ಯಾದಗಿರಿ : ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ (Madriki village in Shahapur) ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಈ ರಸ್ತೆ ಅಪಘಾತದಲ್ಲಿ ಮೃತ ದುರ್ದೈವಿಗಳನ್ನು ಹಳ್ಳೆಪ್ಪ (45) ಮಲ್ಲಯ್ಯ(35) (Halleppa and Mallaiah) ಎಂದು ಗುರುತಿಸಲಾಗಿದೆ. ಘಟನೆಗೆ ಓವರ್ ಟೆಕ್ (overtaking) ಮಾಡಿರುವುದೆ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Astrology : ನವೆಂಬರ್ 29ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಹಳ್ಳೆಪ್ಪ ಮತ್ತು ಮಲ್ಲಯ್ಯ ಅವರು ಜೇವರ್ಗಿ ತಾಲೂಕಿನ ಚಿಕ್ಕಮುದವಾಳ ಗ್ರಾಮದ (Chikmudavala village) ಬಳಿಯಿರುವ ಜಮೀನು ನೋಡಿಕೊಂಡು ಬರಲು ಬೈಕ್‌ನಲ್ಲಿ ಹೋಗಿದರು. ಜಮೀನು (land) ನೋಡಿಕೊಂಡು ಊರಿಗೆ ವಾಪಸ್ ಬರುವಾಗ ಕಾರು ಓವರ್ ಟೆಕ್ ಮಾಡುವಾಗ ಈ ದುರ್ಘಟನೆ ನಡೆದಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ (bikers died on the spot) ಸಾವಿಗೀಡಾಗಿದ್ದಾರೆ.
ಅಪಘಾತದಲ್ಲಿ ಮೃತರಾದವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ (post-mortem) ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೂ ಅಪಘಾತವಾಗುತ್ತಿದಂತೆಯೇ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಜಿಲ್ಲೆಯ ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Case) ದಾಖಲು ಮಾಡಲಾಗಿದೆ.
Recent Comments