ಬೆಂಗಳೂರು : ಇನ್ನೇನು ಅಂದುಕೊಂಡಂತೆ ಮದುವೆಯಾಯ್ತು ಅಂತ ಆ ವರ ಖುಷಿಯಲ್ಲಿದ್ದ ಆದರೆ. ಆ ಸಂತೋಷ ಕೇವಲ ನಾಲ್ಕೆ ದಿನಕ್ಕೆ ಕೊನೆಗೊಂಡಿದೆ.
ಮದುವೆಯಾದ ನಾಲ್ಕೇ ದಿನಗಳಲ್ಲಿ ವರನನ್ನು ಮದುವೆಯಾದ ನವವಿವಾಹಿತೆಯೇ ಕೊಲೆಗೈದ ಘಟನೆ ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.
ಕೊಲೆಯಾದ ನವವಿವಾಹಿತ ಅಹಮದಾಬಾದ್ ನಿವಾಸಿ ಬಾವಿಕ್ ಎಂದು ತಿಳಿದು ಬಂದಿದ್ದು, ಈತ ಗಾಂಧಿನಗರದ ಪಾಯಲ್ ಎಂಬಾಕೆಯನ್ನು ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದನು. ಆಬಳಿಕ ವರನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ. ಆತನನ್ನು ಮೂವರು ವ್ಯಕ್ತಿಗಳು ಅಪಹರಿಸಿ ಕೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಮದುವೆಗೆ ಮುಂಚೆ ಪಾಯಲ್ ಸೋದರ ಸಂಬಂಧಿಯಾದ ಕಲ್ಪೇಶ್ ಎಂಬಾತನನ್ನು ಲವ್ ಮಾಡುತ್ತಿದ್ದಳು. ಆದರೆ ಈ ವಿಚಾರ ಗೊತ್ತಿಲ್ಲದೇ ಆಕೆಯ ಮನೆಯವರನ್ನು ಭುವಿಕ್ಗೆ ಪಾಯಲ್ಳನ್ನು ಕೊಟ್ಟು ಮದುವೆ ಮಾಡಿದ್ದರು.
ಇದನ್ನು ಓದಿ : Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಮದುವೆಯಾದ ನಾಲ್ಕು ದಿನಗಳ ಬಳಿಕ ಭುವಿಕ್ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಮಾವನ ಮನೆಗೆ ಹೋಗಿದ್ದರು. ಆದರೆ ಎಷ್ಟೊತ್ತಾದರೂ ಮನೆಗೆ ತೆರಳದ ಕಾರಣ ಆತಂಕಗೊಂಡ ಮಾವ ಬೀಗರ ಮನೆಗೆ ಕಾಲ್ ಮಾಡಿದ್ದಾರೆ. ಆತ ಹೊರಟು ಬಹಳ ಹೊತ್ತಾಯ್ತು ಎಂದು ಭುವಿಕ್ ಮನೆಯವರು ತಿಳಿಸಿದ್ದಾರೆ.
ಏನಾಗಿರಬಹುದೆಂದು ಪಾಯಲ್ ಅವರ ತಂದೆ ಕುಟುಂಬದೊಂದಿಗೆ ಅಳಿಯನನ್ನು ಹುಡುಕಲು ಪ್ರಾರಂಭಿಸಿದರು. ಅವರ ಹುಡುಕಾಟ ನಡೆದಿದ ವೇಳೆ ರಸ್ತೆ ಮೇಲೆ ಭಾವಿಕ್ ಹೆಣವಾಗಿ ಬಿದ್ದಿರುವುದು ಕಂಡು ಬಂದಿದೆ.
ಇದನ್ನು ಓದಿ : ಹತ್ತಿರ ಬರಲು ನಿರಾಕರಿಸಿದ್ದಕ್ಕೆ ಮಾವನಿಂದ ಸೊಸೆಯ ಹತ್ಯೆ.!
ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ ಅದ್ಹೇಗೆ ಸಾವಿಗೀಡಾದ ಅಂತ ಪೊಲೀಸರಿಗೆ ಅನುಮಾನ ಬಂದಿತ್ತು. ನಂತರ ಪೊಲೀಸರು ಪಾಯಲ್ ನನ್ನು ವಿಚಾರಿಸಿದಾಗ ಅಪಹರಣ ಮತ್ತು ಹತ್ಯೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ತಾನು ಕಲ್ಪೇಶ್‌ನನ್ನು ಲವ್ ಮಾಡುತ್ತಿದ್ದೆ. ಆದರೆ ನನ್ನ ಪೋಷಕರು ಭಾವಿಕ್‌ಗೆ ಆಕೆಯನ್ನು ಕೊಟ್ಟು ಮದುವೆ ಮಾಡಿಕೊಟ್ಟರು. ಇದರಿಂದ ಪತಿಯನ್ನು ಕೊಲೆ ಮಾಡಲು ಯೋಜಿಸಿದ್ದೆ ಎಂದು ಪಾಯಲ್ ಪೊಲೀಸರಿಗೆ ತಿಳಿಸಿದ್ದಾಳೆ.
ವಿಚಾರಣೆ ವೇಳೆ, ಕಲ್ಪೇಶ್, ಇಬ್ಬರು ಸಹಚರರೊಂದಿಗೆ ಭಾವಿಕ್‌ನನ್ನು ಅಪಹರಿಸಿ ತನ್ನ ಎಸ್‌ಯುವಿಯೊಳಗೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅವರು ಹತ್ತಿರದ ನರ್ಮದಾ ಕಾಲುವೆಯಲ್ಲಿ ಶವವನ್ನು ಎಸೆದು ಹೋಗಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
Recent Comments