ಡೆಸ್ಕ್ : ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವತಿಯೊಬ್ಬಳು ರೈಲಿನಲ್ಲಿ ರೀಲ್ಸ್ ಶೂಟ್ ಮಾಡಲು ಹೋಗಿ ಮರಕ್ಕೆ ಡಿಕ್ಕಿಯಾಗಿ ರೈಲಿನಿಂದ ಆಯತಪ್ಪಿ ಬಿದ್ದ ಘಟನೆ ನಡೆದಿದೆ.
ರೈಲಿನಿಂದ ಯುವತಿ ಕೆಳಗೆ ಬೀಳುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜೊತೆ 19ರ ಯುವತಿ ಪರಾರಿ.!
ವಿಡಿಯೋ ಮಾಡಲೆಂದು ಯುವತಿಯು ರೈಲಿನ ಬಾಗಿಲಿನಿಂದ ತನ್ನ ತಲೆಯನ್ನು ಹೊರಗೆ ಬಾಗಿಸಿ ವಿಡಿಯೋ ಮಾಡುತ್ತಿದ್ದಾಳೆ. ಈ ವೇಳೆ ತಲೆಗೆ ದಪ್ಪೆಂದು ಮರವೊಂದು ಬಡಿದ ಪರಿಣಾಮ ಯುವತಿ ರೈಲಿನಿಂದ ಕೆಳಗೆ ಬಿದ್ಸಿದ್ದಾಳೆ.
ಮಾಹಿತಿ ಪ್ರಕಾರ, ರೈಲನ್ನು ಮುಂದಿನ ನಿಲ್ದಾಣದಲ್ಲಿ ನಿಲ್ಲಿಸಿ ಯುವತಿಯನ್ನು ಹುಡುಕಲಾಗಿದೆ. ಯುವತಿ ಪೊದೆಯೊಂದರ ಮೇಲೆ ಬಿದ್ದ ಕಾರಣ ಸುದೈವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನು ಓದಿ : Astrology : ಡಿಸೆಂಬರ್ 13ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಗೋಸ್ಕರ ಯುವ ಜನತೆ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎನ್ನುವುದು ವಿಪರ್ಯಾಸ.
A Chinese tourist in #Colombo, #SriLanka, had a close call on Dec 7, falling off a train while leaning out for a video. Hit by a tree branch, she tumbled into bushes and escaped with minor scratches. Police urge travelers: safety first!#travel pic.twitter.com/t33pSMIuBX
— Shanghai Daily (@shanghaidaily) December 11, 2024
Recent Comments