Monday, February 17, 2025
Google search engine
HomeBelagavi NewsBelagaviಯಲ್ಲಿ ಪ್ರತಿಭಟನೆ ಜೋರು : ಚಾಲಕರ ಕೈ ಕಟ್ಟಿಹಾಕಿದ ರೈತರು.!
spot_img
spot_img
spot_img
spot_img
spot_img

Belagaviಯಲ್ಲಿ ಪ್ರತಿಭಟನೆ ಜೋರು : ಚಾಲಕರ ಕೈ ಕಟ್ಟಿಹಾಕಿದ ರೈತರು.!

ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ

ರೈತರು ಸೋಮವಾರ, ಇಲ್ಲಿನ ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.

ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಬಂದವು. ಓಡಿ ಬಂದು ಅಡ್ಡಗಟ್ಟಿದ ರೈತರು, ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿದರು.

ಇದನ್ನು ಓದಿ : Astrology : ಡಿಸೆಂಬರ್ 09ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ಆರಂಭಿಸಿದರು.

ಅಧಿವೇಶನದ ಮೊದಲ ದಿನವೇ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದರು. ಅವರನ್ನು ಚೆದುರಿಸಲು ಪೊಲೀಸರು ಮುಂದಾದರು. ಆಗ ತೀವ್ರ ವಾಗ್ವಾದ ನಡೆಯಿತು.

ಇದನ್ನು ಓದಿ : Astrology : ಡಿಸೆಂಬರ್ 08ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹಲವು ವಾಹನಗಳು ಸಾಲಾಗಿ ನಿಂತವು. ಇದರ ಮಧ್ಯೆ ಎರಡು ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಡು ಮುಂದೆ ಸಾಗಿದರು. ಬೆನ್ನಟ್ಟಿ ಬಂದ ರೈತರು ಬಸ್‌ ಅಡ್ಡಗಟ್ಟಿದರು.

ಒಳಗೆ ಹತ್ತಿ ಬಸ್ ಚಾಲಕರ ಕೈಗಳನ್ನು ಹಸಿರು ಟವಲ್ ನಿಂದ ಕಟ್ಟಿದರು. ಅದೇ ಕೈಗಳನ್ನು ಬಸ್ಸಿನ ಸ್ಟೇರಿಂಗಿಗೂ ಕಟ್ಟಿದರು. ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

RELATED ARTICLES
Most Popular

Recent Comments

- Advertisment -
Google search engine
error: Content is protected !!