ಬೆಂಗಳೂರು : ರಾಜ್ಯದಲ್ಲಿ ದಿನೇದಿನೇ ಹಕ್ಕಿಜ್ವರದ (bird flu) ಭೀತಿ ಹೆಚ್ಚಾಗುತ್ತಲೇ ಇದ್ದು, ಹಕ್ಕಿಜ್ವರ ನಿಯಂತ್ರಣಕ್ಕಾಗಿ ಪಶುಸಂಗೋಪನೆ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಕೋಳಿ ಮಾಂಸ ಸೇವನೆಗೆ ಮಾರ್ಗಸೂಚಿ :
* 70 ಡಿಗ್ರಿ ಸೆಂಟಿಗ್ರೇಡ್ ಅಧಿಕ ಉಷ್ಣಾಂಶದಲ್ಲಿ, ಕನಿಷ್ಠ 30 ನಿಮಿಷ ಕೋಳಿ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ತಿನ್ನಬಹುದು.
ಇದನ್ನು ಓದಿ : Facebook ಲವರ್ ಜೊತೆ ಓಡಿ ಹೋದ ಎರಡು ಮಕ್ಕಳ ತಾಯಿ ; ವಿಡಿಯೋ ವೈರಲ್.!
* ಕೋಳಿ ಮಾಂಸ ಅಡುಗೆ ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.
* ಕೋಳಿ ಮಾಂಸವನ್ನ ತಯಾರಿಸಿದ ನಂತರ ನಂಜುನಾಶಕದಿಂದ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು (Hands should be cleaned with disinfectant).
* ಹಸಿ ಕೋಳಿಮಾಂಸ, ಅದರ ದ್ರವಗಳು ಅಥವಾ ಬೇಯಿಸಿದ ಮೊಟ್ಟೆಯನ್ನು, ಬೇಯಿಸದೇ ಉಪಯೋಗಿಸುವ ಆಹಾರ ಪದಾರ್ಥಗಳು ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು.
ಇದನ್ನು ಓದಿ : ರಾಯಭಾಗ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ; ಇಬ್ಬರು ಸಾವು, 20 ಜನರಿಗೆ ಗಾಯ.!
* ಬೇಯಿಸದಿರುವ ಅಥವಾ ಅರೆಬೆಂದ ಮೊಟ್ಟೆಯನ್ನು ತಿನ್ನಬಾರದು.
* ಅಧಿಕ ಉಷ್ಣಾಂಶದ ವಾತಾವರಣದಲ್ಲಿ ವೈರಾಣು ಹೆಚ್ಚಿನ ಕಾಲ ಬದುಕುಳಿಯುವುದಿಲ್ಲ. ಹೀಗಾಗಿ ಬೇಯಿಸಿದ ಆಹಾರ ಸೇವನೆ ಸುರಕ್ಷಿತ.
ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ :
* ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ಕೊಡಬಾರದು.
ಇದನ್ನು ಓದಿ : ಮಾರ್ಕೆಟ್‌ನಲ್ಲಿ ಅನುಚಿತ ವರ್ತನೆ ತೋರಿದ ವ್ಯಕ್ತಿಗೆ ಮಹಿಳೆ ಮಾಡಿದ್ದೇನು ಗೊತ್ತೇ.? ಈ ವಿಡಿಯೋ ನೋಡಿ.!
* ಕೋಳಿ ಫಾರಂನಲ್ಲಿ ಕೆಲಸ ಮಾಡುವ ಕೆಲಸಗಾರರು ತಮ್ಮ ಬಟ್ಟೆ, ಶೂ ಹಾಗೂ ಕೈ, ಕಾಲುಗಳಿಗೆ ನಂಜುನಾಶಕ ದ್ರಾವಣ ಸಿಂಪಡಿಸಬೇಕು.
* ಕೋಳಿ ಫಾರಂನಲ್ಲಿ ಕೋಳಿಗಳ ಸಂಪರ್ಕಕ್ಕೆ ಬೇರೆ ಹಕ್ಕಿಗಳು ಬರದಂತೆ ಎಚ್ಚರಿಕೆ ವಹಿಸಬೇಕು.
ಇದನ್ನು ಓದಿ : ಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ 10 ಅಡಿ ತೂರಿ ಹೋಗಿ ಬಿದ್ದ ಮಹಿಳೆ ; ಭಯಾನಕ ವಿಡಿಯೋ ವೈರಲ್.!
* ಕೋಳಿ ಸಾಕಾಣಿಕೆಗೆ ಬೇಕಾಗುವ ಸಲಕರಣೆಗಳನ್ನ ಬೇರೆ ಕೋಳಿ ಫಾರಂನಿಂದ ಪಡೆಯಬೇಕಾದರೆ ಸ್ಯಾನಿಟೈಸೆಷನ್ ಮಾಡಬೇಕು ಮತ್ತು ನಂಜುನಾಶಕವನ್ನ ಅಳವಡಿಸಬೇಕು.
* ಕೋಳಿ ಪಂಜರಗಳನ್ನ ದಿನನಿತ್ಯ ಶುಚಿ ಮಾಡುವುದು. ಆಹಾರ ಮತ್ತು ನೀರನ್ನ ಪ್ರತಿದಿನ ಬದಲಾಯಿಸುವುದು.
Recent Comments