Google search engine
Home Blog Page 20

Belagavi : ಪಾರಿವಾಳ ವಿಚಾರವಾಗಿ ಹೊಡೆದಾಟ ; ಇಬ್ಬರು ಅಪ್ರಾಪ್ತರು ಸೇರಿ 9 ಜನರ ಬಂಧನ.!

ಬೆಳಗಾವಿ : ಬೆಳಗಾವಿ ತಾಲೂಕು ಬಸ್ತವಾಡ (Bastawad) ಗ್ರಾಮದ ಜೈನ ಜಾತ್ರೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಈ ಬಗ್ಗೆ ಹಿರೇಬಾಗೇವಾಡಿ ಹಾಗೂ ಮಾಳ ಮಾರುತಿ ಪೋಲಿಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ (Separate case) ದಾಖಲಾಗಿದ್ದು ಪೊಲೀಸರು ಈ ಸಂಬಂಧ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಹಿರೇಬಾಗೇವಾಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸ್ತವಾಡ ಗ್ರಾಮದಲ್ಲಿ ಜೈನ ಜಾತ್ರೆ ಸಂದರ್ಭದಲ್ಲಿ ಜಾತ್ರೆಗೆ ಬಂದ ಆದಿತ್ಯಾ ಪಾಟೀಲ ಮತ್ತು ದರ್ಶನ ಕುಡಚಿ ಇವರಿಬ್ಬರ ಮಧ್ಯೆ ಪಾರಿವಾಳ (Pigeon) ವಿಷಯದ ಸಲುವಾಗಿ ರೂ.1500/- ಗಳನ್ನು ಕೊಡುವ ಬಗ್ಗೆ ವಾದ- ವಿವಾದ ಉಂಟಾಗಿ ಗಲಾಟೆಯಾಗಿದೆ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಆದಿತ್ಯಾ ಪಾಟೀಲ ಹಾಗೂ ಆತನೊಂದಿಗೆ ಇನ್ನೂ 08 ಜನ ಸೇರಿ ದರ್ಶನ ಕುಡಚಿಯನ್ನು ಹೊಡೆದಿದ್ದು, ಈ ವಿಷಯವಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದರಲ್ಲಿ ಮೂರು ಆರೋಪಿತರನ್ನು ಹಿರೇಬಾಗೇವಾಡಿ ಪೊಲೀಸರು ದಸ್ತಗೀರ (Arrest) ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ ಕುಡಚಿ ಈತನ ಸಹಚರರು ಕೂಡಿಕೊಂಡು ಇದೇ ಸಿಟ್ಟಿನಿಂದ ಬಸವಣ ಕುಡಚಿಗೆ ಬಂದು ಆದಿತ್ಯಾ ಪಾಟೀಲನ ಮನೆಗೆ ಹೋಗಿ ಆದಿತ್ಯಾ ಎಲ್ಲಿದ್ದಾನೆ ಎಂದು ಆತನ ಸಹೋದರ ಮತ್ತು ತಂದೆಗೆ ಹೊಡೆದು ಗಲಾಟೆ (bother) ಮಾಡಿದ್ದಾರೆ.

ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಆರು ಜನ ಆರೋಪಿತರನ್ನು ಮಾಳಮಾರುತಿ ಪೊಲೀಸರು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಇದನ್ನು ಓದಿ : ಬೆಳಗಾವಿ : ಪ್ರೀತಿ ವಿಚಾರವಾಗಿ double ಮರ್ಡರ್ ; ಶಾಕ್‌ ಆದ ಜನ.!

ಘಟನೆ ವಿವರ : ದರ್ಶನ್ ಮತ್ತು ಅಪ್ರಾಪ್ತನ ನಡುವೆ ಗಲಾಟೆ ನಡೆದಿದೆ. ಅಪ್ರಾಪ್ತನಿಗೆ ಒಂದೂವರೆ ಸಾವಿರಕ್ಕೆ ಪಾರಿವಾಳ ಮಾರಾಟ ಮಾಡಿದ್ದ ದರ್ಶನ್. ಪಾರಿವಾಳ ಪಡೆದಿದ್ದ ಹಣ ವಾಪಸ್ ಕೊಡುವಂತೆ ದರ್ಶನ್ ಕೇಳಿದ್ದಾನೆ. ಪದೇಪದೆ ಹಣ ಕೇಳಿರುವುದಕ್ಕೆ ಸಿಟ್ಟಿಗೆದ್ದ ಆಪ್ರಾಪ್ತ ಯುವಕ ಬೆದರಿಕೆ ಹಾಕಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಪ್ರಾಪ್ತ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ದರ್ಶನ್ ಎಂಬಾತನಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇದೇ ಸಿಟ್ಟಿಗೆ ರಾತ್ರೋರಾತ್ರಿ ಸಿನಿಮಾ ಸ್ಟೈಲ್‌ನಲ್ಲಿ 15ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಬಸವನಕುಡಚಿ ಗ್ರಾಮಕ್ಕೆ ಬಂದಿದ್ದ ದರ್ಶನ್ ಗ್ರಾಮದಲ್ಲಿರುವ ಅಪ್ರಾಪ್ತ ಮನೆಗೆ ನುಗ್ಗಿ ಮನೆ ಧ್ವಂಸ ಮಾಡಲು ಯತ್ನಿಸಿದ್ದಾನೆ. ಅಪ್ರಾಪ್ತ ಯುವಕನ ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ಧ್ವಂಸಗೊಳಿಸಿ ಪಾತ್ರೆಗಳನ್ನು ಚಿಲ್ಲಾಪಿಲ್ಲಿ ಮಾಡಿರುವ ದರ್ಶನ್ ಗ್ಯಾಂಗ್, ಬಳಿಕ ಅಪ್ರಾಪ್ತನ ತಂದೆಗೆ ಬೆದರಿಸಿ ಕೈಗೆ ಹಗ್ಗದಿಂದ ಕಟ್ಟಿ ಮನೆಯಿಂದ ಕರೆದೊಯ್ಯಲು ಯತ್ನಿಸಿದೆ ನಮ್ಮ ಜೊತೆಗೆ ಬಾರದಿದ್ದರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.

ಇದನ್ನು ಓದಿ : Astrology : ಡಿಸೆಂಬರ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹಿರೇಬಾಗೇವಾಡಿ, ಮಾಳಮಾರುತಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಅಪ್ರಾಪ್ತ ಸೇರಿ ಮೂವರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತ ಮನೆ ಧ್ವಂಸಕ್ಕೆ ಯತ್ನಿಸಿದ 6 ಜನರನ್ನು ಬಂಧಿಸಿ ಮಾಳಮಾರುತಿ ಪೊಲೀಸರು ಜೈಲಿಗಟ್ಟಿದ್ದಾರೆ.

Astrology : ಡಿಸೆಂಬರ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 06ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ವಿವಾದಗಳಿಂದ ದೂರವಿರುವುದು ಉತ್ತಮ. ವೃತ್ತಿ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ ಮತ್ತು ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತವೆ. ಹಣಕಾಸಿನ ಫಲಿತಾಂಶಗಳನ್ನು ನಿರೀಕ್ಷಿಸಿದಂತೆ ಇರುವುದಿಲ್ಲ.

*ವೃಷಭ ರಾಶಿ*
ಬಾಲ್ಯದ ಗೆಳೆಯರ ಆಗಮನ ಸಂತಸ ತರುತ್ತದೆ. ಸ್ಥಿರಾಸ್ತಿ ವಿಷಯಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಸಂಬಳದ ಬಗ್ಗೆ ಶುಭ ಸುದ್ದಿ ದೊರೆಯುತ್ತದೆ. ಸಂಗಾತಿಯೊಂದಿಗೆ ದೈವಿಕ ದರ್ಶನವನ್ನು ಪಡೆಯುತ್ತೀರಿ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

*ಮಿಥುನ ರಾಶಿ*
ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಸ್ನೇಹಿತರ ನೆರವಿನಿಂದ ಸಾಲದ ಸಮಸ್ಯೆಗಳಿಂದ ಹೊರಬರುತ್ತೀರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.

*ಕಟಕ ರಾಶಿ*
ವೃತ್ತಿಪರ ವ್ಯವಹಾರಗಳು ಹೆಚ್ಚು ನಿರುತ್ಸಾಹ ಗೊಳಿಸುತ್ತವೆ. ಕೈಗೊಂಡ ಕಾರ್ಯಕ್ರಮಗಳು ನಿಧಾನವಾಗಿ ಸಾಗುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುವುದಿಲ್ಲ. ನಿಮ್ಮ ಮಕ್ಕಳ ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸಿ.

*ಸಿಂಹ ರಾಶಿ*
ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆಪ್ತ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು. ಕುಟುಂಬ ಸದಸ್ಯರ ವರ್ತನೆ ನೋವುಂಟು ಮಾಡುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುತ್ತಿರುವ ಜವಾಬ್ದಾರಿಗಳಿಂದಾಗಿ, ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ಕನ್ಯಾ ರಾಶಿ*
ಯೋಜಿತ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಪರಿಹಾರವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.

ಇದನ್ನು ಓದಿ : ಬೆಳಗಾವಿ : ಪ್ರೀತಿ ವಿಚಾರವಾಗಿ double ಮರ್ಡರ್ ; ಶಾಕ್‌ ಆದ ಜನ.!

*ತುಲಾ ರಾಶಿ*
ನೇತ್ರ ಸಂಬಂಧಿ ಅನಾರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ಮನೆಯಲ್ಲಿ ಕೆಲವರ ವರ್ತನೆಯಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ಉದ್ಯೋಗ ವಿಚಾರಗಳಲ್ಲಿ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು.

*ವೃಶ್ಚಿಕ ರಾಶಿ*
ಆದಾಯ ಮಾರ್ಗಗಳು ತೃಪ್ತಿಕರವಾಗಿರುತ್ತವೆ. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಕುಟುಂಬದ ಸದಸ್ಯರ ಸಹಕಾರದಿಂದ ಮಹತ್ವದ ಕಾರ್ಯಕ್ರಮಗಳನ್ನು ಪೂರ್ಣಗೊಲಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳಿದ್ದರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೀರಿ.

*ಧನುಸ್ಸು ರಾಶಿ*
ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳು ಕಿರಿಕಿರಿಯುಂಟುಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೆಚ್ಚು ನಿರುತ್ಸಾಹ ವಾತಾವರಣ ಇರುತ್ತದೆ. ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಧ್ಯಾತ್ಮಿಕ ಸೇವೆಗಳತ್ತ ಗಮನ ಹರಿಸುತ್ತೀರಿ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

*ಮಕರ ರಾಶಿ*
ಪ್ರಮುಖ ಕಾರ್ಯಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ಉಂಟಾಗುತ್ತದೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದಿ ಮುಂದುವರಿಯುತ್ತವೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಅಧಿಕಾರಿಗಳ ಕೃಪಾಕಟಾಕ್ಷದಿಂದ ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆಗಳು ಉಂಟಾಗುತ್ತವೆ.

ಇದನ್ನು ಓದಿ : Astrology : ಡಿಸೆಂಬರ್ 05ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಸ್ಥಿರಾಸ್ತಿ ಮಾರಾಟ ಉತ್ತಮವಾಗಿ ನಡೆಯುತ್ತದೆ. ವ್ಯಾಪಾರಗಳು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭವನ್ನು ಪಡೆಯುತ್ತೀರಿ. ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ.

*ಮೀನ ರಾಶಿ*
ಪ್ರಮುಖ ವ್ಯವಹಾರಗಳನ್ನು ಮುಂದೂಡಬೇಕು. ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಮರುಚಿಂತನೆ ಮಾಡುವುದು ಉತ್ತಮ. ಉದ್ಯೋಗಿಗಳಿಗೆ ಸಹೋದ್ಯೋಗಿಗಳೊಂದಿಗೆ ವಿವಾದಗಳು ಉಂಟಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಬೆಳಗಾವಿ : ಪ್ರೀತಿ ವಿಚಾರವಾಗಿ double ಮರ್ಡರ್ ; ಶಾಕ್‌ ಆದ ಜನ.!

ನಿಪ್ಪಾಣಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ (Akkola Village in Nippani Taluk of Belgaum District) ಬಾಳೋಬಾ ಮಾಳ ಪ್ರದೇಶದಲ್ಲಿ ಯುವಕನೋರ್ವ ಸಿಟ್ಟಿನ ಭರದಲ್ಲಿ ಇಬ್ಬರನ್ನು ಭೀಕರವಾಗಿ ಕೊಲೆಗೈದ ಘಟನೆ ನಿನ್ನೆ (ದಿ.04) ರಾತ್ರಿ ನಡೆದಿದೆ.

ತನ್ನ ಪ್ರೀತಿಯನ್ನ ನಿರಾಕರಿಸಿದ (Denied love) ಹಿನ್ನಲೆಯಲ್ಲಿ ಯುವತಿಯ ತಾಯಿ ಮತ್ತು ಯುವತಿಯ ತಮ್ಮನನ್ನು ಹತ್ಯೆ ಮಾಡಲಾಗಿದೆ (The mother of the young woman and the young woman’s brother were killed) ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಪ್ರೀತಿ ವಿಚಾರವಾಗಿ (love matter) ಯುವತಿಯ ತಾಯಿ ಯುವಕನಿಗೆ ಕರೆದು ಬುದ್ಧಿವಾದ (wisdom) ಹೇಳಿದ್ದಳು. ಅದರಿಂದ ಸಿಟ್ಟಿಗೆದ್ದ ಆತ ಯುವತಿಯ ತಾಯಿ ಮಂಗಲ್ ನಾಯಕ (50) ಮತ್ತು ಯುವತಿಯ ತಮ್ಮ ಪ್ರಜ್ವಲ್ ನಾಯಕ (18 ) ಇವರನ್ನು ಕೆಲವರ ಜೊತೆ ಸೇರಿ ಯುವಕ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ರವಿ ( 32) ಎಂಬ ಯುವಕ ಇತರರ ಜೊತೆ ಸೇರಿ ಇಬ್ಬರನ್ನು ಕೊಲೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಕೊಲೆ ಆರೋಪದ ಮೇಲೆ ರವಿ ಮತ್ತು ಯುವತಿಯನ್ನು ನಿಪ್ಪಾಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ (Nippani police have taken custody) ಎಂದು ತಿಳಿದು ಬಂದಿದೆ. ಈ ಕುರಿತು ನಿಪ್ಪಾಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Astrology : ಡಿಸೆಂಬರ್ 05ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 05ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಕೈಗೆತ್ತಿಕೊಂಡ ಕಾರ್ಯಗಳು ಸುಗಮವಾಗಿ ಪೂರ್ಣಗೊಳಿಸುತ್ತೀರಿ.ಮನೆಯಲ್ಲಿ ತಮ್ಮ ಆತ್ಮೀಯ ರೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತೀರಿ. ವ್ಯಾಪಾರಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಹೊಸ ಬಟ್ಟೆ ಖರೀದಿಸುತ್ತೀರಿ.

*ವೃಷಭ ರಾಶಿ*
ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಪ್ರಾರಂಭಿಸಿದ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಇತರರೊಂದಿಗೆ ಆತುರದಿಂದ ಮಾತನಾಡುವುದುಒಳ್ಳೆಯ
ದಲ್ಲ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಮಕ್ಕಳ ಆರೋಗ್ಯ ಸಮಸ್ಯೆಗಳು ಸ್ವಲ್ಪಮಟ್ಟಿಗೆ ನೋವುಂಟು ಮಾಡುತ್ತವೆ. ವ್ಯಾಪಾರಗಳು ಮತ್ತು ಉದ್ಯೋಗಗಳಲ್ಲಿ ನಿರೀಕ್ಷೆಗಳು ಈಡೇರುತ್ತವೆ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

*ಮಿಥುನ ರಾಶಿ*
ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಮನೆಯ ಹೊರಗೆ ಕೆಲಸದ ಒತ್ತಡ ಹೆಚ್ಚಾಗಿ ತಲೆನೋವು ಉಂಟಾಗುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳತ್ತ ಗಮನ ಹರಿಸುತ್ತೀರಿ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ವೃತ್ತಿಪರವ್ಯವಹಾರಗಳು ಸೀಮಿತಗೊಳ್ಳುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ.

*ಕಟಕ ರಾಶಿ*
ಪ್ರಮುಖ ವಿಷಯಗಳಲ್ಲಿ ಆಪ್ತ ಸ್ನೇಹಿತರ ಸಲಹೆಗಳು ಕೂಡಿ ಬರುತ್ತದೆ. ಕೈಗೊಂಡಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಹೋದರರಿಂದ ಶುಭ ಆಹ್ವಾನಗಳು ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿಸಾಧಿಸಲಾಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ.

*ಸಿಂಹ ರಾಶಿ*
ಬಂಧುಗಳೊಂದಿಗೆ ವಿವಾದಗಳಿರುತ್ತವೆ. ಹಣಕಾಸಿನ ಪರಿಸ್ಥಿತಿ ಗೊಂದಲಮಯವಾಗಿರುತ್ತದೆ. ಹೊಸ ಸಾಲದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಹೆಚ್ಚು ನೋವುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಪಾಲುದಾರರೊಂದಿಗೆ ವಿವಾದಗಳು ಉದ್ಭವಿಸುತ್ತವೆ. ಹೆಚ್ಚುವರಿ ಹೊಣೆಗಾರಿಕೆಯಿಂದ ಉದ್ಯೋಗಿಗಳಿಗೆ ಸಮರ್ಪಕ ವಿಶ್ರಾಂತಿ ಸಿಗುವುದಿಲ್ಲ.

*ಕನ್ಯಾ ರಾಶಿ*
ಅಗತ್ಯಕ್ಕೆ ತಕ್ಕಂತೆ ಕುಟುಂಬ ಸದಸ್ಯರಿಂದ ಸಹಾಯ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಸಮುದಾಯದ ಪ್ರಮುಖರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಭೂಮಿಗೆ ಸಂಬಂಧಿಸಿದ ಖರೀದಿಗಳು ಮತ್ತು ಮಾರಾಟಗಳು ಕೂಡಿಬರುತ್ತವೆ. ವ್ಯಾಪಾರಗಳು ಕೆಲವು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ. ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುವಂಥ ಕೆಲಸವನ್ನು ಮಾಡುತ್ತೀರಾ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

*ತುಲಾ ರಾಶಿ*
ಹೊಸ ಉದ್ಯಮ ಆರಂಭಿಸುವಲ್ಲಿ ಸಮಸ್ಯೆಗಳು ಎದುರಾಗುತ್ತವೆ.
ಸಾಲಗಾರರ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ವಾಹನ ಅಪಾಯದ ಸೂಚನೆಗಳಿವೆ. ಕುಟುಂಬದಲ್ಲಿ ಕೆಲವರ ವರ್ತನೆ ಅಚ್ಚರಿ ಮೂಡಿಸುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅನಿರೀಕ್ಷಿತ ಸಮಸ್ಯೆಗಳು ಉಂಟಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.

*ವೃಶ್ಚಿಕ ರಾಶಿ*
ಸಮಾಜದಲ್ಲಿ ಪ್ರಮುಖ ರೊಂದಿಗಿನ ಪರಿಚಯಗಳು ವಿಸ್ತಾರ. ಮನೆಗೆ ಬಂಧು ಮಿತ್ರರ ಆಗಮನ ಸಂತಸ ತರುತ್ತದೆ. ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆ ಹರಿಯುತ್ತವೆ. ದೂರದ ಸಂಬಂಧಿಕರಿಂದ ಮಹತ್ವದ ಮಾಹಿತಿ ದೊರೆಯುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚು ಅನುಕೂಲಕರ ವಾತಾವರಣ ಇರುತ್ತದೆ.

*ಧನಸ್ಸು ರಾಶಿ*
ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಭೇಟಿ ಲಾಭದಾಯಕವಾಗಿರುತ್ತದೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ. ಕೈಗೊಂಡ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗದ ವಾತಾವರಣ ಶಾಂತಿಯುತವಾಗಿರುತ್ತದೆ.

*ಮಕರ ರಾಶಿ*
ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಸಂಗಾತಿಯೊಂದಿಗೆ ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವೃತ್ತಿಪರ ವ್ಯವಹಾರಗಳು ಸೀಮಿತವಾಗಿರುತ್ತವೆ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತದೆ. ಕೌಟುಂಬಿಕ ವ್ಯವಹಾರಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಆಕಸ್ಮಿತವಾಗಿ ನಿರ್ಧಾರಗಳನ್ನು ಬಡಲಾಯಿಸಿಕೊಳ್ಳಲಾಗುತ್ತದೆ. ದೂರದ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳ ವಿಷಯದಲ್ಲಿ ಆತುರ ಒಳ್ಳೆಯದಲ್ಲ. ಮಕ್ಕಳ ಶಿಕ್ಷಣ ಉದ್ಯೋಗ ಪ್ರಯತ್ನಗಳು ವಿಫಲಗೊಳ್ಳುತ್ತವೆ.

*ಮೀನ ರಾಶಿ*
ಆಪ್ತರೊಂದಿಗೆ ಅನುಕೂಲತೆಯಿಂದ ವರ್ತಿಸುವಿರಿ. ಮನೆಯ ಹೊರಗೆ ಹೊಸ ಪ್ರೋತ್ಸಾಹ ಸಿಗುತ್ತದೆ. ಆರ್ಥಿಕ ವಾತಾವರಣವು ಅನುಕೂಲಕರವಾಗಿರುತ್ತದೆ. ಹೊಸ ವಸ್ತು ಲಾಭವನ್ನು ಪಡೆಯಲಾಗುತ್ತದೆ. ಬಾಲ್ಯದ ಸ್ನೇಹಿತರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ಉದ್ಯೋಗಿಗಳಲ್ಲಿ ಕೆಲಸದ ಹೊರೆಯಿಂದ ಮುಕ್ತರಾಗುತ್ತೀರಿ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಬೆಳಗಾವಿ : ಬಸ್ ಸೀಟಿಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆಯವರೆಗೂ ಮುಂದುವರೆದಿದ್ದು, ಹೊರಟಿದ್ದ ಬಸ್ ತಡೆದು ಗಂಡ ಹಾಗೂ ಗರ್ಭಿಣಿಗೆ ಅನ್ಯ ಕೋಮಿನ ಯುವಕರ ಗುಂಪು ಮನಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಗೋಕಾಕಕ್ಕೆ ಹೊರಟಿದ್ದ ಬಸ್‌ನಲ್ಲಿ ಜನಜಂಗುಳಿ ಇತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿ ಗರ್ಭಿಣಿ ಇದ್ದಾಳೆ ಎನ್ನುವ ಕಾರಣದಿಂದ ಸೀಟು ಹಿಡಿದಿದ್ದ ಪತಿ ಹಾಗೂ ಪಕ್ಕದಲ್ಲಿದ್ದ ಅನ್ಯ ಕೋಮಿನ ಮಹಿಳೆಯರು ಸೀಟಿಗಾಗಿ ತಂಟೆ ತೆಗೆದಿದ್ದರು. ಬಳಿಕ ಬಸ್ಸು ಹೊರಟು ಹುಕ್ಕೇರಿ ತಾಲೂಕಿನ ನೇರ್ಲಿ-ಮಸರಗುಪ್ಪಿ ಗ್ರಾಮದ ನಡುವೆ ಹೋಗುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಗೋಕಾಕ ತಾಲೂಕಿನ ಒಂದು ಗ್ರಾಮದ ಅನ್ಯ ಕೋಮಿನ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಕರೆ ಮಾಡಿದ ಹಿನ್ನಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂದು ಬಸ್ಸು ತಡೆದ ಸುಮಾರು 12ರಿಂದ 15 ಜನರಿದ್ದ ಅನ್ಯ ಕೋಮಿನ ಯುವಕರ ತಂಡವು ಬೈಕ್ ಮೇಲೆ ಬಂದು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ಗರ್ಭಿಣಿ ಮಹಿಳೆ ಹಾಗೂ ಪತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ.

ನನ್ನ ತಂದೆ-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕುತ್ತ ಬಸ್ಸಿನಲ್ಲಿದ್ದ ಪ್ರಯಾಣಿಕರ ಮುಂದೆ ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಪರಿ ಪರಿಯಾಗಿ ಹೇಳುತ್ತ ತಿರುಗುತ್ತಿದ್ದ ದೃಶ್ಯವಂತೂ ಎಲ್ಲರ ಮನ ಕರಗುವಂತೆ ಮಾಡಿತು.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಪತಿಯನ್ನು ಯುವಕರು ಹೊಡೆಯುತ್ತಿದ್ದಂತೆ ನನ್ನ ಪತಿಗೆ ಹೊಡೆಯ ಬೇಡಿ ಎಂದು ಬಿಡಿಸಲು ಹೋದ ಪತ್ನಿಗೂ ಹೊಡೆದಿದ್ದಾರೆ. ಆದರೆ ಸಿಟಿಗಾಗಿ ಬಸ್ಸಿನಲ್ಲಿ ಆದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಮಾತ್ರ ವಿಪರ್ಯಾಸವೇ ಸರಿ.

ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಡೆಸ್ಕ್‌ : ಸಾಮಾಜಿಕ  ಜಾಲತಾಣದಲ್ಲಿ ಪ್ರತಿದಿನ ಒಂಬಿಲ್ಲೊಂದು ಚಿತ್ರ-ವಿಚಿತ್ರ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸಮಾಜಕ್ಕೆ ಪೂರಕವಾಗಿದ್ದರೆ, ಇನ್ನು ಕೆಲವು ಯುವ ಪೀಳಿಗೆಯನ್ನು ದಾರಿ ತಪ್ಪಿಸುವ, ಸಂಸ್ಕಾರವನ್ನು ಟೀಕಿಸುವ ವಿಡಿಯೋಗಳಾಗಿರುತ್ತವೆ. ಇನ್ನು ಕೆಲವು ಪ್ರಾಣಿ  – ಪಕ್ಷಿಗಳ ಕುರಿತಾಗಿದ್ದರೆ, ಇನ್ನು ಕೆಲವು ನಗೆ ತರಿಸುವಂತ್ತಿರುತ್ತವೆ.

ಇದೀಗ ಅಂತಹದೆ  ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನು ಓದಿ : ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

ಹೌದು, ಒಂದು ಬೈಕ್‌ ಮೇಲೆ ಯುವಕರಿಬ್ಬರು ಒಂಟೆಯನ್ನು ಕುಳಿಸಿಕೊಂಡು ಸವಾರಿ ಮಾಡುತ್ತಿರುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲೇನಿದೆ :

ಯುವಕರಿಬ್ಬರು ತಮ್ಮ ಬೈಕ್‌ ಮೇಲೆ ಒಂಟೆಯನ್ನು ಕುಳಿಸಿಕೊಂಡು ಆರಾಮವಾಗಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಇನ್ನು ಒಂಟೆ ಹಾಯಾಗಿ ಬಾಯಾಡಿಸುತ್ತ ಎಂಜಾಯ್‌ ಮಾಡುತ್ತ ಯುವಕರಿಗೆ ನಾನೇನು ಕಮ್ಮಿ ಇಲ್ಲ ಎಂಬಂತೆ ಫೊಸ್‌ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಇದೇ ರಸ್ತೆಯಲ್ಲಿ ಸಂಚರಿಸುತ್ತಿರುವ ಬೈಕ್‌ ಸವಾರರು ಈ ವಿಚಿತ್ರ ದಶ್ಯವನ್ನು ತಮ್ಮ ಮೊಬೈಲ್‌ ಪೋನ್‌ನಲ್ಲಿ ಸೆರೆ ಹಿಡಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ತಮಾಷೆ ಮತ್ತು ವಿಶಿಷ್ಟ ದೃಶ್ಯವಾದ ಹಿನ್ನಲೆಯಲ್ಲಿಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸದ್ಯಕ್ಕೆ ಈ ವಿಡಿಯೋ ಎಲ್ಲಿಯದು, ಯಾರು ಮಾಡಿದ್ದು, ಎಲ್ಲಿ ಮಾಡಿದ್ದು, ಯಾವಾಗ ಮಾಡಿದ್ದು ಎಂಬ ಬಗ್ಗೆ ಯಾವುದೇ ಸ್ಪಷ್ಟನೇ ಇಲ್ಲ. ಆದರೂ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ಇಲ್ಲಿದೇ ನೋಡಿ ವಿಡಿಯೋ :

Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 04ರ ಬುಧವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಹೊಸ ಕೆಲಸಗಳಿಗೆ ಚಾಲನೆ ನೀಡುತ್ತೀರಿ ಸ್ನೇಹಿತರೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ.

*ವೃಷಭ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಆಶಾದಾಯಕವಾಗಿರುತ್ತವೆ. ಹೊಸ ಕಾಮಗಾರಿಗಳಿಗೆ ಚಾಲನೆ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಸ್ಥಿರಾಸ್ತಿ ವಿವಾದಗಳ ಇತ್ಯರ್ಥವಾಗುತ್ತವೆ. ಹೊಸ ವಾಹನ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ.

ಇದನ್ನು ಓದಿ : ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

*ಮಿಥುನ ರಾಶಿ*
ಪ್ರಮುಖ ವ್ಯವಹಾರಗಳಲ್ಲಿ ಅಡಚಣೆಗಳು ಉಂಟಾಗುತ್ತವೆ. ವ್ಯಾಪಾರದಲ್ಲಿ ಖರ್ಚುಗಳು ಹೆಚ್ಚಾಗುತ್ತವೆ. ಆಕಸ್ಮಿಕ ಪ್ರಯಾಣದ ಸೂಚನೆಗಳಿವೆ. ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಮನೆಯ ಹೊರಗೆ ಒತ್ತಡ ಹೆಚ್ಚಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳು ನಿರುತ್ಸಾಹ ಗೊಳಿಸುತ್ತವೆ.

*ಕಟಕ ರಾಶಿ*
ಪ್ರಮುಖ ಕೆಲಸವನ್ನು ಮುಂದೂಡುವುದು ಉತ್ತಮ. ವೃತ್ತಿಪರ ವ್ಯವಹಾರದಲ್ಲಿ ನೀವು ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯುವುದಿಲ್ಲ. ಸಹೋದರರೊಂದಿಗೆ ಆಸ್ತಿ ವಿವಾದಗಳು ಉಂಟಾಗುತ್ತವೆ. ಮನಸ್ಸಿನ ಶಾಂತಿಗಾಗಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ.

*ಸಿಂಹ ರಾಶಿ*
ಮನೆಯ ಹೊರಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರ ಸಹಾಯ ಮತ್ತು ಬೆಂಬಲ ದೊರೆಯುತ್ತದೆ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ಸಿಗುತ್ತದೆ.

*ಕನ್ಯಾ ರಾಶಿ*
ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿ ಕಷ್ಟಸುಖಗಳ ಬಗ್ಗೆ ಚರ್ಚಿಸುತ್ತೀರಿ. ಹೊಸ ವಾಹನ ಯೋಗವಿದೆ. ದೀರ್ಘಕಾಲದ ವಿವಾದಗಳಿಂದ ಮುಕ್ತಿ ದೊರೆಯುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.

ಇದನ್ನು ಓದಿ : Belagavi : ಖಾನಾಪುರ ಅರಣ್ಯದಲ್ಲಿ ಕರಡಿ ದಾಳಿಗೆ ತುಂಡಾಯ್ತು ರೈತನ ಕಾಲು.!

*ತುಲಾ ರಾಶಿ*
ಹಣಕಾಸಿನ ತೊಂದರೆಗಳು ಕಿರಿಕಿರಿಯನ್ನು ಉಂಟುಮಾಡುತ್ತವೆ. ಹೊಸ ಸಾಲದ ಪ್ರಯತ್ನಗಳು ಅನುಕೂಲಕರವಾಗಿರುವುದಿಲ್ಲ. ಕೌಟುಂಬಿಕ ವ್ಯವಹಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕೈಗೊಂಡ ಕೆಲಸದಲ್ಲಿ ಅಡಚಣೆಗಳು ಉಂಟಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ವ್ಯಾಪಾರ ಉದ್ಯೋಗಗಳು ನಿರಾಶಾದಾಯಕವಾಗಿರುತ್ತವೆ.

*ವೃಶ್ಚಿಕ ರಾಶಿ*
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಗಳಿರುತ್ತವೆ, ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ, ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗುತ್ತದೆ. ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳಿರುತ್ತವೆ.

*ಧನುಸ್ಸು ರಾಶಿ.*
ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ ಮತ್ತು ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ತಿಳಿದುಕೊಳ್ಳುತ್ತೀರಿ. ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ರಾಜಕೀಯ ವಲಯಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚು ಅನುಕೂಲಕರ ವಾತಾವರಣ ಇರುತ್ತದೆ.

*ಮಕರ ರಾಶಿ*
ಕೌಟುಂಬಿಕ ಸಮಸ್ಯೆಗಳು ಕಿರಿಕಿರಿಯನ್ನು ಉಂಟುಮಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳಿರುತ್ತವೆ. ಆರ್ಥಿಕ ಗೊಂದಲ ಉಂಟಾಗುತ್ತದೆ. ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತವೆ. ಆರೋಗ್ಯ ವಿಷಯಗಳಿಗೆ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳು ಉಂಟಾಗುತ್ತವೆ.

ಇದನ್ನು ಓದಿ : Astrology : ಡಿಸೆಂಬರ್ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರಮುಖ ವ್ಯಕ್ತಿಗಳೊಂದಿಗಿನ ಪರಿಚಯಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ.

*ಮೀನ ರಾಶಿ*
ಪ್ರಮುಖ ವಿಷಯಗಳಲ್ಲಿ ಗೊಂದಲ ಉಂಟಾಗುತ್ತವೆ. ಅನಿರೀಕ್ಷಿತ ಪ್ರವಾಸಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ವ್ಯವಹಾರಗಳು ಮುಂದೆ ಸಾಗದೆ ನಿರಾಶೆ ಉಂಟಾಗುತ್ತವೆ. ನಿರುದ್ಯೋಗಿಗಳಿಗೆ ಅವಕಾಶಗಳು ಸೀಮಿತವಾಗಿರುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

0

ಬೆಂಗಳೂರು : ಕನ್ನಡ ಕಿರುತೆರೆ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ – 11 (Bigg Boss Season 11) ರ ಮನೆಯ ಸದಸ್ಯರು ಹೊಸ, ಹೊಸ ಟಾಸ್ಕ್‌ಗಳಲ್ಲಿ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಇದೀಗ ಇದು ರೋಚಕ ಘಟ್ಟವನ್ನ ತಲುಪಿದ್ದು, ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ (viewers stand on their toes) ಮಾಡಿದೆ.

ಬಿಗ್​​ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದು, ಇದೀಗ ಬಿಗ್‌ಬಾಸ್ ಸೀಸನ್ 11ರ ಮನೆಯಿಂದ ಹೊರ ಬಂದಿದ್ದಾರೆ.

ಇದನ್ನು ಓದಿ : Belagavi : ಖಾನಾಪುರ ಅರಣ್ಯದಲ್ಲಿ ಕರಡಿ ದಾಳಿಗೆ ತುಂಡಾಯ್ತು ರೈತನ ಕಾಲು.!

ಕಾರಣವೇನು.?

ಚೈತ್ರಾ ಕುಂದಾಪುರ & ಗ್ಯಾಂಗ್ ಮೇಲೆ ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದಬಾಬು ಎಂಬುವವರಿಗೆ ಕೋಟಿ – ಕೋಟಿ ವಂಚಿಸಿದ ಆರೋಪದಲ್ಲಿ ಅವರ ಮೇಲೆ ದೂರು ದಾಖಲಾಗಿತ್ತು. ವಂಚನೆ ಪ್ರಕರಣ (cheating case) ಕ್ಕೆ ಸಂಬಂಧಿಸಿದಂತೆ ಚೈತ್ರಾ ಕೋರ್ಟ್‌ಗೆ ಹಾಜರಾಗಿದ್ದರು.

ಈ ಹಿನ್ನಲೆಯಲ್ಲಿ ಇಂದು (ದಿ.03) ದಿಢೀರನೇ ಬಿಗ್ ಬಾಸ್ ಮನೆಯಿಂದ ಗುಟ್ಟಾಗಿ ಹೊರ ಬಂದಿದ್ದು, 1ನೇ ಎಸಿಎಂಎಂ ಕೋರ್ಟ್​​​ಗೆ (1st ACMM Court) ಹಾಜರಾಗಿದ್ದರು. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ (arrested) ಆಗಿದ್ದು, ಅವರು ವಿಚಾರಣೆ ಎದುರಿಸಿದ್ದರು.

ಇದನ್ನು ಓದಿ : Astrology : ಡಿಸೆಂಬರ್ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು (judge) ಚೈತ್ರಾ ಕುಂದಾಪುರ ಅವರ ಕೇಸ್‌ನ ವಿಚಾರಣೆ (hearing) ಯನ್ನು ಬರುವ ಜನೇವರಿ 13ರಂದು ನಡೆಸುವುದಾಗಿ ಹೇಳಿ ಮುಂದೂಡಿದ್ದಾರೆ. ಕೇಸ್‌ ಮುಂದುವರೆದ ಕಾರಣ ಚೈತ್ರಾ ಕುಂದಾಪುರ ಅವರನ್ನು ಮತ್ತೆ ಬಿಗ್‌ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ.

ಕೇಸ್‌ ಮುಂದೂಡಿದ ಪರಿಣಾಮ ಚೈತ್ರಾ ಕುಂದಾಪುರ ಅವರಿಗೆ ಸದ್ಯ ಜನವರಿ ರಿಲೀಫ್ (relief) ಸಿಕ್ಕಿದೆ.

Belagavi : ಖಾನಾಪುರ ಅರಣ್ಯದಲ್ಲಿ ಕರಡಿ ದಾಳಿಗೆ ತುಂಡಾಯ್ತು ರೈತನ ಕಾಲು.!

ಬೆಳಗಾವಿ : ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ಮಾನ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ಕರಡಿ ದಾಳಿಯಿಂದ ರೈತನ ಕಾಲು ತುಂಡಾಗಿರುವ ಘಟನೆ ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಂಭವಿಸಿದೆ.

ಕರಡಿ ದಾಳಿಗೆ ಒಳಗಾದ ರೈತನನ್ನು ಮಾನ (Mana) ಗ್ರಾಮದ ಸಖಾರಾಮ ಗಾಂವಕರ (Sakharam Ganvakar) (62) ಎಂದುತಿಳಿದು ಬಂದಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನು ಓದಿ : Astrology : ಡಿಸೆಂಬರ್ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ರೈತ ಸಖಾರಾಮ ತಮ್ಮ ಪತ್ನಿಯೊಂದಿಗೆ ಜಾನುವಾರುಗಳ ಸಮೇತ ಹೊಲಕ್ಕೆ ಹೊರಟಿದ್ದರು. ಈ ಮಧ್ಯ ಕಾಡುದಾರಿಯಲ್ಲಿ ಕರಡಿ (Bear) ಎದುರಾಗಿದೆ. ಕರಡಿಯನ್ನು ನೋಡುತ್ತಿದ್ದಂತೆಯೇ ಸಖಾರಾಮ ತಮ್ಮ ಪತ್ನಿಯನ್ನು ಮರವೆರಿಸಿದ್ದಾರೆ.

ಇನ್ನೇನು ತಾವೂ ಮರ ಏರಬೇಕು ಎನ್ನುವಷ್ಟರಲ್ಲಿಯೇ ಓಡಿಬಂದ ಕರಡಿ ಎಡಗಾಲನ್ನು (left leg) ಬಾಯಲ್ಲಿ ಹಿಡಿದುಕೊಂಡು ಎಳೆದಾಡಿದೆ‌. ಕರಡಿ ದಾಳಿ ಎದುರಿಸಲು ರೈತ ತಮ್ಮ ಕೈಯಲ್ಲಿದ್ದ ಕೊಯ್ತಾದಿಂದ ಹೊಡೆದಿದ್ದರಿಂದ ಅದು ಓಡಿತು ಎಂದು ಸಖಾರಾಮ ತಿಳಿಸಿದ್ದಾರೆ.

ಇದನ್ನು ಓದಿ : Fungal ಚಂಡಮಾರುತ ಹಿನ್ನೆಲೆ ; ಕರ್ನಾಟಕದ ಈ ಜಿಲ್ಲೆಗಳಿಗೆ ರಜೆ.!

ಕರಡಿ ದಾಳಿಯಿಂದ ತುಂಡಾದ ಕಾಲಿನಿಂದ ತೀವ್ರ ರಕ್ತಸ್ರಾವದ ನಡುವೆಯೇ ರೈತ ಸಖಾರಾಮ ಮೊಬೈಲ್‌ (Mobile phone) ನಿಂದ ಪುತ್ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ (Forest dept. Staff) ಹಾಗೂ ಊರಿನ ಜನ ಗುಂಪಾಗಿ ರೈತನನ್ನು ಕಾಡಿನಲ್ಲಿ ಹುಡುಕಾಡಲು ಶುರು ಮಾಡಿದರು. ಕೊನೆಗೆ ಸಂಜೆ 5 ಗಂಟೆಗೆ ಅವರನ್ನು ಪತ್ತೆ ಮಾಡಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಎಡಗಾಲನ್ನು ಕತ್ತರಿಸಿ ಶಸ್ತ್ರಚಿಕಿತ್ಸೆ (Operation) ಮಾಡಲಾಗಿದೆ ಎಂದು ಖಾನಾಪುರ ಎಸಿಎಫ್ (ACF) ಸುನೀತಾ ನಿಂಬರಗಿ ತಿಳಿಸಿದ್ದಾರೆ. ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

Astrology : ಡಿಸೆಂಬರ್ 03ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 03ರ ಮಂಗಳವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಹೊಸ ವಸ್ತು ವಸ್ತ್ರಗಳನ್ನು ಪಡೆಯುತ್ತೀರಿ.ಬಾಲ್ಯದ ಸ್ನೇಹಿತರನ್ನು ಭೇಟಿಯಾಗಿ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಹೆಚ್ಚು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ.

*ವೃಷಭ ರಾಶಿ*
ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಸಹೋದರರೊಂದಿಗೆ ಭೂ ವಿವಾದವಿರುತ್ತದೆ. ಸಂಬಂಧಿಕರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸುತ್ತೀರಿ. ವ್ಯಾಪಾರದಲ್ಲಿ ಕೆಲವು ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತವೆ. ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ.

ಇದನ್ನು ಓದಿ : Fungal ಚಂಡಮಾರುತ ಹಿನ್ನೆಲೆ ; ಕರ್ನಾಟಕದ ಈ ಜಿಲ್ಲಗಳಿಗೆ ರಜೆ.!

*ಮಿಥುನ ರಾಶಿ*
ಕೌಟುಂಬಿಕ ವಿಚಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಸಹೋದರರೊಂದಿಗೆ ದೃಢವಾದ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ದೂರದ ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಪಾಲುದಾರಿಕೆ ವ್ಯವಹಾರಗಳಿಗೆ ಸಕಾಲದಲ್ಲಿ ಹೂಡಿಕೆಗಳು ದೊರೆಯುತ್ತವೆ. ಉದ್ಯೋಗದ ವಾತಾವರಣ ಶಾಂತಿಯುತವಾಗಿರುತ್ತದೆ.

*ಕಟಕ ರಾಶಿ*
ಆಪ್ತ ಸ್ನೇಹಿತರಿಂದ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ಮನೆಯ ಹೊರಗೆ ಗೊಂದಲಮಯ ವಾತವರಣ ಇರುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ. ಅನಾರೋಗ್ಯದ ಸಮಸ್ಯೆಗಳು ಕಿರಿಕಿರಿಯುಂಟುಮಾಡುತ್ತವೆ. ಉದ್ಯೋಗದಲ್ಲಿ ಋಣಾತ್ಮಕ ವಾತಾವರಣವಿರುತ್ತದೆ. ವೃತ್ತಿಪರ ವ್ಯವಹಾರಗಳು ಋಣಾತ್ಮಕ ವಾತವರಣ ಇರುತ್ತದೆ.

*ಸಿಂಹ ರಾಶಿ*
ಪ್ರಮುಖ ವ್ಯವಹಾರಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಕುಟುಂಬ ಸದಸ್ಯರಿಂದ ನಿರೀಕ್ಷಿತ ಆರ್ಥಿಕ ಸಹಾಯ ದೊರೆಯುತ್ತದೆ. ಸಹೋದರರೊಂದಿಗೆ ಕುಟುಂಬದ ವಿಷಯಗಳನ್ನು ಚರ್ಚಿಸುತ್ತೀರಿ. ದೂರದ ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವ್ಯಾಪಾರಗಳು ಲಾಭದ ಹಾದಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ವಿವಾದಗಳು ರಾಜಿಯಾಗುತ್ತವೆ.

*ಕನ್ಯಾ ರಾಶಿ*
ಬರಬೇಕಾದ ಹಣ ಸಕಾಲದಲ್ಲಿ ವಸೂಲಿಯಾಗುತ್ತದೆ. ಆತ್ಮೀಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ವಿಶೇಷವಾಗಿ ಭಾಗವಹಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ನಿರ್ಧಾರಗಳನ್ನು ಕಾರ್ಯಗತಗೊಳಿ, ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳ ಕಾರ್ಯವೈಖರಿಗೆ ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತೀರಿ.

ಇದನ್ನು ಓದಿ : Accident : ರಸ್ತೆ ಅಪಘಾತದಲ್ಲಿ ತಂದೆ – ಮಗ ಸಾವು.!

*ತುಲಾ ರಾಶಿ*
ಹಳೇ ಸಾಲ ತೀರಿಸಾಲು ಹೊಸ ಸಾಲ ಪ್ರಯತ್ನಗಳನ್ನು ಮಾಡುತ್ತೀರಿ . ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ದೈವಿಕ ದರ್ಶನ ಪಡೆಯುತ್ತೀರಿ. ವ್ಯವಹಾರದಲ್ಲಿ ಆತುರದ ನಿರ್ಧಾರಗಳು ಒಳ್ಳೆಯದಲ್ಲ. ನಿರುದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳಿಸುತ್ತವೆ. ಉದ್ಯೋಗಿಗಳಿಗೆ ಶ್ರಮ ತಕ್ಕ ಫಲ ಸಿಗುವುದಿಲ್ಲ.

*ವೃಶ್ಚಿಕ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಶ್ರಮದಿಂದಲೂ ಪೂರ್ಣಗೊಳ್ಳುವುದಿಲ್ಲ, ಕೆಲವು ವಿಚಾರಗಳಲ್ಲಿ ಸಹೋದರರೊಂದಿಗೆ ವಿವಾದ ಉಂಟಾಗುತ್ತದೆ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ಭೂಮಿಗೆ ಸಂಬಂಧಿಸಿದ ವಿವಾದಗಳು ಸ್ವಲ್ಪ ಒತ್ತಡಗಳು ಉಂಟಾಗುತ್ತವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಅಡೆತಡೆಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಕೆಲಸದ ಒತ್ತಡ ಹೆಚ್ಚಾಗುತ್ತದೆ.

*ಧನುಸ್ಸು ರಾಶಿ*
ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಹೊಸ ಪರಿಚಯ ಉಂಟಾಗುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಬರಬೇಕಾದ ಹಣ ಸಕಾಲಕ್ಕೆ ದೊರೆಯುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತೀರಿ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷೆಗಳು ಈಡೇರುತ್ತವೆ.

*ಮಕರ ರಾಶಿ*
ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತೀರಿ. ಪ್ರಮುಖ ರಾಜಕೀಯ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ಕೈಗೊಂಡ ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಭೂಮಿಗೆ ಸಂಬಂಧಿಸಿದ ಖರೀದಿ ಮತ್ತು ಮಾರಾಟ ಲಾಭದಾಯಕವಾಗಿರುತ್ತದೆ. ವ್ಯಾಪಾರಗಳು ವಿಸ್ತರಿಸುತ್ತವೆ ಮತ್ತು ಉದ್ಯೋಗಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತೀರಿ.

ಇದನ್ನು ಓದಿ : Astrology : ಡಿಸೆಂಬರ್ 02ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಪ್ರಯಾಣದಲ್ಲಿ ರಸ್ತೆ ತಡೆಗಳು ಉಂಟಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಕಿರಿಕಿರಿಯನ್ನುಂಟುಮಾಡುತ್ತವೆ. ವ್ಯಾಪಾರವು ನಿಧಾನವಾಗುತ್ತದೆ ಮತ್ತು ಉದ್ಯೋಗದ ವಾತಾವರಣವು ಕಿರಿಕಿರಿಯುಂಟುಮಾಡುತ್ತದೆ.

*ಮೀನ ರಾಶಿ*
ಕುಟುಂಬ ಸದಸ್ಯರ ವರ್ತನೆಯಿಂದ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಖರ್ಚು ಮತ್ತು ಶ್ರಮ ಹೆಚ್ಚಾಗುತ್ತದೆ. ಆತ್ಮೀಯ ಸ್ನೇಹಿತರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ಬಾಲ್ಯದ ಸ್ನೇಹಿತರೊಂದಿಗೆ ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ವೃತ್ತಿಪರ ಉದ್ಯೋಗಗಳು ಸಾಮಾನ್ಯವಾಗಿ ಸಾಗುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

error: Content is protected !!