Wednesday, March 12, 2025
Google search engine
HomeCrime Newsಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ 10 ಅಡಿ ತೂರಿ ಹೋಗಿ ಬಿದ್ದ...
spot_img
spot_img
spot_img
spot_img
spot_img

ಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ 10 ಅಡಿ ತೂರಿ ಹೋಗಿ ಬಿದ್ದ ಮಹಿಳೆ ; ಭಯಾನಕ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಚಿತ್ರದುರ್ಗ : ಚತುಷ್ಪಥ ರಸ್ತೆ (four-lane road) ದಾಟಲು ಯತ್ನಿಸುತ್ತಿದ್ದ ಮಹಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಸಾಪುರ ಗೇಟ್ (Basapura Gate) ಬಳಿ ನಡೆದಿದೆ.

ಅಪಘಾತದ ಭೀಕರ ದೃಶ್ಯ CCTV ಯಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್‌ ಆಗಿದೆ. ವೈರಲ್‌ (Viral) ಆಗಿರುವ ದೃಶ್ಯ ನೋಡುಗರು ಬೆಚ್ಚಿಬೀಳುವಂತಿದೆ.

ಇದನ್ನು ಓದಿ : ಕಂಡಕ್ಟರ್ ವಿರುದ್ಧ ಪೋಕ್ಸೋ Case ಹಿಂಪಡೆದ ಬಾಲಕಿಯ ಕುಟುಂಬಸ್ಥರು.!

ಈ ಭೀಕರ ಅಪಘಾತಕ್ಕೆ ಬಲಿಯಾದ ದುರ್ದೈವಿ ಮಹಿಳೆಯನ್ನು 48 ವರ್ಷದ ಅನಂತಮ್ಮ (Ananthamma) ಎಂದು ಗುರುತಿಸಲಾಗಿದೆ. ಚತುಷ್ಪಥ ರಸ್ತೆಯಲ್ಲಿ KSRTC ಬಸ್‌ ರಸ್ತೆ ದಾಟುವಾಗಿ ಈ ಅವಘಡ ಸಂಭವಿಸಿದೆ. ಮೃತ ಮಹಿಳೆ ಬಸ್‌ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು (speeding car) ಮಹಿಳೆಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ. ಈ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಮಹಿಳೆಗೆ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೇಲುತ್ತಾ (floating in the air) ಮೂರು ಪಲ್ಟಿ ಹೊಡೆದು ದೂರ ಹೋಗಿ ಬೀಳುವುದು CCTV ಯಲ್ಲಿ ಸೆರೆಯಾಗಿದೆ.

ಇದನ್ನು ಓದಿ : ನಾಲೆಗೆ ಹಾರಿ ಒಂದೇ family ಮೂವರ ಸಾ* ; ಕಾರಣ.?

ಕಾರು ಗುದ್ದಿದ ರಭಸಕ್ಕೆ ಸ್ಥಳದಿಂದ ಸುಮಾರು 10 ಅಡಿ ದೂರದಲ್ಲಿ ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದೇ ಮಹಿಳೆಯ ಜೊತೆಗಿದ್ದ ಮೂವರು ಸುದೈವಶಾತ್‌ (fortunately) ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ಮಹಿಳೆ ಇನ್ನೊಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿ ಮೂವರೊಂದಿಗೆ ಮೊದಲನೇ ಲೇನ್‌ (first lane to second lane) ನಂತರದ ವಿಭಜಕ ದಾಟಿ ಎರಡನೇ ಲೇನ್‌ಗ್ ಬರುತ್ತಿದಂತೆಯೇ ಈ ದುರ್ಘಟನೆ ನಡೆದಿದೆ.

ಇದನ್ನು ಓದಿ : ಸಿಸೇರಿಯನ್ ಬಳಿಕ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ Doctors.!

ಇನ್ನು ಮಹಿಳೆಗೆ ಡಿಕ್ಕಿ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ (fled) ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಯಾನಕ ವಿಡಿಯೋ ಇಲ್ಲಿದೆ :

RELATED ARTICLES
Most Popular

Recent Comments

- Advertisment -
Google search engine
error: Content is protected !!