ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ರಾಜ್ಯವೇ ಬೆಚ್ಚಿ ಬೀಳೋ ಘಟನೆಯೊಂದು ನಡೆದಿರುವುದು ವರದಿಯಾಗಿದೆ.
ಒಂದೇ ಹಗ್ಗಕ್ಕೆ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದೆ.
ಇದನ್ನು ಓದಿ : Belagavi : ಬಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಸಾವು.!
ಒಂದೇ ಹಗ್ಗಕ್ಕೆ ನೇಣಿಗೆ ಶರಣಾದವರು ಅಪ್ರಾಪ್ರರೆಂದು ತಿಳಿದು ಬಂದಿದ್ದು, ಯಡ್ರಾಮಿ ತಾಲೂಕಿನ ಮಳ್ಳಿ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕ ಮತ್ತು ಬಾಲಕಿ
ಬಳ್ಳಿ ಗ್ರಾಮದ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದರೆಂದು ಎಂದು ತಿಳಿದುಬಂದಿದೆ.
ಸಾವಿಗೆ ಶರಣಾದ ಈ ಅಪ್ರಾಪ್ತರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅಪ್ರಾಪ್ತರಿಬ್ಬರು ಬೇರೆ ಬೇರೆ ಧರ್ಮವರೆನ್ನಲಾಗಿದೆ.
ಇದನ್ನು ಓದಿ : Video : ಹಳಿಗಳ ಮೇಲೆಯೇ ಕಸ ಚೆಲ್ಲಿದ ರೈಲು ಸಿಬ್ಬಂದಿ ; ನೆಟ್ಟಿಗರಿಂದ ಕ್ಲಾಸ್.!
ಈ ಇಬ್ಬರ ಪ್ರೀತಿ ವಿಚಾರ ತಮ್ಮ ತಮ್ಮ ಕುಟುಂಬದವರಿಗೆ ತಿಳಿಯಬಹುದೆಂಬ ಆತಂಕಕ್ಕೆ ಒಳಗಾಗಿದ್ದರು.
ಪರಿಣಾಮ ಈ ಅಪ್ರಾಪ್ತರಿಬ್ಬರೂ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನು ಓದಿ : Astrology : ಮಾರ್ಚ್ 08ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Recent Comments