ಕಟಕ್ : ಭಾನುವಾರ ಎಸ್‌ಎಂವಿಟಿ ಬೆಂಗಳೂರು – ಕಾಮಾಕ್ಯ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12551) ಬೆಂಗಳೂರಿನಿಂದ ಗುವಾಹಟಿಗೆ ಹೋಗುತ್ತಿದ್ದಾಗ ರೈಲಿನ 11 ಬೋಗಿಗಳು ಹಳಿ ತಪ್ಪಿರುವ ಘಟನೆ ವರದಿಯಾಗಿದೆ. ಈ ರೈಲು ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಒಡಿಶಾದ ಕಟಕ್‌ನ ಚೌದ್ವಾರದ ನಿರ್ಗುಂಡಿ ನಿಲ್ದಾಣದ ಬಳಿ ಭಾನುವಾರ ಕಾಮಾಕ್ಯ ಎಕ್ಸ್‌ಪ್ರೆಸ್‌ನ 11 ಬೋಗಿ ಹಳಿ ತಪ್ಪಿದ್ದು, ಒಡಿಶಾದಲ್ಲಿ ಭಾನುವಾರ ಸಂಭವಿಸಬಹುದಾಗಿದ್ದ ಬಹು ದೊಡ್ಡ ರೈಲು ಅಪಘಾತ ಕ್ಷಣ ಮಾತ್ರದಲ್ಲಿ ತಪ್ಪಿದೆ.
ಇದನ್ನು ಓದಿ : ಬೇಸಿಗೆ ಅವಧಿಯಲ್ಲಿ ಮುಂಬೈ-ಬೆಂಗಳೂರು ನಡುವೆ Special ರೈಲುಗಳ ಸಂಚಾರ.!
ಪೂರ್ವ ಕರಾವಳಿ ರೈಲ್ವೆಯ ಖುರ್ದಾ ವಿಭಾಗದಲ್ಲಿ ಕಾಮಾಕ್ಯ ಎಕ್ಸ್‌ಪ್ರೆಸ್‌ನ 11 ಬೋಗಿಗಳು ಹಳಿತಪ್ಪಿದು, ಸುದೈವಶಾತ್ ಅಪಘಾತದಲ್ಲಿ ಯಾರೂ ಸಾವನ್ನಪ್ಪಿಲ್ಲ ಮತ್ತು ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಕಾಮಾಕ್ಯ ಎಕ್ಸ್‌ಪ್ರೆಸ್ ರೈಲಿನ ಅಪಘಾತವನ್ನು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ರೈಲ್ವೆ ತಂಡ ಸ್ಥಳಕ್ಕೆ ತಲುಪಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಕೂಡ ಘಟನಾ ಸ್ಥಳಕ್ಕೆ ತಕ್ಷಣವೇ ರವಾನಿಸಲಾಯಿತು.
ಇದನ್ನು ಓದಿ : ಅಂಗನವಾಡಿ ಶಿಕ್ಷಕಿ – ಸಹಾಯಕಿಯ ನಡುವೆ ಮಾರಾಮಾರಿ ; ವಿಡಿಯೋ Viral.!
ಇನ್ನು ಕಾಮಾಕ್ಯ ಎಕ್ಸ್‌ಪ್ರೆಸ್ ರೈಲಿನ ಅಪಘಾತ ಹಿನ್ನಲೆಯಲ್ಲಿ 12822 ಧೌಲಿ ಎಕ್ಸ್‌ಪ್ರೆಸ್, 12875 ನೀಲಾಚಲ್ ಎಕ್ಸ್‌ಪ್ರೆಸ್ ಮತ್ತು 22606 ಪುರುಲಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಓಡಿಸಲಾಗುತ್ತಿದೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲ್ವೆ ಇಲಾಖೆಯು ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯವಾಣಿ ಸಂಖ್ಯೆ : 8991124238 ಅನ್ನು ಬಿಡುಗಡೆ ಮಾಡಿದೆ. ಈ ಅಪಘಾತದಿಂದಾಗಿ ಹಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.
ಇದನ್ನು ಓದಿ : ಟಿಟಿ ವಾಹನ ಪಲ್ಟಿಯಾಗಿ ಮೂವರ ಸಾವು.!
ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರೈಲ್ವೆ ತಂಡವು ಸ್ಥಳಕ್ಕೆ ಧಾವಿಸಿದ್ದು, ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ರವಾನಿಸಲಾಗಿದೆ.
ವಿಡಿಯೋ :
Train No 12551 Kamakhya express has met an accident near Dighi Canal, Cuttack (before Manguli Station). Slight Derailment. pic.twitter.com/uWonrUY80k
— Abir Ghoshal (@abirghoshal) March 30, 2025