Monday, February 17, 2025
Google search engine
HomeNewsಲೋಕಾಯುಕ್ತ ಬಲೆಗೆ ಬಿದ್ದ PDO.!
spot_img
spot_img
spot_img
spot_img
spot_img

ಲೋಕಾಯುಕ್ತ ಬಲೆಗೆ ಬಿದ್ದ PDO.!

ಕಲಬುರಗಿ : ಬಾಕಿ ಪಾವತಿ ಹಾಗೂ ಮರು ನೇಮಕಕ್ಕೆ ರೂ. ಹದಿನೇಳು ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಪಿಡಿಒ ಅವರನ್ನು ಲೋಕಾಯುಕ್ತ ಪೊಲೀಸರು (Lokayukta police) ಸೋಮವಾರ ಬಂಧಿಸಿದ್ದಾರೆ.

ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ (Pritiraj)ಅವರೇ ಲಂಚ ಪಡೆದ ಆರೋಪ ಹೊತ್ತಿದ್ದಾರೆ.

ಇದನ್ನು ಓದಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣ ; ಪವಿತ್ರಾ ಗೌಡ ಸೇರಿ 6 ಜನರು ಜೈಲಿನಿಂದ ಬಿಡುಗಡೆ.!

ಪಂಪ್ ಆಪರೇಟರ್ ಗುರುಸಿದ್ದಯ್ಯ (Gurusiddayya) ನೀಡಿದ ದೂರಿನ ಆಧಾತದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಗುರುಸಿದ್ದಯ್ಯನವರ 6 ತಿಂಗಳ ಸಂಬಳ
ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಬಾಕಿ ಮಂಜೂರಾತಿ ಹಾಗೂ ಮರು ನೇಮಕಕ್ಕೆ ರೂ. ಹದಿನೇಳು ಸಾವಿರ (senenteen thousand) ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ : Astrology : ಡಿಸೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಪ್ರೀತಿರಾಜ್ ಧರಿಯಾಪುರದ ಉಪ್ಪಿನಂಗಡಿಯಲ್ಲಿರುವ ಮನೆಯಲ್ಲಿ ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದಾಗ ಪೊಲೀಸರು ಬಂಧಿಸಿದ್ದು, ಆರೋಪಿ PDO ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್, ಸಿಬ್ಬಂದಿಗಳಾದ ಮಸೂದ್, ಮಲ್ಲಿನಾಥ್, ಬಸವರಾಜ್, ಸಂತೋಷ್, ಮಧುಮತಿ, ಪ್ರಮೋದ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!