ಮೂಡಲಗಿ : ಮೂಡಲಗಿ (Mudalagi) ಪಟ್ಟಣದ ಲಕ್ಷ್ಮಿ ನಗರದಲ್ಲಿ ಇರುವ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬುಧುವಾರ ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮಿ ನಗರದ ನಿವಾಸಿ ರಿಯಾಜ್ ಝಾರೆ ಎಂಬುವವರ ಪುತ್ರ ಅಕ್ಕಿಯಾರ ಝಾರೆ (10) ಮೃತಪಟ್ಟ ಬಾಲಕ. ಕ್ರೀಕೇಟ್ ಆಟವಾಡಲು ಹೋದ ವೇಳೆ ಬಾವಿಗೆ ಬಿದ್ದ ಚಂಡು ತರಲು ಹೋಗಿದ್ದ ಬಾಲಕ ಕಾಲು ಜಾರಿ ಬಾವಿಗೆ ಬಿದ್ದಿರುವ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 27 ರ ದ್ವಾದಶ ರಾಶಿಗಳ ಫಲಾಫಲ.!
ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಮತ್ತು ಸ್ಥಳೀಯ ಸಹಕಾರದಿಂದ ಕಾರ್ಯಾಚರಣೆ ನಡೆಸಿ, ಮೃತ ಬಾಲಕನ ದೇಹ ಪತ್ತೆಯಾಗುತ್ತಿದ್ದಂತೆ ಪೋಷಕರ ಆಕ್ರಂದಣ ಮುಗಿಲು ಮುಟ್ಟಿತ್ತು.
ಹಿಂದಿನ ಸುದ್ದಿ : Accident : ಓರ್ವ ಚಾಲಕನ ತಪ್ಪಿಗೆ ಮೂರು ವಾಹನಗಳ ನಡುವೆ ಅಪಘಾತ ; ವಿಡಿಯೋ.!
ಡೆಸ್ಕ್ : ಹೆದ್ದಾರಿಯಲ್ಲಿ ಓರ್ವ ಚಾಲಕನ ತಪ್ಪಿನಿಂದಾಗಿ ಮೂರು ವಾಹನಗಳ ನಡುವೇ ಅಪಘಾತ (Accident) ಸಂಬಂಧಿಸಿದ ಘಟನೆಯೊಂದು ನಡೆದಿದೆ.
ಅಪಘಾತದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 25 ರ ದ್ವಾದಶ ರಾಶಿಗಳ ಫಲಾಫಲ.!
ಈ ದುರ್ಘಟನೆ ಫಿಲಿಬಿತ್ನ ಹೆದ್ದಾರಿಯಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಘಾತ ಉಂಟಾದದ್ದು ಹೇಗೆ.?
ಫಿಲಿಬಿತ್ನ ಹೆದ್ದಾರಿಯಲ್ಲಿ ಜ್ಯೋರಾ ಕಲ್ಯಾಣಪುರದ ಹತ್ತಿರ ಟಾಟಾ ಏಸ್ ವಾಹನ ಸಾಗುತ್ತಿದೆ. ಇದರ ಬೆನ್ನಲೇ ಮರ ತುಂಬಿದ್ದ ಟ್ರಕ್ ಒಂದು ಬರುತ್ತಿದೆ.
ಹೀಗೆ ರಸ್ತೆಯಲ್ಲಿದೆ ಸಾಗುತ್ತಿರಬೇಕಾದರೆ ಯಾವುದೋ ಒಂದು ಕಾರಣಕ್ಕೆ ಟಾಟಾ ಏಸ್ ವಾಹನ ನಿಲ್ಲಲು ಪ್ರಾರಂಭಿಸುತ್ತದೆ.
ಈಗ ಇದೇ ಲೇನ್ ಮೇಲೆ ಬರುತ್ತಿದ್ದ ಲಾರಿ ಬಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ಗೆ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಓಡಿದೆ.
ಇದೇ ವೇಳೆ ಎದುರಿನಿಂದ ತನ್ನ ಲೇನ್ ಮೇಲೆ ಹೊರಟಿದ್ದ ಬೈಕ್ ಒಂದಕ್ಕೆ ಆತನ ತಪ್ಪೇನು ಇಲ್ಲದಿದ್ದರೂ ಸಹ ಟಾಟಾ ಏಸ್ ಬೈಕ್’ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗುದ್ದು ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನುಳಿದಂತೆ ಮತ್ಯಾರಿಗೂ ತೊಂದರೆ ಆಗದೆ ಬಚಾವ ಆಗಿದ್ದಾರೆ.
ಇದನ್ನು ಓದಿ : Mobile : ವಿದ್ಯಾರ್ಥಿಯ ಪ್ಯಾಂಟ್ ಜೇಬಿನಲ್ಲಿದ್ದ ಸೆಲ್‌ಫೋನ್ ಬಾಂಬ್‌ನಂತೆ ಸ್ಫೋಟ್.!
ಅಪಘಾತ ನಡೆಯುತ್ತಿದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಆರೋಪಿ ಲಾರಿ ಚಾಲಕನಿಗಾಗಿ ಬರ್ಖೇಡಾ ಠಾಣೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
ಸದ್ಯ ಘಟನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.