ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾ ಗೌಡ (Pavithra Gowda) ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ.
6 ತಿಂಗಳ ಹಿಂದೆ ಜೈಲು ಪಾಲಾಗಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಹಾಗೂ ಇತರರಿಗೆ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ (Justice S. Vishwajit Shetty ) ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ಜಾಮೀನು (bail ) ಮಂಜೂರು ಮಾಡಿದ್ದು, ಇಂದು ಬೆಳಗ್ಗೆ ಎಲ್ಲಾ ಬಿಡುಗಡೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಇದನ್ನು ಓದಿ : Astrology : ಡಿಸೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಪರಪ್ಪನ ಅಗ್ರಹಾರದಿಂದ ಪವಿತ್ರಾ ಗೌಡ, ಅನುಕುಮಾರ್, ಪ್ರದುಶ್ ಹಾಗೂ ಶಿವಮೊಗ್ಗ ಜೈಲಿನಿಂದ ಜಗದೀಶ್, ಲಕ್ಷಣ್ ಮತ್ತು ನಾಗರಾಜ್ (Pavithra Gowda, Anukumar, and Pradush will be released from Parappana Agrahara, Jagadish, Lakshan, and Nagaraj) ಬಿಡುಗಡೆಯಾಗಲಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಎಲ್ಲಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಎಲ್ಲಾ ಆರೋಪಿಗಳು ವೈಯಕ್ತಿಕ ಬಾಂಡ್ (bond) ನ್ನು ರೂ. ತಲಾ 1 ಲಕ್ಷ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಸೇರಿ ಹಲವು ಷರತ್ತುಗಳನ್ನು ವಿಧಿಸಿದೆ.
Recent Comments