Wednesday, March 19, 2025
Google search engine
HomeNewsPUC ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ.?
spot_img
spot_img
spot_img
spot_img
spot_img

PUC ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ.?

ಬಾಗಲಕೋಟೆ : ಪಿಯುಸಿ ಪರೀಕ್ಷೆ (PUC Exam) ಯಲ್ಲಿ ಹೆಚ್ಚು ಅಂಕ ಪಡೆಯಲ್ಲೋ ಅಥವಾ ಪಾಸ ಆಗಲ್ಲೋ ನಕಲು ಮಾಡಲು ಹೋಗಿ ವಿದ್ಯಾರ್ಥಿನಿಯೋರ್ವಳು ಸಿಕ್ಕಿಬಿದ್ದ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹೀಗೆ ನಕಲು ಅಥವಾ ಕಾಪಿ ಮಾಡಲು ಹೋಗಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ನದಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ.

ಇದನ್ನು ಓದಿ : ರಾಯಭಾಗ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ; ಇಬ್ಬರು ಸಾವು, 20 ಜನರಿಗೆ ಗಾಯ.!

ಬಾಗಲಕೋಟೆ ಜಿಲ್ಲೆಯ ಜಿಲ್ಲೆಯ ಮುಧೋಳ ನಗರದ ಪಿಯುಸಿ (PUC -I) ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರುವ 17 ವರ್ಷದ ತೇಜಶ್ವಿನಿ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕುಂಭಮೇಳದಲ್ಲಿ ಭಾಗವಹಿಸಲಾಗದ ಪತಿಗೆ Video ಕಾಲ್ ಮೂಲಕ ಪವಿತ್ರಸ್ನಾನ ಮಾಡಿಸಿದ ಪತ್ನಿ ವಿಡಿಯೋ ವೈರಲ್.

ಖಾಸಗಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತೇಜಶ್ವಿನಿ, ಕಳೆದ ಫೆಬ್ರವರಿ 27 ರಂದು ನಡೆದ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ನಕಲು ಮಾಡುವಾಗ ಕಾಲೇಜು ಸಿಬ್ಬಂದಿ ಕೈಯಲ್ಲಿ ಸಿಕ್ಕಿಬಿದ್ದಿದ್ದಳು.

ಹೀಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿರುವ ಕಾರಣ ವಿಷಯವನ್ನು ವಿದ್ಯಾರ್ಥಿನಿಯನ್ನು ಪ್ರಶ್ನಿಸುವುದರ ಜೊತೆ ವಿಷಯವನ್ನು ಪಾಲಕರಿಗೆ ಕಾಲೇಜು ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನು ಓದಿ : ಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ 10 ಅಡಿ ತೂರಿ ಹೋಗಿ ಬಿದ್ದ ಮಹಿಳೆ ; ಭಯಾನಕ ವಿಡಿಯೋ ವೈರಲ್.!

ಇದೇ ವಿಷಯವಾಗಿ ವಿದ್ಯಾರ್ಥಿನಿಯ ಪಾಲಕರು ಕಾಲೇಜಿಗೆ ಮರು ದಿನ (ದಿ.28) ಬಂದು ನಕಲು ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು. ಆಗ ಕಾಲೇಜು ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡುವಷ್ಟರಲ್ಲಿ ವಿದ್ಯಾರ್ಥಿನಿ ಕಾಲೇಜಿನಿಂದ ಹೊರ ಹೋಗಿದ್ದಳು.

ಮುಧೋಳ ಪೊಲೀಸ್ ಠಾಣೆಯಲ್ಲಿ ಮಗಳು ಕಾಣದಿದ್ದಾಗ ಆಕೆಯ ಪೋಷಕರು ದೂರು ದಾಖಲಿಸಿದ್ದರು.

ಇದನ್ನು ಓದಿ : ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣ : ಕಾನೂನು ಕಾಲೇಜು ಉಪಪ್ರಾಂಶುಪಾಲರು ಸೇರಿ ಮೂವರ ಬಂಧನ̤!

ಆದರೆ ವಿದ್ಯಾರ್ಥಿನಿ ಇಂದು ಮುಧೋಳದ ಮಹಾರಾಣಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಸಕ್ತ 2024-25ನೇ ಸಾಲಿನ ದ್ವಿತೀಯ ಪಿಯುಸಿ (PUC -II) ಯ ಪರೀಕ್ಷೆಗಳು ನಿನ್ನೆಯಿಂದ (ದಿ. 01) ಪ್ರಾರಂಭವಾಗಿದ್ದು, ಅದಕ್ಕೂ ಪೂರ್ವದಲ್ಲಿ ಈ ದುರ್ಘಟನೆ ನಡೆದಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!