ಡೆಸ್ಕ್ : ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ದೂರು ಸಲ್ಲಿಸಿದ್ದ ವ್ಯಕ್ತಿ ಭೂಪಾಲಪಲ್ಲಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಮೃತ ವ್ಯಕ್ತಿ ಎನ್. ರಾಜಲಿಂಗಮೂರ್ತಿ (50) ಎಂದು ವರದಿಯಾಗಿದೆ.
ಇದನ್ನು ಓದಿ : ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣ : ಕಾನೂನು ಕಾಲೇಜು ಉಪಪ್ರಾಂಶುಪಾಲರು ಸೇರಿ ಮೂವರ ಬಂಧನ̤!
ಎನ್. ರಾಜಲಿಂಗಮೂರ್ತಿ ಕಾಲೇಶ್ವರಂ ಯೋಜನೆಯ ಭಾಗವಾಗಿ ಮೇಡಿಗಡ್ಡ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.
2023 ಅಕ್ಟೋಬರ್ ನಲ್ಲಿ ಮೇಡಿಗಡ್ಡ ಬ್ಯಾರೇಜ್ ನ ಕೆಲವು ಕಂಬಗಳು ಮುಳುಗಿದ ಬಳಿಕ ತೆಲಂಗಾಣದ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ರಾಜಲಿಂಗಮೂರ್ತಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ನಲ್ಲಿ ಈ ಅರ್ಜಿ ವಿಚಾರಣೆ ನಡೆಯುವ ಒಂದು ದಿನದ ಮುಂಚೆಯೇ ದೂರುದಾರನ ಹತ್ಯೆ ನಡೆದಿದೆ.
ಇದನ್ನು ಓದಿ : ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆ ಜಾರಿ : ಶಾಸಕ ಬಾಲಚಂದ್ರ ಜಾರಕಿಹೊಳಿ.
ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಹೋಗುತ್ತಿದ್ದ ಎನ್. ರಾಜಲಿಂಗಮೂರ್ತಿ ಅವರನ್ನು ಅಡ್ಡಗಟ್ಟಿ ಇರಿದು ಪರಾರಿಯಾಗಿದ್ದಾರೆ.
ರಾಜಲಿಂಗಮೂರ್ತಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ವರದಿಯಿಂದ ತಿಳಿದು ಬಂದಿದೆ.
Recent Comments