Monday, February 17, 2025
Google search engine
HomeNational Newsಫಂಗಲ್ ಚಂಡಮಾರುತ ; ಕರ್ನಾಟಕ ಸೇರಿ ದೇಶದ ಏಳು ರಾಜ್ಯಗಳಿಗೆ Red alert.!
spot_img
spot_img
spot_img
spot_img
spot_img

ಫಂಗಲ್ ಚಂಡಮಾರುತ ; ಕರ್ನಾಟಕ ಸೇರಿ ದೇಶದ ಏಳು ರಾಜ್ಯಗಳಿಗೆ Red alert.!

ಡೆಸ್ಕ್ : ಬಂಗಾಳಕೊಲ್ಲಿಯಲ್ಲಿ (Bay of Bengal) ಉಂಟಾದ ಫಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ಏಳು ರಾಜ್ಯಗಳಿಗೆ ಸವಾಲಾಗಿ ಪರಿಣಮಿಸಬಹುದು. ಹೀಗಾಗಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಇಂದು ಈ ಫಂಗಲ್ ಚಂಡಮಾರುತವು (Fungal Cyclone) ಪುದುಚೇರಿಯ ಕಾರೈಕಲ್ ಮತ್ತು ತಮಿಳುನಾಡಿನ ಮಹಾಬಲಿಪುರಂ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.

ಇದನ್ನು ಓದಿ : ಸಾರಿಗೆ ಬಸ್‌ ಪಲ್ಟಿ ; 9 ಜನರ ಸಾವು, 25 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ.!

ಫಂಗಲ್ ಚಂಡಮಾರುತದ ಪರಿಣಾಮದಿಂದ
ಗಾಳಿಯ ವೇಗವು ಗಂಟೆಗೆ 100 ಕಿ.ಮೀ.ವರೆಗೆ ಬೀಸಲಿದ್ದು, ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ (Tamil Nadu, Puducherry, Kerala, Karnataka, Andhra Pradesh, Telangana and Andaman and Nicobar Islands) ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಫಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ಮುಂಜಾಗ್ರತಾ ಕ್ರಮವಾಗಿ ಇಂದು ಎಲ್ಲಾ ಶಾಲಾ-ಕಾಲೇಜುಗಳನ್ನು (School – College) ಮುಚ್ಚುವಂತೆ ಆದೇಶಿಸಿವೆ. ಕೆಲ ಜಿಲ್ಲೆಗಳಲ್ಲಿ ನಡೆಯಲಿದ್ದ ಎಲ್ಲಾ ಪರೀಕ್ಷೆಗಳು ಮತ್ತು ಕೋಚಿಂಗ್ ತರಗತಿಗಳನ್ನು ರದ್ದುಗೊಳಿಸಲಾಗಿದೆ.

ಇದನ್ನು ಓದಿ : Astrology : ನವೆಂಬರ್ 30ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಕರಾವಳಿ ರಸ್ತೆಗಳಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ (Temporarily) ಮುಚ್ಚಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಐಟಿ (IT) ಕಂಪನಿಗಳಿಗೆ ಸೂಚಿಸಲಾಗಿದೆ. ಸ್ಥಳೀಯ ನಿವಾಸಿಗಳು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಎನ್‌ಡಿಆರ್‌ಎಫ್ ನಿಯೋಜನೆ :
ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ಪಡೆಗಳನ್ನು ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಟೋಲ್ ಫ್ರೀ ಸಂಖ್ಯೆ 112 ಮತ್ತು 1077 ನೀಡಲಾಗಿದೆ. ವಾಟ್ಸಾಪ್ ಸಹಾಯವಾಣಿ ಸಂಖ್ಯೆ 9488981070 ಕೂಡ ಸಕ್ರಿಯವಾಗಿದೆ.

ಇದನ್ನು ಓದಿ : Cuber crime : ಹೆಚ್ಚುತ್ತಿರುವ ನಕಲಿ ಟ್ರೇಡಿಂಗ್ ಅಪ್ಲಿಕೇಶನ್‌ಗಳ ವಂಚನೆ ಪ್ರಕರಣಗಳು.!

ಭಾರೀ ಮಳೆಯ ಎಚ್ಚರಿಕೆಯು 3 ದಿನಗಳ ಕಾಲ (ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ) ಇರಲಿದ್ದು, ತಮಿಳುನಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (predicted) ನೀಡಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!