ರಾಯಚೂರು : ರಾಯಚೂರು ಜಿಲ್ಲೆಯ ಜುಲಮಗೇರ ಎಂಬಲ್ಲಿ ಸೊಸೆಯ ಮೇಲೆ ಕಾಮುಕ ಮಾವನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಇದನ್ನು ವಿರೋಧಿಸಿದ್ದಕ್ಕೆ ಆಕೆಯನ್ನು ಸಲಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಸೊಸೆ ದುಳ್ಳಮ್ಮನನ್ನು (27) ಮಾವ ರಾಮಲಿಂಗಯ್ಯ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸೊಸೆ ಮೇಲೆ ಅತ್ಯಾಚಾರ ಮಾಡಲು ರಾಮಲಿಂಗಯ್ಯ ಮುಂದಾಗಿದ್ದಾನೆ. ಈ ವೇಳೆ ವಿರೋಧ ಮಾಡಿದ್ದಕ್ಕೆ ಕೊಲೆಗೈದಿದ್ದಾನೆ.
ಇದನ್ನು ಓದಿ : Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಆರೋಪಿಯು ಈ ಹಿಂದೆಯೂ ಕೂಡ ಎರಡು ಮೂರು ಬಾರಿ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಗ್ರಾಮದ ಹಿರಿಯರು ಸೇರಿ ರಾಮಾಯಲಿಂಗಯ್ಯಗೆ ಬುದ್ಧಿ ಕೂಡ ಹೇಳಿದ್ದರು.
ಕೊಲೆ ಮಾಡಿ ಸದ್ಯ ಎಸ್ಕೇಪ್ ಆಗಿರುವ ರಾಮಲಿಂಗಯ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ಓದಿ : ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.
ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.
Recent Comments