ಬೆಂಗಳೂರು : ಬೆಂಗಳೂರಿನ ಕೆ. ಆರ್. ಪುರ ಠಾಣೆಯಲ್ಲಿ ಮಗನ ಪ್ರೀತಿಯ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ತಾಯಿಗೆ ಮಗ ಕಪಾಳಕ್ಕೆ ಬಾರಿಸಿದ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಂಗಳಮ್ಮ ಎಂಬುವವರ ಕಪಾಳಕ್ಕೆ ರಾಮಮೂರ್ತಿ ನಗರ ಠಾಣೆಯ ಪಿಎಸ್‌ಐ ಮಂಜುನಾಥ್ ಅವರು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ : ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣ : ಕಾನೂನು ಕಾಲೇಜು ಉಪಪ್ರಾಂಶುಪಾಲರು ಸೇರಿ ಮೂವರ ಬಂಧನ̤!
ಹಲ್ಲೆಗೊಳಗಾದ ಮಂಗಳಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪುತ್ರ ಮಂಜುನಾಥ್‌ಗೆ ಮದುವೆಯಾಗಿದೆ. ಆದರೆ ಕೆ .ಆರ್. ಪುರದ ಅಯ್ಯಪ್ಪನಗರ ಬಡಾವಣೆಯಲ್ಲಿ ನೆಲಸಿದ್ದ ಯುವತಿಯ ಜೊತೆಗೆ ಮಂಜುನಾಥ್ ಸಲುಗೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಇದನ್ನು ಓದಿ : ಮಹಾಕುಂಭ ಮೇಳ : ಮೈಸೂರು – ತುಂಡ್ಲಾ ನಡುವೆ ಬೆಳಗಾವಿ ಮೂಲಕ ವಿಶೇಷ ಎಕ್ಸ್‌ಪ್ರೆಸ್ ರೈಲು.!
ತಾಯಿ ಮಂಗಳಮ್ಮ ಮಗನಿಗೆ ಕಳೆದ ಒಂದು ವರ್ಷದಿಂದ ಬುದ್ಧಿಮಾತು ಹೇಳಿದರೂ ಕೇಳದೇ ಆಕೆಯ ಜತೆಗೆ ಸ್ನೇಹ ಮುಂದುವರೆಸಿದ್ದ. ಯುವತಿಗೂ ತಿಳಿಹೇಳಿದ್ದರೂ ಪ್ರಯೋಜನ ಆಗಿರಲಿಲ್ಲ.
ಬಳಿಕ ಯುವತಿಯ ಮನೆಗೆ ಪುತ್ರಿಯರನ್ನು ಕರೆದುಕೊಂಡು ಸಬ್ ಇನ್ಸ್‌ಪೆಕ್ಟರ್ ಅವರ ತಾಯಿ ಹೋಗಿದ್ದರು. ಅಲ್ಲಿ ಆಕೆಗೆ ಬುದ್ಧಿಮಾತು ಹೇಳಿದರೂ ಕೇಳದೆ ಆ ಯುವತಿ ಗಲಾಟೆ ಮಾಡಿದಳು.
ಇದನ್ನು ಓದಿ : ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯ ಕೊಲೆಗೆ ಯತ್ನ : ಬೆಚ್ಚಿಬೀಳಿಸುವ Video ವೈರಲ್.!
ಬಳಿಕ ಅಲ್ಲಿಗೆ ಬಂದ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ತನ್ನ ತಾಯಿಯ ಕಪಾಳಕ್ಕೆ ಹೊಡೆದರು. ಅಲ್ಲದೇ ಸಹೋದರಿಯರ ಮೇಲೂ ಹಲ್ಲೆ ಮಾಡಿದ ಎಂದು ಮಂಗಳಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಕೆ. ಆರ್. ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Recent Comments