ಪಾಟ್ನಾ : ಹಿರಿಯ ಉದ್ಯಮಿಯೊಬ್ಬರನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗುಂಡಿಕ್ಕಿ ಹತ್ಯೆ ಮಾಡಿದ ಭಯಾನಕ ಘಟನೆಯೊಂದು
ಪಾಟ್ನಾದ (Patna) ದಾನಪುರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ.
ಉದ್ಯಮಿ ಮನೆಯೊಳಗೆ ಕಾಲಿಡುತ್ತಿದ್ದಂತೆ ರಸ್ತೆಯುದ್ದಕ್ಕೂ ಆರು ಜನ (six members) ಹಿಂಬಾಲಿಸಿಕೊಂಡು ಬಂದು ಹಲವು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನಾವಳಿಗಳು ಸಿಸಿಟಿವಿ (CCTV) ಯಲ್ಲಿ ಸೆರೆಯಾಗಿದ್ದು, ಸದ್ಯ ದೃಶ್ಯಾವಳಿಗಳು ವೈರಲ್ ಆಗಿವೆ.
ಇದನ್ನು ಓದಿ : Astrology : ಡಿಸೆಂಬರ್ 01ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಹತ್ಯೆಯಾದ ಉದ್ಯಮಿಯನ್ನು 60 ವರ್ಷದ ಪರಾಸ್ ರೈ (Paras Rai) ಎಂದು ಗುರುತಿಸಲಾಗಿದ್ದು, ಎರಡು ದ್ವಿಚಕ್ರವಾಹನಗಳಲ್ಲಿ ಆರು ಮಂದಿ ಶಂಕಿತರು ಅವರನ್ನು ಹಿಂಬಾಲಿಸಿ ಹತ್ಯೆ ನಡೆಸಿದ್ದಾರೆ.
ಹಂತಕರು ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತಮ್ಮ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಮರೆಮಾಚಿದ್ದು, ತಲೆಗೆ ಹೆಲ್ಮೆಟ್‌ಗಳನ್ನು ಹಾಕಿಕೊಂಡಿದ್ದರು.
ಉದ್ಯಮಿ ರಾಯ್ ಮನೆ ತಲುಪುತ್ತಿದಂತೆಯೇ ಶಂಕಿತರಲ್ಲಿ ಒಬ್ಬ ಅವರ ಬೆನ್ನಿಗೆ ಗುಂಡು (Shot in the back) ಹಾರಿಸಿದ್ದಾನೆ. ಅವರು ಕೆಳಗೆ ಬೀಳುತ್ತಿದ್ದಂತೆ ಹಲವು ಗುಂಡುಗಳನ್ನು ಹಾರಿಸಿ ಎಲ್ಲರೂ ಪರಾರಿಯಾಗಿದ್ದಾರೆ.
ಇದನ್ನು ಓದಿ : ಫಂಗಲ್ ಚಂಡಮಾರುತ ; ಕರ್ನಾಟಕ ಸೇರಿ ದೇಶದ ಏಳು ರಾಜ್ಯಗಳಿಗೆ Red alert.!
ಹಂತಕರು ಹಾರಿಸಿದ ಗುಂಡಿನ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಗಾಬರಿಯಾಗಿ (startled)ಹೊರ ಬಂದಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡ ಪರಾಸ್ ರಾಯ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಬಂದು ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
Elderly Man Followed Into His House, Shot Dead. CCTV Footage Emerges
Read: https://t.co/vVZbojOFZT pic.twitter.com/CwDJKNARDB
— NDTV (@ndtv) December 1, 2024
Recent Comments