ಹಾವೇರಿ : ಪುಣೆ – ಹಾವೇರಿ ಜಿಲ್ಲೆ ಶಿಗ್ಗಾಂವಿ (Haveri District Shiggavi) ತಾಲೂಕಿನ ತಡಸ ಕ್ರಾಸ್ ಸಮೀಪ ಎರಡು ಕಾರುಗಳ ಮಧ್ಯೆ (Between two cars) ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ನಡೆದಿದೆ.
ಮೃತ ದುರ್ದೈವಿಗಳನ್ನು ಚಾಮರಾಜಪೇಟೆ ನಿವಾಸಿ ಚಂದ್ರಮ್ಮ(59), ಅವರ ಪುತ್ರಿ ಮೀನಾ(38), ಕಾರು ಚಲಾಯಿಸುತ್ತಿದ್ದ ದಾವಣಗೆರೆ ಹರಿಹರ ನಿವಾಸಿ ಮಹೇಶ್ ಕುಮಾರ್ ಸಿ.(41) ಹಾಗೂ ಹರಿಹರ ನಿವಾಸಿ ಧನ್ವೀರ್(11) ಎಂದು ಗುರುತಿಸಲಾಗಿದೆ. ಎಂದು ತಿಳಿದು ಬಂದಿದೆ.
ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ತಡಸ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಅಸುನೀಗಿದರೆ, ಇನ್ನಿಬ್ಬರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read it : ಸಾರ್ವಜನಿಕರ ಎದುರೇ ಕುಡುಗೋಲಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆಗೆ ಯತ್ನ.!
ಕಾರು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಇನ್ನೊಂದು ಕಾರು ಬೆಂಗಳೂರು ಕಡೆಗೆ ಬರುತ್ತಿತ್ತು. ಈ ವೇಳೆ ಈ ಅಪಘಾತ ಸಂಭವಿಸಿದೆ.
Recent Comments