Wednesday, March 12, 2025
Google search engine
HomeNewsಕುಂಭಮೇಳದಲ್ಲಿ ಭಾಗವಹಿಸಲಾಗದ ಪತಿಗೆ Video ಕಾಲ್ ಮೂಲಕ ಪವಿತ್ರಸ್ನಾನ ಮಾಡಿಸಿದ ಪತ್ನಿ ವಿಡಿಯೋ ವೈರಲ್.
spot_img
spot_img
spot_img
spot_img
spot_img

ಕುಂಭಮೇಳದಲ್ಲಿ ಭಾಗವಹಿಸಲಾಗದ ಪತಿಗೆ Video ಕಾಲ್ ಮೂಲಕ ಪವಿತ್ರಸ್ನಾನ ಮಾಡಿಸಿದ ಪತ್ನಿ ವಿಡಿಯೋ ವೈರಲ್.

ಪ್ರಯಾಗ್‌ರಾಜ್‌ : ಪತಿಗೆ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಶಾಹಿ ಸ್ನಾನ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಆತನ ಪತ್ನಿ ಅಪರೂಪದ ರೀತಿಯಲ್ಲಿ ಕುಂಭ ಮೇಳದಲ್ಲಿ ಸ್ನಾನ ಮಾಡಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

ಈ ಮಹಿಳೆ ತನ್ನ ಜೊತೆ ಪತಿ ಇಲ್ಲದೆ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ.  ಆಗ ಪತ್ನಿ ತನ್ನ ಪತಿಗೆ ಮೊಬೈಲ್ ಫೋನ್‌ ಮೂಲಕ ವಿಡಿಯೋ ಕಾಲ್‌ ಮಾಡಿದ್ದಾರೆ. ಮೊಬೈಲ್‌ನಲ್ಲಿ ಪತಿ ಕಾಣುತ್ತಿದಂತೆಯೇ ಅವರೊಂದಿಗೆ ಮಾತನಾಡುತ್ತ ಆ ಮೊಬೈಲ್‌ ಫೋನ್‌ನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಹೀಗೆ ಮೊಬೈಲ್‌ ಫೋನ್‌ನ್ನು ನೀರಿನಲ್ಲಿ ಮುಳುಗಿಸುವುದನ್ನು ವೈರಲ್‌ ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : ಕಂಡಕ್ಟರ್ ವಿರುದ್ಧ ಪೋಕ್ಸೋ Case ಹಿಂಪಡೆದ ಬಾಲಕಿಯ ಕುಟುಂಬಸ್ಥರು.!

ಪತಿ ಪವಿತ್ರ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಆಗದಿದ್ದರೂ ಸಹ ಪತ್ನಿ ತನ್ನ ಪತಿಗೆ ಸಾಂಕೇತವಾಗಿ ಅಥವಾ ಅಪರೋಕ್ಷವಾಗಿ Live Vedio call ನಲ್ಲಿ ಪತಿ ಕಾಣುವಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸಿರುವುದಂತೆ ಅಮೋಘ.

ಕುಂಭಮೇಳಕ್ಕೆ 700 ವರ್ಷಗಳ ಇತಿಹಾಸವಿದೆ. ಇವುಗಳನ್ನು ಅರ್ಧ ಕುಂಭ ಮೇಳ, ಪೂರ್ಣ ಕುಂಭ ಮೇಳ, ಮಹಾ ಕುಂಭಮೇಳವೆಂದು ನಿರ್ದಿಷ್ಟವಾಗಿ ವರ್ಗೀಕರಿಸಲಾಗಿದೆ. ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭ ಮೇಳ ನಡೆಯುತ್ತದೆ. ಅದರಂತೆ ಪ್ರತಿ 6 ವರ್ಷಕ್ಕೊಮ್ಮೆ ಅರ್ಧ ಕುಂಭ ಮೇಳ ಆಯೋಜಿಸಲಾಗುತ್ತಿದೆ. ಹೀಗೆ, ಪ್ರತಿ 12 ವರ್ಷಕ್ಕೊಮ್ಮೆ 12 ಪೂರ್ಣ ಕುಂಭ ಮೇಳಗಳು ನಡೆದ ನಂತರ ಬರುವುದೇ ಮಹಾ ಕುಂಭಮೇಳ.

ಇದನ್ನು ಓದಿ : ಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ 10 ಅಡಿ ತೂರಿ ಹೋಗಿ ಬಿದ್ದ ಮಹಿಳೆ ; ಭಯಾನಕ ವಿಡಿಯೋ ವೈರಲ್.!

ಇಂದು (ಫೆ.26) ಮಹಾಶಿವರಾತ್ರಿ, ಅಂದರೆ ಮಹಾ ಕುಂಭಮೇಳದ ಕೊನೆಯ ದಿನ. ಕಳೆದ 144 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳದ ಕೊನೆಯ ಪುಣ್ಯಸ್ನಾನಕ್ಕೆ ಕೋಟ್ಯಂತರ ಮಂದಿ ಆಗಮಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಇಲ್ಲಿಯವರೆಗೆ ಸುಮಾರು 62 ಕೋಟಿ ಜನರು ಈ ತ್ರವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರೆ.

ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಪ್ರಧಾನಿ ಶ್ರೀ ನರೇಂದ್ರ ಮೋದಿ, ಯುಪಿ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಸಾವಿರಾರು ಸಂಖ್ಯೆಯ ಗಣ್ಯರು ಈ ಪವಿತ್ರ ಸ್ಥಳದಲ್ಲಿ ಶಾಹಿ ಸ್ನಾನ ಮಾಡಿದ್ದಾರೆ.

ವಿಡಿಯೋ ನೋಡಿ :

RELATED ARTICLES
Most Popular

Recent Comments

- Advertisment -
Google search engine
error: Content is protected !!