ಡೆಸ್ಕ್ : ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (IISER) ವಿಜ್ಞಾನಿ ಜೊತೆ ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವರು ಮಂಗಳವಾರ ಗಲಾಟೆ ಮಾಡಿದ್ದಾರೆ. ಈ ವೇಳೆ ಯುವ ವಿಜ್ಞಾನಿ (Young scientist) ಸಾವನ್ನಪ್ಪಿದ್ದಾರೆ.
ಪಾರ್ಕಿಂಗ್ ವಿಚಾರವಾಗಿ ಈ ಘಟನೆ ಮೊಹಾಲಿಯ ಸೆಕ್ಟರ್ 67 (Sector 67, Mohali) ರಲ್ಲಿ ನಡೆದಿದ್ದು, ಈ ವೇಳೆ IISER ನ ಓರ್ವ ಯುವ ವಿಜ್ಞಾನಿ ಸಾವಿಗೀಡಾಗಿದ್ದಾರೆ. ಈ ಗಲಾಟೆಯಲ್ಲಿ ಮೃತರಾದ ವಿಜ್ಞಾನಿಯನ್ನು ಅಭಿಷೇಕ್ ಸ್ವರ್ಣಕರ್ (Abhishek Swarnakar) ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಭೀ*ರ ರಸ್ತೆ ಅ*ಘಾ* ; ಇಬ್ಬರ ಸಾ*.!
ಮೃತರಾದ ಯುವ ವಿಜ್ಞಾನಿ ಅಭಿಷೇಕ್ ಸ್ವರ್ಣಕರ್ ಅವರು ಪಶ್ಚಿಮ ಬಂಗಾಳ (West Bengal) ದವರಾಗಿದ್ದು, ಇತ್ತೀಚೆಗೆ ಮೂತ್ರಪಿಂಡ ಕಸಿ (Kidney transplant) ಮಾಡಿಸಿಕೊಂಡಿದ್ದರು. ಹೀಗಾಗಿ ಆಗಾಗ ಡಯಾಲಿಸಿಸ್ (Dialysis) ಗೆ ಒಳಗಾಗುತ್ತಿದ್ದರು.
ಘಟನೆಯ ಹಿನ್ನೆಲೆ :
ವಯಸ್ಸಾದ ಹೆತ್ತವರೊಂದಿಗೆ ಮೊಹಾಲಿಯಲ್ಲಿ ಅಭಿಷೇಕ್ ಸ್ವರ್ಣಕರ್ ಅವರು ಬಾಡಿಗೆ ಮನೆ (Rental house) ಯಲ್ಲಿ ವಾಸಿಸುತ್ತಿದ್ದರು. ಮಾಂಟಿ (Monty) ಎಂಬ ನೆರೆಮನೆಯ ವ್ಯಕ್ತಿ ಐಟಿ (IT) ಉದ್ಯೋಗಿಯಾಗಿದ್ದು, ಈತ ಪಾರ್ಕಿಂಗ್ (Parking) ವಿಚಾರವಾಗಿ ಅಭಿಷೇಕ್ ಜೊತೆ ಜಗಳ ಮಾಡಿದ್ದಾರೆ.
ಮಾಂಟಿಗೆ ಅಭಿಷೇಕ್‌ನ ಆರೋಗ್ಯ ಸ್ಥಿತಿ (Health status) ಇಲ್ಲದಿರುವ ಬಗ್ಗೆ ತಿಳಿದಿದ್ದರೂ ಸಹ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಂಟಿ ಹಾಗೂ ಅಭಿಷೇಕ್‌ನ ನಡುವಿನ ಜಗಳ ದೃಶ್ಯಗಳು ಸಿಸಿಟಿವಿ (CCTV) ಯಲ್ಲಿ ಸೆರೆಯಾಗಿವೆ.
ಇದನ್ನು ಓದಿ : Astrology : ಮಾರ್ಚ್ 13ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಈ ಘಟನೆಗೆ ಸಂಬಂಧಿಸಿದಂತೆ “ಗುರುವಾರ ಮರಣೋತ್ತರ ಪರೀಕ್ಷೆ (Postmortem examination) ನಡೆಸಲಾಗುವುದು ಮತ್ತು ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಪೊಲೀಸರು ಪ್ರತಿಕ್ರಿಯೇ ನೀಡಿದ್ದಾರೆ.
ಪ್ರತಿಭಾನ್ವಿತ ಯುವ ವಿಜ್ಞಾನಿ ಅಭಿಷೇಕ್ :
ಪ್ರತಿಭಾನ್ವಿತ ವಿಜ್ಞಾನಿಯಾಗಿದ್ದ ಅಭಿಷೇಕ್ ಸ್ವರ್ಣಕರ್ ಅವರು ಸಂಶೋಧನಾ ಪ್ರಬಂಧವನ್ನು “ಜರ್ನಲ್ ಆಫ್ ಸೈನ್ಸ್”ನಲ್ಲಿ ಪ್ರಕಟಿಸಲಾಗಿತ್ತು ಎಂದು ಐಐಎಸ್‌ಇಆರ್ (IISER) ತಿಳಿಸಿದೆ. ಅಭಿಷೇಕ್ ಅವರ ಈ ಸಾಧನೆಯ ಹಿನ್ನಲೆಯಲ್ಲಿ ಐಐಎಸ್‌ಇಆರ್ (IISER) ನಲ್ಲಿ ಅವಕಾಶ ದೊರೆತಿತ್ತು.
ಇದನ್ನು ಓದಿ : Savadatti Yallamma ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಕೇಂದ್ರ ಅನುಮೋದನೆ.!
‘ನಾವು ಒಬ್ಬ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ ಎಂದು ಐಐಎಸ್‌ಇಆರ್ (IISER) ಅಭಿಷೇಕ್ ಸ್ವರ್ಣಕರ್ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದೆ. ಇಂತಹ ಹಿಂಸಾಚಾರ ಒಪ್ಪುವಂತದಲ್ಲ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು IISER ಆಗ್ರಹಿಸಿದೆ.
ವಿಡಿಯೋ ನೋಡಿ :
Viral Video CCTV : पंजाब के मोहाली में पार्किंग को लेकर झगड़ा, वैज्ञानिक की मौत | N18S#punjab #punjabnews #mohalinews #news18indianumber1 #shorts pic.twitter.com/Om40oM9kJK
— News18 India (@News18India) March 13, 2025
Recent Comments