Monday, February 17, 2025
Google search engine
HomeViral Videoಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!
spot_img
spot_img
spot_img
spot_img
spot_img

ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಡೆಸ್ಕ್‌ : ಸಾಮಾಜಿಕ  ಜಾಲತಾಣದಲ್ಲಿ ಪ್ರತಿದಿನ ಒಂಬಿಲ್ಲೊಂದು ಚಿತ್ರ-ವಿಚಿತ್ರ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸಮಾಜಕ್ಕೆ ಪೂರಕವಾಗಿದ್ದರೆ, ಇನ್ನು ಕೆಲವು ಯುವ ಪೀಳಿಗೆಯನ್ನು ದಾರಿ ತಪ್ಪಿಸುವ, ಸಂಸ್ಕಾರವನ್ನು ಟೀಕಿಸುವ ವಿಡಿಯೋಗಳಾಗಿರುತ್ತವೆ. ಇನ್ನು ಕೆಲವು ಪ್ರಾಣಿ  – ಪಕ್ಷಿಗಳ ಕುರಿತಾಗಿದ್ದರೆ, ಇನ್ನು ಕೆಲವು ನಗೆ ತರಿಸುವಂತ್ತಿರುತ್ತವೆ.

ಇದೀಗ ಅಂತಹದೆ  ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನು ಓದಿ : ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

ಹೌದು, ಒಂದು ಬೈಕ್‌ ಮೇಲೆ ಯುವಕರಿಬ್ಬರು ಒಂಟೆಯನ್ನು ಕುಳಿಸಿಕೊಂಡು ಸವಾರಿ ಮಾಡುತ್ತಿರುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲೇನಿದೆ :

ಯುವಕರಿಬ್ಬರು ತಮ್ಮ ಬೈಕ್‌ ಮೇಲೆ ಒಂಟೆಯನ್ನು ಕುಳಿಸಿಕೊಂಡು ಆರಾಮವಾಗಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಇನ್ನು ಒಂಟೆ ಹಾಯಾಗಿ ಬಾಯಾಡಿಸುತ್ತ ಎಂಜಾಯ್‌ ಮಾಡುತ್ತ ಯುವಕರಿಗೆ ನಾನೇನು ಕಮ್ಮಿ ಇಲ್ಲ ಎಂಬಂತೆ ಫೊಸ್‌ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಇದೇ ರಸ್ತೆಯಲ್ಲಿ ಸಂಚರಿಸುತ್ತಿರುವ ಬೈಕ್‌ ಸವಾರರು ಈ ವಿಚಿತ್ರ ದಶ್ಯವನ್ನು ತಮ್ಮ ಮೊಬೈಲ್‌ ಪೋನ್‌ನಲ್ಲಿ ಸೆರೆ ಹಿಡಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ತಮಾಷೆ ಮತ್ತು ವಿಶಿಷ್ಟ ದೃಶ್ಯವಾದ ಹಿನ್ನಲೆಯಲ್ಲಿಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸದ್ಯಕ್ಕೆ ಈ ವಿಡಿಯೋ ಎಲ್ಲಿಯದು, ಯಾರು ಮಾಡಿದ್ದು, ಎಲ್ಲಿ ಮಾಡಿದ್ದು, ಯಾವಾಗ ಮಾಡಿದ್ದು ಎಂಬ ಬಗ್ಗೆ ಯಾವುದೇ ಸ್ಪಷ್ಟನೇ ಇಲ್ಲ. ಆದರೂ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ಇಲ್ಲಿದೇ ನೋಡಿ ವಿಡಿಯೋ :

RELATED ARTICLES
Most Popular

Recent Comments

- Advertisment -
Google search engine
error: Content is protected !!