ಬೆಂಗಳೂರು : ಫೆಂಗಲ್ ಚಂಡಮಾರುತ (Cyclone Fengal) ಹಾಗೂ ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಬಿಸಿ ತಟ್ಟಿದೆ.
ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ. ಫಂಗಲ್ ಚಂಡಮಾರುತದಿಂದ ಅವಾಂತರಗಳೇ ಸೃಷ್ಟಿಯಾಗಿದ್ದು, ನಾಳೆಯೂ (tomorrow) ಸಹ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದನ್ನು ಓದಿ : Astrology : ಡಿಸೆಂಬರ್ 02ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಫಂಗಲ್ ಚಂಡಮಾರುತದ ಪರಿಣಾಮ ಕೊಡಗು, ಕೋಲಾರ, ದಕ್ಷಿಣ ಕನ್ನಡ ಸೇರಿದಂತೆ ಇತರೆ ಹಲವು ಜಿಲ್ಲೆಯಾದ್ಯಂತ (across many districts) ನಾಳೆ (ದಿ. 03) ಯು ಸಹ ಮಳೆರಾಯನ ಆರ್ಭಟ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ರಜೆ ಘೋಷಿಸಿದ ಜಿಲ್ಲೆಗಳು :
* ಕೋಲಾರ ಜಿಲ್ಲೆ,
* ರಾಮನಗರ ಜಿಲ್ಲೆ,
* ಮೈಸೂರು ಜಿಲ್ಲೆ,
* ಮಂಡ್ಯ ಜಿಲ್ಲೆ,
* ಚಿಕ್ಕಮಗಳೂರು ಜಿಲ್ಲೆ,
* ಚಿಕ್ಕಬಳ್ಳಾಪುರ,
* ದಕ್ಷಿಣ ಕನ್ನಡ ಜಿಲ್ಲೆ,
* ಚಾಮರಾಜನಗರ ಜಿಲ್ಲೆ ಮತ್ತು
* ಉಡುಪಿ ಜಿಲ್ಲೆ.
ಇದನ್ನು ಓದಿ : Accident : ರಸ್ತೆ ಅಪಘಾತದಲ್ಲಿ ತಂದೆ – ಮಗ ಸಾವು.!
ಇನ್ನು ಉತ್ತರ ಒಳನಾಡಿದ ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆಗೆ ಹಲವು ಜಿಲ್ಲೆಗಳಲ್ಲಿ ಕೆಲವೆಡೆ ಪ್ರತ್ಯೇಕವಾಗಿ ಅಲ್ಲಲ್ಲಿ ಸಾಧಾರಣ (normal) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Meteorological Department) ನೀಡಿದೆ.
ಈ ದಿನದ ಮಳೆ ಭವಿಷ್ಯ ಮತ್ತು ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು:#KSNDMC pic.twitter.com/ZhGm6sUeJB
— Karnataka State Natural Disaster Monitoring Centre (@KarnatakaSNDMC) December 2, 2024
Recent Comments