ದೀಸಾ : ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಭೀಕರ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮ 13 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತಿನ ಬನಸ್ಕಾಂತ ಬಳಿಯಿರುವ ದೀಸಾದಲ್ಲಿ ನಡೆದಿದೆ.
ಈ ದುರ್ಘಟನೆ ಇಂದು ಬೆಳಗಿ ಜಾವ ಭಾರಿ ಸ್ಫೋಟ ಸಂಭವಿಸಿದೆ ಎಂದು ಬನಸ್ಕಾಂತ ಕಲೆಕ್ಟರ್ ಮಿಹಿರ್ ಪಟೇಲ್ ಹೇಳಿದ್ದಾರೆ.
ಇದನ್ನು ಓದಿ : Astrology : ಎಪ್ರಿಲ್ 01 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಕಾರ್ಖಾನೆ ಮತ್ತು ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ದೀಶಾ ಪುರಸಭೆಯ ಅಗ್ನಿಶಾಮಕ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಬೆಂಕಿ ಅನಾಹುತಕ್ಕೆ ಪಟಾಕಿ ತಯಾರಿಕೆಗೆ ಬಳಸುತ್ತಿದ್ದ ಗನ್ ಪೌಡರ್ ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ ಕಾರಣ ಎಂದಿ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ : Astrology : ಮಾರ್ಚ್ 31ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಪಟಾಕಿ ಕಾರ್ಖಾನೆಯಲ್ಲಿಯ ಭಾರೀ ಸ್ಫೋಟದ ರಭಸಕ್ಕೆ ಪಕ್ಕದಲ್ಲಿದ್ದ ಗೋದಾಮು ಕುಸಿದಿದ್ದು, ಅದರ ಅವಶೇಷಗಳು 200 ಮೀ ದೂರಕ್ಕೆ ಚದುರಿಹೋಗಿವೆ.
ಸ್ಫೋಟದ ವೇಳೆ ಕಾರ್ಮಿಕರು ಪಟಾಕಿಗಳನ್ನು ತಯಾರಿಸುತ್ತಿದ್ದರು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಸ್ಫೋಟದ ತೀವ್ರತೆ ಎಷ್ಟೊಂದು ಭೀಕರವಾಗಿತ್ತೆಂದರೆ, ಕಾರ್ಮಿಕರ ದೇಹದ ಕೆಲ ಭಾಗಗಳು ದೂರಕ್ಕೆ ತೂರಲ್ಪಟ್ಟು, ಪಕ್ಕದ ಹೊಲಗಳಲ್ಲಿ ಸಹ ಅವಶೇಷಗಳು ಕಂಡುಬಂದಿವೆ.
ಇದನ್ನು ಓದಿ : Video : ನಿನ್ನ ಕೊಂದು ಡ್ರಮ್ ಒಳಗೆ ಹಾಕುವೆ ಎಂದು ಪತಿಗೆ ಧಮ್ಕಿ ಹಾಕಿದ ಪತ್ನಿ.!
ಬೆಂಕಿಯ ತೀವ್ರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಸುಮಾರು ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ ಐವರು ಕಾರ್ಮಿಕರನ್ನು ಚಿಕಿತ್ಸೆಗಾಗಿ ದೀಸಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
#WATCH | Gujarat | Explosion occurs in a factory in the industrial area in Deesa, Banaskantha district; Five workers dead, says Collector. pic.twitter.com/PYkmn4UVeW
— ANI (@ANI) April 1, 2025