೆ ಎನ್ನಲಾಗಿದೆ.
ರೌಡಿಶೀಟರ್ ಕೆಲ ವರ್ಷದ ಹಿಂದೆ ಅಂಧ್ರಹಳ್ಳಿಯಲ್ಲಿ ಸಂತ್ರಸ್ತ ಮಹಿಳೆಯ (victim woman) ಮನೆಯಲ್ಲಿ ಲೀಸ್ಗೆ ಇದ್ದ. ಕ್ಯಾಬ್ ಡ್ರೈವರ್ ಎಂದು ಪರಿಚಯ ಮಾಡಿಕೊಂಡು ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಈ ವೇಳೆ ಮಹಿಳೆಯ ಖಾಸಗಿ ಪೋಟೋವನ್ನು ಸೆರೆ ಹಿಡಿದಿದ್ದ. ಬಳಿಕ ರೌಡಿಶೀಟರ್ ಮನೆಯನ್ನು ಖಾಲಿ ಮಾಡಿದ್ದ.
Read it : ವಿವಾಹಿತ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದೊಯ್ದು BJP ಮುಖಂಡ.!
ಆಬಳಿಕ ಈ ಪೋಟೋ ತೋರಿಸಿ ಬೆದರಿಸಿ ಹಣ ಪಡೆಯುತ್ತಿದ್ದ ಎಂದು ವಿವಾಹಿತ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ರೌಡಿಶೀಟರ್ ವಿರುದ್ಧ ಬ್ಲ್ಯಾಕ್ಮೇಲ್, ಬೆದರಿಕೆ ಬಗ್ಗೆ ದೂರು ನೀಡಿದ್ದಾರೆ.
ತುಮಕೂರು ಜೈಲಿನಲ್ಲಿರುವ ರೌಡಿಶೀಟರ್ ನನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಬ್ಯಾಡರಹಳ್ಳಿ ಪೊಲೀಸರು, ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Recent Comments