Wednesday, March 12, 2025
Google search engine
HomeBelagavi Newsಕಂಡಕ್ಟರ್‌ಗೆ ಥಳಿಸಿದ ಪ್ರಕರಣ : ಆರೋಪಿಗಳು 14 ದಿನಗಳ ಕಾಲ ಹಿಂಡಲಗಾ ಜೈಲಿಗೆ.!
spot_img
spot_img
spot_img
spot_img
spot_img

ಕಂಡಕ್ಟರ್‌ಗೆ ಥಳಿಸಿದ ಪ್ರಕರಣ : ಆರೋಪಿಗಳು 14 ದಿನಗಳ ಕಾಲ ಹಿಂಡಲಗಾ ಜೈಲಿಗೆ.!

ಬೆಳಗಾವಿ : ಬಸ್ಸಿನಲ್ಲಿ ತೆರಳುವಾಗ ಟಿಕೆಟ್ ಸಂಬಂಧ ನಡೆದ ಗಲಾಟೆಗೆ ವೇಳೆ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಕಂಡಕ್ಟರಿಗೆ ಥಳಿಸಿದ ಪ್ರಕರಣದ ಆರೋಪಿಗಳು ಇದೀಗ ಹಿಂಡಲಗಾ ಜೈಲುಪಾಲು ಆಗಿದ್ದಾರೆ.

ಈ ಸಂಬಂಧ ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಬಾಳೇಕುಂದ್ರಿ ಕೆ.ಎಚ್.ಗ್ರಾಮದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಂಡಕ್ಟರ್ ಜೊತೆ ವ್ಯಕ್ತಿಯೊಬ್ಬ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದಲ್ಲದೆ ನಂತರ ಜನರನ್ನು ಸೇರಿಸಿ ಹಲ್ಲೆಗೈದಿದ್ದ.

ಹಿನ್ನಲೇ : ಮರಾಠಿಯಲ್ಲಿ ಮಾತನಾಡಲು ನನಗೆ ಬರುವುದಿಲ್ಲ, ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಜನರನ್ನು ಕರೆಸಿ ಕಂಡಕ್ಟ‌ರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಸುಳೇಬಾವಿ – ಬಾಳೇಕುಂದ್ರಿ ಗ್ರಾಮದ ಮಧ್ಯೆ ನಿನ್ನೆ ದಿ. 21 ರಂದು ಗಲಾಟೆ ನಡೆದಿತ್ತು.

ಬೆಳಗಾವಿಯ ಮಾರಿಹಾಳ ಪೊಲೀಸ್‌ ಠಾಣೆ (Marihal Police Station, Belagavi) ವ್ಯಾಪ್ತಿಯಲ್ಲಿ KSRTC ಬಸ್ ಕಂಡಕ್ಟರ್ ಮಹದೇವ ಹಲ್ಲೆಗೊಳಗಾಗಿದ್ದರು. ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ (He is being treated at BIMS Hospital, Belagavi).

ಹುಡುಗಿಯೊಬ್ಬಳು ಹುಡುಗನ ಜತೆ ಕುಳಿತಿದ್ದು, ಎರಡು ಟಿಕೆಟ್ ಕೇಳಿದ್ದರು. ಫ್ರೀ ಟಿಕೆಟ್ ಮಹಿಳೆಯರಿಗೆ ಮಾತ್ರ, ಹುಡುಗನಿಗೆ ಟಿಕೆಟ್ ಕೊಡಿ ಎಂದು ಕಂಡಕ್ಟ‌ರ್ ಕೇಳಿದ್ದರು. ಆಗ ಮರಾಠಿಯಲ್ಲಿ ಏನೇನೋ ಮಾತನಾಡಿಕೊಂಡಿದ್ದರು ಎನ್ನಲಾಗಿದೆ.

ಆಗ ಕಂಡಕ್ಟರ್ ಮಹದೇವ್, ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಹೇಳಿ (I don’t know Marathi, tell me in Kannada) ಎಂದಿದ್ದಾರೆ. ಅವರ ಟಿಕೆಟ್ ಹಣ ನೀಡಿ, ನಿಮ್ಮಿಬ್ಬರಿಗೆ ಬೇರೆ ಬೇರೆ ಟಿಕೆಟ್ ಕೊಡುತ್ತೇನೆ ಎಂದಿದ್ದರು. ಇದಕ್ಕೆ ಕೋಪಗೊಂಡ ಯುವಕ ಜನರನ್ನು ಕರೆಯಿಸಿ, ಬಸ್‌ ತಡೆದು ಮಹದೇವ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು.

ಮಹದೇವ್‌ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್ (DCP Rohan Jagadish) ಅವರು ಆಸ್ಪತ್ರೆಗೆ ಭೇಟಿ ನೀಡಿ ಕಂಡಕ್ಟರ್ ಮಹದೇವ್‌ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!