ಗೊಂಡಿಯಾ (ಮಹಾರಾಷ್ಟ್ರ) : ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಒಂದು ಪಲ್ಟಿಯಾಗಿ 9 ಮಂದಿ ಪ್ರಯಾಣಿಕರು ಸಾವನ್ನಪ್ಪಿ, 25ಕ್ಕೂ ಹೆಚ್ಚು ಜನ ಗಾಯಗೊಂಡಿರುವ ದುರ್ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ (Gondia district) ಇಂದು (ದಿ.29) ನಡೆದಿರುವ ಬಗ್ಗೆ ವರದಿಯಾಗಿದೆ.
ಪ್ರಾಥಮಿಕ ಮೂಲಕಗಳ ಪ್ರಕಾರ ಮಹಾರಾಷ್ಟ್ರ ಸಾರಿಗೆ ಬಸ್ ಶಿವಶಾಹಿ (Shivshahi) 36 ಪ್ರಯಾಣಿಕರನ್ನು ಭಂಡಾರಾ ಡಿಪೋದಿಂದ ಗೊಂಡಿಯಾ ಜಿಲ್ಲೆ ಕಡೆಗೆ ಹೊತ್ತು ಓಡುತ್ತಿತ್ತು. ಈ ವೇಳೆ ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು (avoid hitting an oncoming bike) ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ಅಪಘಾತ ಸಂಭವಿಸಿದೆ.
ಇದನ್ನು ಓದಿ : Accident : ಭೀಕರ ರಸ್ತೆ ಅಪಘಾತ ; ಬೈಕ್ ಸವಾರರಿಬ್ಬುರು ಸ್ಥಳದಲ್ಲಿಯೇ ಸಾವು.!
ಈ ದುರ್ಘಟನೆ ಗೊಂಡಿಯಾ-ಅರ್ಜುನಿ (Gondia-Arjuni) ರಸ್ತೆಯಲ್ಲಿ ಸದಕರ್ಜುನಿ ತಾಲೂಕಿನ ದವ್ವು ಗ್ರಾಮದ ಬಳಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸಿದ್ದು, ಸ್ಥಳದಲ್ಲಿಯೇ 9 ಜನರು ಸಾವನ್ನಪ್ಪಿದ್ದು, ಇನ್ನು ಈ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣಕ್ಕೆ ಜಿಲ್ಲಾಸ್ಪತ್ರೆಗೆ (district hospital) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳ ಸಂಖ್ಯೆ ಹೆಚ್ಚಳದ ಸಾಧ್ಯತೆ :
ಈ ಅಪಘಾತದಲ್ಲಿ ಕೆಲವರಿಗೆ ಗಂಭೀರವಾದ ಗಾಯಗೊಂಡಿದ್ದು (seriously injured), ಈ ಹಿನ್ನಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ : Ayush : ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಮುಖ್ಯಮಂತ್ರಿಗಳಿಂದ ಪರಿಹಾರವಾಗಿ ರೂ. 10 ಲಕ್ಷ ನೆರವು ಘೋಷಣೆ :
ಇನ್ನು ಘಟನೆಯ ಬಗ್ಗೆ ತಿಳಿಯುತ್ತಿದಂತೆಯೇ ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde) ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ರೂ. 10 ಲಕ್ಷ ನೆರವು ನೀಡುವಂತೆ ಸಾರಿಗೆ ಆಡಳಿತಕ್ಕೆ ಆದೇಶಿಸಿದ್ದಾರೆ.
Recent Comments