ಡೆಸ್ಕ್ : 36 ವರ್ಷದ ವಿವಾಹಿತ ಮಹಿಳೆಯೊಂದಿಗೆ (married woman) ಎಸ್ಕೇಪ್ ಆಗಿದ್ದ ಪಿಯು ವಿದ್ಯಾರ್ಥಿಯನ್ನು (17) ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ನೆರೆ ಮನೆಯವಳಾಗಿದ್ದ (neighbors) 3 ಮಕ್ಕಳಿರುವ ಮಹಿಳೆ ಆಗಾಗ ದೇವಾಲಯಕ್ಕೆ ಹೋಗುತ್ತಿದ್ದಳು. ಅದೇ ದೇವಸ್ಥಾನಕ್ಕೆ ಆ ಹುಡುಗನು ಸಹ ಆಗಾಗ ತೆರಳುತ್ತಿದ್ದ. ಪಕ್ಕದ ಮನೆಯವರಾದ ಕಾರಣ ಹುಡುಗನ ತಂದೆ ಆ ಮಹಿಳೆಯ ಜತೆ ತನ್ನ ಮಗಳ ಅನಾರೋಗ್ಯದ ಬಗ್ಗೆ ಮಾತನಾಡುತ್ತಿದ್ದರು.
ಇದನ್ನು ಓದಿ : ಆಜಾನ್ ಕೂಗಲು ಜೋರಾದ ಧ್ವನಿವರ್ಧಕ ಬಳಿಕೆ : ಇಮಾಮ್ ವಿರುದ್ಧ FIR ದಾಖಲು.!
ಈ ಗ್ಯಾಪ್ ನಲ್ಲಿ ಆ ಹುಡುಗನಿಗೆ ಮಹಿಳೆಯ ಜತೆ ಸ್ನೇಹ ಬೆಳೆದಿದೆ. ಇದೇ ಸ್ನೇಹ ಇಬ್ಬರ ನಡುವೆ ಆತ್ಮೀಯತೆಯನ್ನು ಬೆಳೆಸಿತು.
ಈ ವಿಚಾರ ಗೊತ್ತಾಗಿ ಹುಡುಗನ ತಂದೆ ಆಕೆಯ ಜೊತೆ ಸಲುಗೆಯಿಂದ ಇರಬೇಡ, ಆಕೆಯ ಮನೆಗೆ ಹೋಗಬೇಡ ಎಂದು ಗದರಿಸಿದ್ದ. ಆದರೆ ಆ ಹುಡುಗ ಮಹಿಳೆಯ ಮನೆಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ, ಹುಡುಗನ ತಂದೆ ತನ್ನ ಸಂಬಂಧಿಕರ ಮನೆಗೆ ಕಳುಹಿಸಲು ತೀರ್ಮಾನಿಸಿದ್ದರು. ಆದರೆ, ಅವರಿಬ್ಬರು ಓಡಿ ಹೋಗಲು ನಿರ್ಧರಿಸಿದರು.
ಇದನ್ನು ಓದಿ : ಲೋಕಾಯುಕ್ತ Raid ; ಕಂತೆ ಕಂತೆ ಹಣ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ , ಕೆಜಿಗಟ್ಟಲೆ ಬೆಳ್ಳಿ ವಶ.!
ಇಬ್ಬರು ಓಡಿಹೋದ ಬಳಿಕ, ಹುಡುಗನ ಮನೆಯವರು ಲಕಡ್‌ಗಂಜ್ ಪೊಲೀಸ್ ಠಾಣೆಯಲ್ಲಿ (Lakadganj Police Station) ಕಿಡ್ನ್ಯಾಪ್ ಕೇಸ್ ದಾಖಲಿಸಿದರು. ಮಹಿಳೆಯ ಕುಟುಂಬವು ಕೂಡ ದೂರು ದಾಖಲಿಸಿತು.
ನಾಲ್ಕು ತಿಂಗಳ ಬಳಿಕ ಇಬ್ಬರು ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಪತ್ತೆಯಾಗಿದ್ದಾರೆ (Found in Balaghat, Madhya Pradesh). ಮಹಿಳೆಯು ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದು, ಹುಡುಗ ಸರ್ವಿಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಿಂದ ತಿಳಿದು ಬಂದಿದೆ. ನಾಗ್ಪುರ ಪೊಲೀಸರು ಅವರಿಬ್ಬರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ : Facebook ಲವರ್ ಜೊತೆ ಓಡಿ ಹೋದ ಎರಡು ಮಕ್ಕಳ ತಾಯಿ ; ವಿಡಿಯೋ ವೈರಲ್.!
ಎರಡೂ ಕುಟುಂಬಗಳು ಇವರಿಬ್ಬರ ವಿವಾಹೇತರ ಸಂಬಂಧವನ್ನು ವಿರೋಧಿಸುತ್ತಿವೆ. ಈ ಹಿಂದೆಯೂ ಇಬ್ಬರೂ ಮನೆಯಿಂದ ಓಡಿ ಹೋಗಿ ನಾಲ್ಕು ದಿನಗಳ ನಂತರ ಮರಳಿ ಬಂದಿದ್ದರು. ಮಹಿಳೆಯ ಹಿರಿಯ ಮಗ ಓಡಿಹೋದ ಹುಡುಗನಿಗಿಂತ 4 ವರ್ಷ ಚಿಕ್ಕವನು ಎಂದು ವರದಿಯಿಂದ ತಿಳಿದು ಬಂದಿದೆ
Recent Comments