ಡೆಸ್ಕ್ : ರೈಲು ಸಿಬ್ಬಂದಿ ಓರ್ವರು ಚಲಿಸುತ್ತಿರುವ ರೈಲಿನಿಂದ ಹಳಿಗಳ ಮೇಲೆಯೇ ಕಸ ಎಸೆಯುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾ (Social media) ದಲ್ಲಿ ಹರಿದಾಡುತ್ತಿದೆ. ಉದ್ಯೋಗಿಯ ಈ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕೃತ್ಯ ಮುಂಬೈನ ಸುಬೇದರ್‌ಗಂಜ್ (SFG) ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ನಡುವೆ ಕಾರ್ಯನಿರ್ವಹಿಸುವ ಬ್ರಾಡ್ ಗೇಜ್ ರೈಲು ಸುಬೇದರ್‌ಗಂಜ್-ಲೋಕಮಾನ್ಯ ತಿಲಕ್ ರೈಲಿನಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ.
ಇದನ್ನು ಓದಿ : ಕಡಿಮೆ ಬೆಲೆಯಲ್ಲಿ ವಿವಿಧ ಪ್ಲಾನ್ ಪರಿಚಯಿಸಿದ BSNL ; ಡಾಟಾ ಎಷ್ಟಿರುತ್ತೇ.?
ವಿಡಿಯೋದಲ್ಲಿ ಏನಿದೆ :
ಓರ್ವ ರೈಲು ಉದ್ಯೋಗಿ ರೈಲಿನ ಬಾಗಿಲು ಹತ್ತಿರ ಇರುವ ಸಿಂಕ್ ಹತ್ತಿರ ಕಸದ ಡಬ್ಬಿಗಳನ್ನು ಇಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿ ರೈಲು ಚಲಿಸುತ್ತಿರುವಾಗಲ್ಲೇ ಆ ಕಸದ ಡಬ್ಬಿಯಲ್ಲಿ ತುಂಬಿದ ಕಸವನ್ನು ತೆಗೆದು ಹಳಿ ಮೇಲೆ ಎಸೆಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಹೀಗೆ ರೈಲು ಉದ್ಯೋಗಿ ಕಸ ಎಸೆಯುತ್ತಿರುವುದನ್ನು ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಇದನ್ನು ಓದಿ : Astrology : ಮಾರ್ಚ್ 07ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಹೀಗೆ ರೆಕಾರ್ಡ್ ಮಾಡುತ್ತ ಕಸ ಯಾಕೆ ಹಳಿ ಮೇಲೆ ಎಸೆಯುತ್ತಿದ್ದಿರಾ? ಎಂದು ರೈಲ್ವೆ ಸಿಬ್ಬಂದಿಯನ್ನು ಪ್ರಶ್ನೆ ಮಾಡುತ್ತಾರೆ. ಆಗ ರೈಲ್ವೆ ಸಿಬ್ಬಂದಿ ಹಳಿ ಮೇಲೆ ಬಿಸಾಡದೆ ಮತ್ತೇನು ಮಾಡಬೇಕು ಎಂಬ ಉತ್ತರ ನೀಡುತ್ತಾನೆ. ಹಾಗೆ ಬಿಟ್ಟರೆ ಕಸದ ಡಬ್ಬಿಯಲ್ಲಿದ್ದ ಕಸವನ್ನು ಎಲ್ಲಿ ಚಲ್ಲುವುದು ಎಂದು ಮರು ಪ್ರಶ್ನೆ ಮಾಡುತ್ತಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆಯೇ ರೈಲ್ವೆ ಸಿಬ್ಬಂದಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗೆ ರೈಲು ಹಳಿಗಳ ಮೇಲೆ ಕಸ ಎಸೆಯುವುದಾದರೆ ಕಸದ ಬುಟ್ಟಿಗಳನ್ನು ರೈಲುಗಳಲ್ಲಿ ಇಡುವುದಾದರೂ ಏಕೆ.?
ಇದನ್ನು ಓದಿ : ಲೋಕಾಯುಕ್ತ Raid ; ಕಂತೆ ಕಂತೆ ಹಣ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ , ಕೆಜಿಗಟ್ಟಲೆ ಬೆಳ್ಳಿ ವಶ.!
ರೈಲಿನಲ್ಲಿ ಕೆಲಸ ಮಾಡಲು ಇಂತಹ ಕೆಲ ಸಿಬ್ಬಂದಿಗಳು ಇದ್ದರೆ ಸಾಕು ದೇಶ ಅಭಿವೃದ್ಧಿ ಹೊಂದುವುದಂತು ಗ್ಯಾರಂಟಿ ಅಂತ ನೆಟ್ಟಿಗರು ಅಪಹಾಸ್ಯ ಮಾಡುತ್ತಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ :
In any other country this fellow would have been fired with immediate effect
Who throws such garbage on to the tracks and dirty the nation ?
But he is not even bothered as he knows everyone does it in Indian railways and they can’t fire everyone
Btw U can’t even fire anyone in… pic.twitter.com/ByC0wagWQM— Swathi Bellam (@BellamSwathi) March 6, 2025
Recent Comments