ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ (Chikkanandihalli of Bailahongala Taluk) ಗ್ರಾಮದಲ್ಲಿ ಯುವಕನನ್ನು ಅಣ್ಣ ಹಾಗೂ ಅಪ್ಪ ಹತ್ಯೆಗೈದ ಘಟನೆ ನಡೆದಿದೆ.
ಚಿಕ್ಕನಂದಿಹಳ್ಳಿ ಗ್ರಾಮದ ಮಂಜುನಾಥನನ್ನು (25) ಕಲ್ಲು, ಇಟ್ಟಿಗಳಿಂದ ತಲೆ ಜಜ್ಜಿ ಬರ್ಬರ ಹತ್ಯೆ ಮಾಡಲಾಗಿದೆ.
ಇದನ್ನು ಓದಿ : ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ – ಬಾಲಕಿ.!
ಸಹೋದರ ಗುರುಬಸಪ್ಪ (28) ಹಾಗೂ ತಂದೆ ನಾಗಪ್ಪ (63) ಎಂಬುವವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರೀತಿಸಿದ ಯುವತಿ ಜೊತೆಗೆ ಮಂಜುನಾಥ ಮದುವೆಗೆ ಪೋಷಕರ ವಿರೋಧವಿತ್ತು (Parental opposition to marriage). ಆದರೆ ನಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗುವೆ ಎಂದು ಮಂಜುನಾಥ್ ಹಠ ಹಿಡಿದಿದ್ದ.
ಇದನ್ನು ಓದಿ : ಲೋಕಾಯುಕ್ತ Raid ; ಕಂತೆ ಕಂತೆ ಹಣ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ , ಕೆಜಿಗಟ್ಟಲೆ ಬೆಳ್ಳಿ ವಶ.!
ಕೊನೆಗೆ ಆತನ ಕುಟುಂಬದವರು ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಅಲ್ಲದೇ ನಿಶ್ಚಿತಾರ್ಥ ಕಾರ್ಯ (engagement function) ಕೂಡ ಮಾಡಿ ಮುಗಿಸಿದ್ದರು.
ಆದರೆ ಕುಡಿತದ ದಾಸನಾಗಿದ್ದ ಮಂಜುನಾಥ್, ಮದುವೆ ಮಾಡಲು ಕುಟುಂಬದವರು ತಡ ಮಾಡಿದ್ದಕ್ಕೆ ಗಲಾಟೆ ಮಾಡ್ತಿದ್ದ. ನಿನ್ನೆ ಕೂಡ ಕುಡಿದು ಬಂದು ತಾಯಿ ಜೊತೆಗೆ ಗಲಾಟೆಗೆ ಮಾಡಿದ್ದ ಎನ್ನಲಾಗಿದೆ.
ಇದನ್ನು ಓದಿ : ರಾಯಭಾಗ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ; ಇಬ್ಬರು ಸಾವು, 20 ಜನರಿಗೆ ಗಾಯ.!
ಇದರಿಂದ ಸಿಟ್ಟಿಗೆದ್ದು ಹಿರಿಯ ಮಗ ಗುರುಬಸಪ್ಪ ಮತ್ತು ತಂದೆ ನಾಗಪ್ಪ ಸೇರಿ ಮಂಜುನಾಥನ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಿತ್ತೂರು ಪೊಲೀಸ್ ಠಾಣೆಯಲ್ಲಿ (Kittoor Police Station) ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Recent Comments