ಚಿಕ್ಕಮಗಳೂರು : ಮರಳಿ ಪತಿಯ ಜೊತೆ ಜೀವನ ನಡೆಸುತ್ತಿದ್ದ ಗೃಹಿಣಿಯನ್ನು ಅವಳ ಮಕ್ಕಳ ಎದುರೇ ಪ್ರಿಯಕರನೇ (Lover) ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ (Kichabbi) ಗ್ರಾಮದಲ್ಲಿ ಘಟನೆ ನಡೆದಿದೆ.
ಚಾಕುವಿನಿಂದ ಇರಿದ ಪ್ರಿಯಕರನನ್ನು ಚಿರಂಜೀವಿ (Chiranjeevi) ಎಂದು ಹತ್ಯೆಯಾದ ಗೃಹಿಣಿಯನ್ನು ತೃಪ್ತಿ (Trupti) (25) ಎಂದು ತಿಳಿದು ಬಂದಿದೆ. ತೃಪ್ತಿಯನ್ನು ಚಾಕುವಿನಿಂದ ಇರಿದು (stabbing) ಕೊಂದ ನಂತರ ಆಕೆಯ ದೇಹವನ್ನು ಕೃಷಿ ಹೊಂಡಕ್ಕೆ (farm pond) ಎಸೆದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ‘ಪುಷ್ಪ 2 ದಿ ರೂಲ್’ : ಎರಡನೇ ದಿನದ ಗಳಿಕೆ ಎಷ್ಟು ; ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದರು.?
ತೃಪ್ತಿ ಮತ್ತು ಚಿರಂಜೀವಿ ಫೇಸ್‌ಬುಕ್ (Facebook) ಮೂಲಕ ಭೇಟಿಯಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಒಂದು ತಿಂಗಳ ಹಿಂದೆ ಪತಿ ರಾಜುವನ್ನು ತೊರೆದು ಪ್ರಿಯಕರನ ಜತೆ ತೃಪ್ತಿ ನಾಪತ್ತೆಯಾಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ (Balehonnur PS) ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.
ಬಿಜಾಪುರದಲ್ಲಿ ತಲೆಮರೆಸಿಕೊಂಡಿದ್ದ (hiding in Bijapur) ತೃಪ್ತಿ ಹಾಗೂ ಆಕೆಯ ಪ್ರಿಯಕರ ಚಿರಂಜೀವಿಯನ್ನು ಪೊಲೀಸರು ಪತ್ತೆ ಮಾಡಿ ಊರಿಗೆ ಕರೆತಂದಿದ್ದರು. ನಂತರ ತೃಪ್ತಿ ತನ್ನ ಪತಿ ರಾಜುವಿನ ಜೊತೆ ಕೂಡಿ ಬಾಳುತ್ತಿದ್ದಳು (living with her husband).
ಇದನ್ನು ಓದಿ : Astrology : ಡಿಸೆಂಬರ್ 07ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಇದರಿಂದ ಕುಪಿತಗೊಂಡ ಚಿರಂಜೀವಿ ತೃಪ್ತಿಯನ್ನು ಕೊಂದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಗಾಗಿ ಪೊಲೀಸರು ಶೋಧ (searching for the accused) ನಡೆಸುತ್ತಿದ್ದಾರೆ.
Recent Comments