ಡೆಸ್ಕ್ : 10ನೇ ಕ್ಲಾಸ್ ವಿದ್ಯಾರ್ಥಿನಿಯೊಬ್ಬಳು ಈ ವರ್ಷದ ಎಂಟು ತಿಂಗಳ ಅವಧಿಯಲ್ಲಿ 15 ಬಾರಿ ಇಲಿಗಳಿಂದ ಆಕಸ್ಮಿಕವಾಗಿ ಕಚ್ಚಿಸಿಕೊಂಡಿದ್ದು, ಪರಿಣಾಮ ಬಲಗಾಲು ಮತ್ತು ಕೈಯಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಆತಂಕಕಾರಿ ಘಟನೆ ತೆಲಂಗಾಣದ ಖಮ್ಮಮ್’ನ ದಾನವೈಗುಡೆಮ್ ಹಿಂದುಳಿದ ವರ್ಗಗಳ ಕಲ್ಯಾಣ ಹಾಸ್ಟೆಲ್’ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಲಕ್ಷ್ಮಿ ಭವಾನಿ ಕೀರ್ತಿ ಎಂಬ ವಿದ್ಯಾರ್ಥಿನಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಿದೆ.
ಇದನ್ನು ಓದಿ : ಬೈಕ್ – ಬೊಲೊರೊ ಡಿಕ್ಕಿ ; ಐವರ ದುರ್ಮರಣ.!
ಆಕೆಗೆ ಪ್ರತಿ ಬಾರಿ ಇಲಿ ಕಚ್ಚಿದಾಗ ರೇಬಿಸ್ ನಿರೋಧಕ ಲಸಿಕೆ ನೀಡಲಾಗುತ್ತಿತ್ತು. ಇಲಿ ಕಡಿತವು ಲಕ್ಷ್ಮಿಯ ಪಾರ್ಶ್ವವಾಯುವಿಗೆ ಕಾರಣವಾಗಿದೆ ಎಂದು ಲಕ್ಷ್ಮಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮಾಜಿ ಸಚಿವ ಪುವ್ವಾಡಾ ಅಜಯ್ ಕುಮಾರ್ ಅವರ ನಿರ್ದೇಶನದ ಮೇರೆಗೆ ವಿದ್ಯಾರ್ಥಿನಿ ಪ್ರಸ್ತುತ ಮಮತಾ ಜನರಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಕುಟುಂಬದವರು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : Astrology : ಡಿಸೆಂಬರ್ 18ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿದ್ದು, ಲಕ್ಷ್ಮಿ ಸ್ಥಿತಿ ಸುಧಾರಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ, ಆದರೆ ಇನ್ನೂ ಆಕೆ ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
Recent Comments